For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಜೀವನದ ದಿಕ್ಕು ತೋರಿಸೋ 'ರೇಖೆ'

  |

  ಇತ್ತಿಚೆಗೆ ಕನ್ನಡದಲ್ಲಿ ಕಿರುಚಿತ್ರಗಳು ಸದ್ದಿಲ್ಲದೆ ಹೊಸ ಹೊಸ ಪ್ರಯೋಗ ಮಾಡುತ್ತಿವೆ. ಅದೇ ರೀತಿ ಯಾರೊ ನಮ್ಮನ್ನ ಗುರುತ್ತಿಸುತ್ತಾರೆ ಅಂತ ಕೈ ಕಟ್ಟಿ ಕಾದು ಕೂರೊ ಬದಲು ಕೈಲಾದ ಮಟ್ಟಿಕೆ ಕಲಾತ್ಮಕವಾಗಿ ಗುರುತಿಸಿಕೊಳ್ಳೊ ಪ್ರಯತ್ನ ಮಾಡಿದ್ದಾರೆ ಈ ಹೊಸ ಹುಡುಗರು.

  ಶಿವರಾಜ್ ಹಾಗೂ ಸಂಗಡಿಗರು ಈಗ 'ರೇಖೆ' ಎನ್ನುವಂತ ಒಂದು ಕಿರುಚಿತ್ರವನ್ನ ಮಾಡಿದ್ದಾರೆ. ಇದರ ಟ್ರೇಲರ್ ಜಂಕಾರ್ ಮ್ಯೂಸಿಕ್ ನಲ್ಲಿ ರಿಲೀಸ್ ಮಾಡಿದ್ದಾರೆ. ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ‌‌. ಟ್ರೈಲರ್ ಕುತೂಹಲ ಮೂಡಿಸುವುದರ ಜೊತೆಗೆ ಕ್ಯಾಮರಾ, ಸಾಹಿತ್ಯ, ಸಂಗೀತದಲ್ಲೂ ತಕ್ಕಮಟ್ಟಿಗೆ ಸೈ ಎನಿಸಿಕೊಂಡಿದ್ದಾರೆ.

  'ರೇಖೆ Life will take you in its own stream' ಎನ್ನುವ ಅಡಿ ಬರಹದೊಂದಿಗೆ ಜನರಮುಂದೆ ಬಂದಿದ್ದಾರೆ. ಒಬ್ಬ ಹಳ್ಳಿ ಹುಡುಗ ಪಟ್ಟಣಕ್ಕೆ ಬರಬೇಕಾದಂತ ಪರಿಸ್ಥಿತಿ ಬರುತ್ತದೆ. ಬಂದಾಗ ಒಂದು ಘಟನೆ ನೆಡೆಯುತ್ತದೆ. ಜೀವನ ಅನ್ನೊ ರೇಖೆ ಅವನಿಗೆ ಯಾವುದೆಲ್ಲ ದಾರಿ ತೊರಿಸುತ್ತದೆ, ಅಷ್ಟಕ್ಕು ಅವನು ಬೆಂಗಳೂರಿಗೆ ಯಾಕೆ ಬರ್ತಾನೆ ಬಂದು ಏನ್ ಮಾಡ್ತಾನೆ ಅನ್ನೋದೆ ಚಿತ್ರದ ಕಥೆ ಅಂತಾರೆ ನಿರ್ದೇಶಕರ ತಂಡ.

  ಟ್ರೈಲರ್ ನಲ್ಲಿ ವಿಭಿನ್ನ ಕ್ಯಾರೆಕ್ಟರ್ ಗಳ ಸುಳಿವು ನೀಡಿರುವ ಇವರು ಚಿತ್ರದಲ್ಲಿ ಏನ್ ಮಾಡಿದಾರೆ, ಕ್ವಾಲಿಟಿ ಹೇಗಿದೆ ಎಂಬುದನ್ನ ಕಾದು ನೋಡಬೇಕು.

  ಈ ಚಿತ್ರಕ್ಕೆ ವಿನೋದ್ ರವರು ಆಕ್ಸನ್ ಕಟ್ ಹೇಳಿದ್ದು ಶಿವರಾಜ್ ಡಿ ಎನ್ ಎಸ್ ರವರು ಆಸೋಶಿಯೇಟ್ ಆಗಿ ವರ್ಕ್ ಮಾಡಿದ್ದಾರೆ. ರಾಕೇಶ್ ಭಾರಧ್ವಾಜ್ ಗೆಳೆಯರ ಈ ಚಿತ್ರಕ್ಕೆ ಬಂಡವಾಳ ಹೂಡಿ ಸಹಕರಿಸಿದ್ದಾರೆ. ರಾಜಶೇಖರ ಬಂಡೆ ಎನ್ನುವ ಯುವ ಸಾಹಿತಿ ಯೊಬ್ಬರು ಗೀತ ರಚನೆ ಮಾಡಿದ್ದು, ವಿಜಯ್ ರಾಜ್ ಎಂಬುವವರು ಸಂಗೀತ ಸಂಯೋಜನೆ ಮಾಡಿದ್ದಾರೆ ಸಂಕಲನ ಸಾಯಿ ಸಂದೇಶ್ ಮಾಡಿದಾರೆ. ಗಜ ಶ್ರೀಧರ್ ಮೂರ್ತಿ ಕ್ಯಾಮರಾ ಹಿಡಿದಿದ್ದಾರೆ

  ಶಿವರಾಜ್ ಡಿ.ಎನ್.ಎಸ್, ಅರುಣ್ ಜಾನಕಿರಾಮ್, ಗುರುಪ್ರಸಾದ್, ಸಂಪ್ರತಿ ಆಳ್ವಾ, ಸಿದ್ದು ಕುಮಟಗಿ, ವಿಕ್ಕಿ ಚಿಕ್ಕಮಗಳೂರ್, ನಿಂಗರಾಜ್ ಬಿಜಾಪುರ್, ಹೇಮಂತ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

  English summary
  rekhe kannada short movie trailer out

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X