ಐದಡಿ ಆರಿಂಚಿನ ಈ ಹುಡುಗಿ ಚಿತ್ರರಂಗದಲ್ಲಿ ಇನ್ನೂ ಎತ್ತರ ಎತ್ತರ ಬೆಳೆಯಲಿ

By Super

ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಈಕೆ ಬಿಬಿಎಂ ವಿದ್ಯಾರ್ಥಿನಿ. ಓದಬೇಕು, ಓದಿ ಡಿಗ್ರಿ ಪಡೆಯಬೇಕು ಎಂದು ಎಂದು ಈಕೆ ಸೇರಿದ್ದು ಕಾಲೇಜು. ಈಗ ಡಿಗ್ರಿ ಪಡೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಕಾರಣ ಈಕೆ ಕನ್ನಡ ಚಿತ್ರರಂಗಕ್ಕೆ ಧುಮುಕಿದ್ದಾರೆ.

ಏನು ಚಿತ್ರರಂಗಕ್ಕೆ ಬಂದವರು ಡಿಗ್ರಿ ಪಡೆಯುವುದಿಲ್ಲವೇ ಎಂದು ಪ್ರಶ್ನಿಸಬೇಡಿ. ಚಿತ್ರರಂಗದಲ್ಲಿ ಮಿಂಚಿದ ನಂತರವೂ ಡಾಕ್ಟರೆಟ್‌ ಪಡೆದವರಿದ್ದಾರೆ. 'ಎ" ಚಿತ್ರದಿಂದ ಭಾರಿ ಸುದ್ದಿ ಮಾಡಿದ ಚೆಂದದ ಹುಡುಗಿ ಚಾಂದಿನಿ ಮೈಸೂರು ವಿವಿಯಿಂದ ಡಾಕ್ಟರೆಟ್‌ ಪಡೆದದ್ದು ನಿಮಗೂ ಗೊತ್ತಿದೆ.

ಆದರೆ ಮೊನ್ನೆ ಬಿಬಿಎಂ ಓದುತ್ತಿರುವ ಈ ಸುದ್ದಿಯ ನಾಯಕಿ ಮಾತ್ರ ನಿಮಗೆ ಸಿನಿಮಾ ಮುಖ್ಯವೋ? ಓದು ಮುಖ್ಯವೋ ಎಂಬ ಸಿನಿಮಾ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಕನಿಷ್ಠ ಒಂದು ಡಿಗ್ರಿಯಾದರೂ ಇರಬೇಕು ಅನ್ನಿಸತ್ತೆ ಎಂದಷ್ಟೆ ಹೇಳಿದರೇ ವಿನಾ ಅವರ ಧ್ವನಿಯಲ್ಲಿ ಡಿಗ್ರಿ ಮುಗಿಸೇ ತೀರುತ್ತೇನೆ ಎನ್ನುವ ಛಲವಂತೂ ಕಂಡು ಬರಲಿಲ್ಲ.

ಹೌದು ನಾವು ಇಷ್ಟೆಲ್ಲಾ ಹೇಳುತ್ತಿರುವುದು ಯಾರ ಬಗ್ಗೆ ಎಂದು ನಿಮಗೆ ಗೊತ್ತಾಗಿದ್ದರೆ ಸಂತೋಷ. ಇಲ್ಲವಾದರೆ ಇನ್ನೂ ಕೊಂಚ ಹೊತ್ತು ನಿಮ್ಮ ಕುತೂಹಲ ಕೆರಳಿಸುವ ಆಸೆ ನಮ್ಮದು.

ಅಂದಹಾಗೆ ಈ ಹುಡುಗಿ ಬಹು ಸುಂದರಿ. ಕಮಲದಂತಹ ಕಣ್ಣುಗಳು, ಸಂಪಿಗೆಯ ಮೂಗು, ದಾಳಿಂಬೆಯಂತಹ ದಂತಪಂಕ್ತಿ, ಮಧುರವಾದ ತುಟಿಗಳು, ಮುದ್ದಾದ ಮೈಕಟ್ಟು, ನೀಳ ಕೇಶದ ಜತೆಜತೆಗೇ ನೀಳಕಾಯ, ಎತ್ತರದ ನಿಲವು, ಅರಳುವ ಮುಖಭಾವದ ಈಕೆ ಓದಿನ ರೇಖೆಯ ದಾಟಿ ಕಳೆದ ವಾರ ಬಿಡುಗಡೆಯಾದ ಕನ್ನಡದ ಚಿತ್ರವೊಂದರಲ್ಲಿ ನಾಯಕಿಯಾಗಿ ರಜತ ಪರದೆಯನ್ನು ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಆದರೂ ಈ ನವನಟಿ ತಮ್ಮ ಅಭಿನಯದಿಂದ ಹಾಗೂ ಸೌಂದರ್ಯದಿಂದ ಚಿತ್ರ ರಸಿಕರನ್ನು ಆಕರ್ಷಿಸುವಲ್ಲಿ ಸಮರ್ಥರಾಗಿದ್ದಾರೆ. ಈಕೆ ಯಾರೆಂದು ಈಗ ತಿಳಿಯಿತಲ್ಲ.

ಇಲ್ಲವೇ ಹಾಗಾದರೆ ಇನ್ನೂ ಒಂದೆರಡು ಕ್ಲೂ ಕೊಡೋಣ. ಈಕೆ ಒಳ್ಳೆ ಕ್ರೀಡಾಪಟು. ಸತತ ವ್ಯಾಯಾಮದಿಂದಲೇ ಸಪೂರ ಮೈಕಟ್ಟನ್ನು ಮೈಂಟೇನ್‌ ಮಾಡಿದ್ದಾರೆ. ಕಳೆದ ವಾರ ಬಿಡುಗಡೆಯಾದ ಚಿತ್ರವೇ ಈಕೆಯ ಮೊದಲ ಚಿತ್ರ. ಇದರಲ್ಲಿ ಈಕೆ ನುರಿತ ಕಲಾವಿದೆಯಂತೆ ನಟಿಸಿದ್ದಾರೆ. ಈ ಹಿಂದೆ ಮಿಸ್‌ ಬೆಂಗಳೂರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಈಕೆ, ಮಾಡಲಿಂಗ್‌ ಕೂಡ ಮಾಡಿದ್ದರಿಂದ ಕ್ಯಾಮರಾ ಫಿಯರ್‌ ಇಲ್ಲದೆ ನಟಿಸಿದ್ದಾರೆ.

ಎಲ್ಲವನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಈಕೆ, ಬೆಟ್ಟ ಹತ್ತುವ ಚತುರೆಯಂತೆ. ಚಾರಣ ಎಂದರೆ ಈಕೆಗೆ ಬಲು ಪ್ರೀತಿ. ಬೆಟ್ಟ ಹತ್ತುವುದು ಈಕೆಗೆ ನೀರು ಕುಡಿದಷ್ಟೇ ಸರಳ. ಮೌಂಟನೇರಿಂಗ್‌ ಜತೆಗೆ ರೋವಿಂಗ್‌ನಲ್ಲೂ ಈಕೆ ಎಕ್ಸ್‌ಪರ್ಟ್‌ ಅಂತೆ. ಇವರ ಮೊದಲ ಚಿತ್ರದಲ್ಲಿ ಈ ಸಾಹಸ ಪ್ರದರ್ಶಿಸುವ ಅವಕಾಶ ಇವರಿಗೆ ಸಿಕ್ಕಿಲ್ಲ ಬಿಡಿ. ಈ ಚಿತ್ರ ಬಾಕ್ಸ್‌ ಆಫೀಸಲ್ಲಿ ಹಿಟ್‌ ಆದರೆ, ಈಕೆಯ ಭವಿಷ್ಯ ಉಜ್ವಲವಾದೀತು. ಈಕೆಯ ಸಹಪಾಠಿಗಳೆಲ್ಲ ಚಿತ್ರ ನೋಡಿ ಇವರ ಅಭಿನಯ ಮೆಚ್ಚಿಕೊಂಡಿದ್ದಾರೆ.

ಅಂದಹಾಗೆ ಇವರು ನಟಿಸಿರುವ ಚಿತ್ರದ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಭಾರಿ ಪವಾಡಗಳನ್ನೇ ಮಾಡಿದವರು. ಈಗ ನಿಮಗೆ ಖಂಡಿತಾ ಗೊತ್ತಾಗಿರ ಬೇಕು ಈಕೆ ಯಾರೆಂದು. ಗೊತ್ತಿಲ್ಲವೇ ಹೇಳೆ ಬಿಡುತ್ತೇವೆ. ಈಕೆಯ ಹೆಸರು ರೇಖಾ. ಸರಳ ರೇಖೆಯಂತೆ ಕಾಣುವ ಈಕೆ ತರ್ಕ, ಉತ್ಕರ್ಷ, ನಿಷ್ಕರ್ಷ ಖ್ಯಾತಿಯ ಸುನಿಲ್‌ ಕುಮಾರ್‌ ದೇಸಾಯಿಯವರ ಬಹು ನಿರೀಕ್ಷೆಯ ಚಿತ್ರ " ಸ್ಪರ್ಶ "ದಲ್ಲಿ ನಾಯಕಿಯಾಗಿ ನಟಿಸಿದ ನವನಟಿ.

ಕನ್ನಡ ಚಿತ್ರರಂಗದಲ್ಲಿ ಬಲವಾಗಿ ತಳವೂರಲು ಬಯಸಿರುವ ಈ ನೀಳಕಾಯದ ಶ್ವೇತ ಸುಂದರಿಗೆ ದೇಸಾಯಿಯವರನ್ನು ಕಂಡರೆ ಅಪಾರ ಗೌರವ. ಪಿ.ಯು.ಸಿಯಲ್ಲಿ ಓದುತ್ತಿದ್ದ ತಮಗೆ ಸಿನಿಮಾದಲ್ಲಿ ಅದೂ ನಾಯಕಿಯ ಪಾತ್ರ ನೀಡಿ ಹೊಸ ಪ್ರತಿಭೆಯ ಪ್ರಕಾಶಕ್ಕೆ ಅವಕಾಶ ಕೊಟ್ಟ ದೇಸಾಯರಿಗೆ ಈಕೆ ತುಂಬು ಹೃದಯದಿಂದ ಕೃತಜ್ಞತೆ ಅರ್ಪಿಸುತ್ತಾರೆ. ವೇಣು ಅವರ ಪ್ರತಿಭೆಯ ಬಗ್ಗೆಯಂತೂ ಹೇಳುವಾಗ ಇವರು ಭಾವುಕರಾಗುತ್ತಾರೆ.
5 ಅಡಿ ಆರಿಂಚು ಇರುವ ಇರುವ ಈ ನಟಿ ಚಿತ್ರೋದ್ಯಮದಲ್ಲಿ ಇನ್ನೂ ಎತ್ತರ ಎತ್ತರ ಬೆಳೆಯಲಿ.

English summary
Guess this kannada actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X