ಅಂದು ನಾಲಿಗೆ ಸತ್ತಿತ್ತಾ.? #ಮೀಟೂ 'ನಟಿ'ಯರಿಗೆ ರೇಖಾ ರಾಣಿ ಖಡಕ್ ಪ್ರಶ್ನೆ.!
ಹೆಣ್ಮಕ್ಕಳು ಅನುಭವಿಸಿದ್ದ ಕರಾಳ ಅನುಭವವನ್ನು ಹೊರಹಾಕಲು ಒಂದೊಳ್ಳೆ ವೇದಿಕೆ ಆಗಿದ್ದ #ಮೀಟೂ ಅಭಿಯಾನಕ್ಕೆ ಸದ್ಯ 'ಪಬ್ಲಿಸಿಟಿ'ಯ ಕಾರ್ಮೋಡ ಆವರಿಸಿದೆ. ನಟಿಯರು #ಮೀಟೂ ವೇದಿಕೆಯನ್ನ 'ಪಬ್ಲಿಸಿಟಿ'ಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
''#ಮೀಟೂ ಹಿಂದೆ ಬೇರೆಯದ್ದೇ ಉದ್ದೇಶ ಇದೆ'' ಎಂದು ವ್ಯಾಖ್ಯಾನ ಮಾಡುವವರೂ ಇದ್ದಾರೆ. ಹೀಗಿರುವಾಗಲೇ ಕನ್ನಡ ಚಿತ್ರರಂಗದಲ್ಲಿ #ಮೀಟೂ #ಮೀಟೂ ಎನ್ನುತ್ತಿರುವ 'ನಟಿ'ಯರ ಕುರಿತು ಹಿರಿಯ ಪತ್ರಕರ್ತೆ, ನಿರ್ಮಾಪಕಿ, ಅಶೋಕ್ ಕಶ್ಯಪ್ ಪತ್ನಿ ರೇಖಾ ರಾಣಿ ಗುಡುಗಿದ್ದಾರೆ.
''ಇಂದು ಧೈರ್ಯ ಇರುವವರಿಗೆ ಅಂದು ನಾಲಿಗೆ ಸತ್ತಿತ್ತಾ? ಕಾಲಲ್ಲಿ ಚಪ್ಪಲಿ ಇರಲಿಲ್ಲವಾ? ಪೊಲೀಸ್ ಸ್ಟೇಷನ್ ಕಾಣಿಸಲಿಲ್ಲವಾ? ತಮ್ಮದೇ ಸಂಘ ಸಂಸ್ಥೆಗಳು ಕಾಣಲಿಲ್ಲವಾ?'' ಎಂದು ರೇಖಾ ರಾಣಿ ಖಡಕ್ ಆಗಿ ಪ್ರಶ್ನಿಸಿದ್ದಾರೆ. ಮುಂದೆ ಓದಿರಿ....

ಪಬ್ಲಿಸಿಟಿಗಾಗಿ ಹಾತೊರೆಯುವುದು ಯಾಕೆ.?
''ಅದೆಷ್ಟು ಹಿಡನ್ ಅಜೆಂಡಾಗಳು. ಸಿನೆಮಾ ಇಂಡಸ್ಟ್ರಿಯಿರಲಿ ಮತ್ಯಾವುದೇ ಇರಲಿ...ಜನ ಪಬ್ಲಿಸಿಟಿಗಾಗಿ ಯಾಕೆ ಇಷ್ಟೊಂದು ಹಾತೊರೆಯುತ್ತಾರೋ ಗೊತ್ತಿಲ್ಲ. ಅನ್ಯಾಯ ಮಾಡಿದವರೊಡನೆ ಒಂದಷ್ಟು ಕಾಲ ನಗುನಗುತ್ತಾ ಹೆಜ್ಜೆಹಾಕಿ ನಂತರ ದಿಢೀರನೆ ಅವರಿಂದ ಅನ್ಯಾಯವಾಯಿತೆಂದರೆ...ಎರಡರಲ್ಲಿ ಯಾವುದು ನಾಟಕ? ನಟನೆ ಮಾಡುತ್ತಿರುವುದು ಪರದೆಯ ಮೇಲೋ? ಹಿಂದೆಯೊ?'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ರೇಖಾ ರಾಣಿ.

ಅಂದು ನಾಲಿಗೆ ಸತ್ತಿತ್ತಾ.?
''ಇಷ್ಟೆಲ್ಲಾ ಧೈರ್ಯ ಇರುವವರಿಗೆ ಅಂದು ನಾಲಿಗೆ ಸತ್ತಿತ್ತಾ? ಕಾಲಲ್ಲಿ ಚಪ್ಪಲಿ ಇರಲಿಲ್ಲವಾ? ಪೋಲಿಸ್ ಸ್ಟೇಷನ್ ಕಾಣಿಸಲಿಲ್ಲವಾ? ತಮ್ಮದೇ ಸಂಘ ಸಂಸ್ಥೆಗಳು ಕಾಣಲಿಲ್ಲವಾ? ಹಿರಿಯರು, ಮಾರ್ಗದರ್ಶಕರು ಕಾಣಲಿಲ್ಲವಾ? ಇಂದು ಏಕಾಏಕಿ ಮೀಡಿಯಾ ಮುಂದೆ ನಿಂತು ಗಂಟಲು ಹರಿದುಕೊಳ್ಳುವುದೆಂದರೆ ಇದು ಪಬ್ಲಿಸಿಟಿಗಾಗಿ ಅಥವಾ ದ್ವೇಷಕ್ಕಾಗಿ ಅಂತ ನನಗನ್ನಿಸುತ್ತೆ'' ಎಂದಿದ್ದಾರೆ ರೇಖಾ ರಾಣಿ

ಈ ಅಭಿಯಾನ ಸತ್ತು ಹೋಯ್ತು
''ಒಟ್ನಲ್ಲಿ ಯಾರ್ಯಾರದ್ದೋ ತೆವಲಿಗೆ ಒಳ್ಳೆಯ ಸಂಚಲನ ಉಂಟುಮಾಡಿ ನ್ಯಾಯ ದೊರಕಿಸಬೇಕಿದ್ದ ಈ ಅಭಿಯಾನ ಸತ್ತು ಹೋಯ್ತು.
ಯಾವುದೇ ಪೂರ್ವತಯಾರಿ, ಸಿದ್ಧತೆ ಮಾಡಿಕೊಳ್ಳದೆ #MeToo ಅಭಿಯಾನ ಕೈಗೊಂಡರೆ ಹೀಗೇ ಆಗೋದು'' ಎಂದು ತಮ್ಮ ಅಭಿಪ್ರಾಯವನ್ನ ರೇಖಾ ರಾಣಿ ವ್ಯಕ್ತಪಡಿಸಿದ್ದಾರೆ.
'ಫೈರ್'ಗೆ ಗುಡ್ ಬೈ ಹೇಳಿದ್ದರು ರೇಖಾ ರಾಣಿ
'ಫೈರ್' ಎಂಬ ಸಂಸ್ಥೆ ಹುಟ್ಟುಹಾಕುವಲ್ಲಿ ನಟ ಚೇತನ್ ಹಾಗೂ ಪ್ರಿಯಾಂಕಾ ಉಪೇಂದ್ರ ಅವರಿಗೆ ಕೈ ಜೋಡಿಸಿದ್ದವರು ರೇಖಾ ರಾಣಿ. ಫೈರ್/ಐಸಿಸಿಗೆ ದೂರು ಕೊಡದೆ ಶ್ರುತಿ ಹರಿಹರನ್ ಏಕಾಏಕಿ ಪ್ರೆಸ್ ಮೀಟ್ ಮಾಡಿ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ ಕಾರಣ ಪ್ರಿಯಾಂಕಾ ಉಪೇಂದ್ರ, ರೇಖಾ ರಾಣಿ ಸೇರಿದಂತೆ ಹಲವರು 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ್ದಾರೆ.


Click it and Unblock the Notifications











