»   » 'ಸ್ಪರ್ಶ' ರೇಖಾ ಜೊತೆ ಗಾಯಕ ರಾಜೇಶ್ ಕೃಷ್ಣನ್ ಮದುವೆ.? ರೇಖಾ ಕೊಟ್ಟ ಸ್ಪಷ್ಟನೆ.!

'ಸ್ಪರ್ಶ' ರೇಖಾ ಜೊತೆ ಗಾಯಕ ರಾಜೇಶ್ ಕೃಷ್ಣನ್ ಮದುವೆ.? ರೇಖಾ ಕೊಟ್ಟ ಸ್ಪಷ್ಟನೆ.!

Posted By:
Subscribe to Filmibeat Kannada
Sparsha Rekha

ಗಾಂಧಿನಗರದ ಗಲ್ಲಿಗಲ್ಲಿಗಳನ್ನ ಸುಮ್ಮನೆ ಒಂದು ರೌಂಡ್ ಹಾಕೊಂಡು ಬಂದ್ರೆ ಬೇಜಾನ್ ವಿಷಯಗಳು ಕಿವಿಗೆ ಬೀಳುತ್ತೆ. ಅವೆಲ್ಲ ನಿಜವೋ, ಸುಳ್ಳೋ... ತರ್ಕ ಆಮೇಲೆ. ಬೆಂಕಿ ಇಲ್ಲದೆ ಹೊಗೆ ಆಡಲ್ಲ ಅಂತಾರೆ. ಆದ್ರೆ, ಗಾಂಧಿನಗರದಲ್ಲಿ ತಲೆ ಬುಡವಿಲ್ಲದೆ ಗುಸು ಗುಸು ಕೇಳಿಬರುತ್ತೆ. ಅದೇ ಅಂತೆ-ಕಂತೆ ಪುರಾಣ ದೊಡ್ಡ ಸ್ವರೂಪ ಪಡೆದುಕೊಂಡು ಬ್ರೇಕಿಂಗ್ ನ್ಯೂಸ್ ಆಗುತ್ತೆ. ಸದ್ಯ ಗಾಯಕ ರಾಜೇಶ್ ಕೃಷ್ಣನ್ ಹಾಗೂ 'ಸ್ಪರ್ಶ' ರೇಖಾಗೆ ಆಗಿರುವುದು ಇದೇ.!

ಗಾಯಕ ರಾಜೇಶ್ ಕೃಷ್ಣನ್ ಹಾಗೂ 'ಸ್ಪರ್ಶ' ರೇಖಾ ಮದುವೆ ಆಗುತ್ತಾರೆ ಎಂಬ ಪಿಸು ಪಿಸು ಸುದ್ದಿ ಇಂದು 'ಬಿಗ್ ಬ್ರೇಕಿಂಗ್ ನ್ಯೂಸ್' ಆಗಿದೆ.

ಈಗಾಗಲೇ ಮೂರು ಮದುವೆ ಆಗಿ ವಿಚ್ಛೇದನ ಪಡೆದಿರುವ ಗಾಯಕ ರಾಜೇಶ್ ಕೃಷ್ಣನ್ ಈಗ ನಾಲ್ಕನೇ ಮದುವೆಗೆ ಸಿದ್ಧತೆ ನಡೆಸಿದ್ದಾರಾ.? ರಾಜೇಶ್ ಕೃಷ್ಣನ್ ರವರನ್ನ ನಟಿ ರೇಖಾ ವಿವಾಹ ಆಗ್ತಾರಾ.? ಈ ಬಗ್ಗೆ ಸ್ವತಃ ನಟಿ ರೇಖಾ 'ಫಿಲ್ಮಿಬೀಟ್ ಕನ್ನಡ'ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿರಿ...

ಗಾಂಧಿನಗರದಲ್ಲಿ ಕೇಳಿ ಬಂದ ಗುಸು ಗುಸು ಏನು.?

'ಸ್ಪರ್ಶ' ಖ್ಯಾತಿಯ ನಟಿ ರೇಖಾ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಮದುವೆ ಆಗುವ ಮನಸ್ಸು ಮಾಡಿದ್ದಾರಂತೆ ಎಂಬ ಗುಸು ಗುಸು ಕಳೆದ ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಕೇಳಿಬರುತ್ತಲೇ ಇತ್ತು.

ಹೊಸ ಮನೆ ಹುಡುಕುತ್ತಿದ್ದರಂತೆ.!

ಮದುವೆ ಆದ್ಮೇಲೆ ಜೊತೆಗಿರಲು ನಟಿ ರೇಖಾ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಹೊಸ ಮನೆಯ ಹುಡುಕಾಟದಲ್ಲಿದ್ದಾರಂತೆ ಎಂಬ ಅಂತೆ-ಕಂತೆಯೂ ಸ್ಯಾಂಡಲ್ ವುಡ್ ಮಂದಿಯ ಕಿವಿಗೆ ಬಿದ್ದಿತ್ತು.

ಇದೆಲ್ಲ ಸುಳ್ಳು ಸುದ್ದಿ ಎಂದ ರೇಖಾ.!

ಇಷ್ಟು ದಿನ ಗುಸು ಗುಸು ಆಗಿ ಕೇಳಿ ಬರುತ್ತಿದ್ದ ಈ ಸುದ್ದಿ ಇಂದು ಬ್ರೇಕಿಂಗ್ ನ್ಯೂಸ್ ಆದ್ಮೇಲೆ 'ಸ್ಪರ್ಶ' ರೇಖಾ ಸ್ಪಷ್ಟನೆ ನೀಡಿದ್ದಾರೆ. ''ಇದೆಲ್ಲ ಸುಳ್ಳು ಸುದ್ದಿ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ನಾನು ಹಾಗೂ ರಾಜೇಶ್ ಕೃಷ್ಣನ್ ಒಳ್ಳೆಯ ಫ್ರೆಂಡ್ಸ್ ಅಷ್ಟೆ. ಯಾರು ಯಾಕೆ ಹೀಗೆ ಸುದ್ದಿ ಹಬ್ಬಿಸುತ್ತಿದ್ದಾರೋ, ನನಗಂತೂ ಗೊತ್ತಿಲ್ಲ'' ಎಂದು 'ಫಿಲ್ಮಿಬೀಟ್ ಕನ್ನಡ'ಗೆ ನಟಿ ರೇಖಾ ಸ್ಪಷ್ಟ ಪಡಿಸಿದರು.

ಅಲ್ಲಿಗೆ, ಒಂದಂತೂ ಸ್ಪಷ್ಟ.!

ರಾಜೇಶ್ ಕೃಷ್ಣನ್ ಹಾಗೂ ರೇಖಾ ಉತ್ತಮ ಫ್ರೆಂಡ್ಸ್ ಅನ್ನೋದು ರೇಖಾ ಮಾತುಗಳಲ್ಲೇ ಸ್ಪಷ್ಟ. 'ಮದುವೆಯ ಸುದ್ದಿ ಶುದ್ಧ ಸುಳ್ಳು' ಎಂದು ನಟಿ ರೇಖಾ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ. ಅಲ್ಲಿಗೆ, ಇದು ಯಾರೋ ಜಸ್ಟ್ ಯಾರೋ ಹಬ್ಬಿಸಿರುವ ಸುಳ್ಳು ಸುದ್ದಿ ಅಷ್ಟೆ ಎಂಬುದು ಪಕ್ಕಾ.

'ಬಿಗ್ ಬಾಸ್' ಮನೆಯಲ್ಲಿ ರೇಖಾ

'ಸ್ಪರ್ಶ' ಹಾಗೂ 'ಮೆಜೆಸ್ಟಿಕ್' ಚಿತ್ರಗಳಲ್ಲಿ ಅಭಿನಯಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಖಾ ಗಾಂಧಿನಗರದಿಂದ ಸ್ವಲ್ಪ ದೂರವೇ ಉಳಿದಿದ್ದರು. 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಯಾದ್ಮೇಲೆ ರೇಖಾ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡತೊಡಗಿದರು. 'ಬಿಗ್ ಬಾಸ್' ಶೋನಲ್ಲಿ ಕ್ಲಾಸ್ ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ರೇಖಾ ಎರಡನೇ ರನ್ನರ್ ಅಪ್ ಆದರು.

'ಶ್ರೀಕಂಠ' ಸಿನಿಮಾದಲ್ಲಿ ಅಭಿನಯಿಸಿದ್ದ ರೇಖಾ

'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೆ 'ಶ್ರೀಕಂಠ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ರೇಖಾ ಇದೀಗ ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗಿದ್ದಾರೆ.

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರೇಖಾ-ರಾಜೇಶ್

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ 'ಸ್ಪರ್ಶ' ರೇಖಾ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಅತಿಥಿಗಳಾಗಿ ಒಟ್ಟಿಗೆ ಆಗಮಿಸಿ ತಮ್ಮ ಗೆಳೆತನದ ಬಗ್ಗೆ ಮಾತನಾಡಿದ್ದರು.

ಮೂರು ಮದುವೆ-ವಿಚ್ಛೇದನ

ಈಗಾಗಲೇ ಗಾಯಕಿ ಸೌಮ್ಯ ರಾವ್, ಹರಿಪ್ರಿಯಾ, ಗಾಯಕಿ ರಮ್ಯಾ ವಸಿಷ್ಠ ಜೊತೆ ವಿವಾಹವಾಗಿ ವಿಚ್ಛೇದನ ಪಡೆದಿದ್ದಾರೆ ಗಾಯಕ ರಾಜೇಶ್ ಕೃಷ್ಣನ್.

English summary
''Rajesh Krishnan and I are just friends. We are not marrying. It is a fake news'' clarifies Kannada Actress Rekha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada