"ನಮ್ಮಿಬ್ಬರ ನಡುವೆ ಕೂಡ ಜಗಳ, ವಾಗ್ವಾದ ನಡೆಯುತ್ತಿರುತ್ತದೆ.. ಆದ್ರೆ": ರಾಧಿಕಾ ಪಂಡಿತ್

ಅಭಿಮಾನಿಗಳು 'ಟಾಕ್ಸಿಕ್‌' ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಸದ್ದಿಲ್ಲದೇ ಯಶ್ ಮುಂದಿನ ಸಿನಿಮಾಗಳ ಕೆಲಸಗಳು ನಡೀತಿದೆ. ಗೀತು ಮೋಹನ್‌ ದಾಸ್ ನಿರ್ದೇಶನದಲ್ಲಿ ಹೈವೋಲ್ಟೇಜ್ ಸಿನಿಮಾ ಮೂಡಿ ಬರಲಿದೆ. ಎಷ್ಟೇ ಬ್ಯುಸಿ ಇದ್ದರೂ ಯಶ್ ಫ್ಯಾಮಿಲಿಗೂ ಸಮಯ ಕೊಡುತ್ತಾರೆ.

ರಾಕಿಂಗ್ ಜೋಡಿಯ ಅನ್ಯೋನ್ಯತೆ, ಅನುಬಂಧ, ಪ್ರೀತಿ ಅಭಿಮಾನಿಗಳಿಗೂ ಪ್ರೇರಣೆ. ಯಶ್‌-ರಾಧಿಕಾ ಜೋಡಿ ಬಗ್ಗೆ ಅಭಿಮಾನಿಗಳು ಆಗಾಗ್ಗೆ ಮೆಚ್ಚುಗೆ ಸೂಚಿಸುತ್ತಿರುತ್ತಾರೆ. ಇಬ್ಬರ ಫೋಟೊಗಳಿಗೆ ಲೈಕ್ಸ್, ಕಾಮೆಂಟ್ಸ್ ಸುರಿಮಳೆ ಆಗುತ್ತದೆ. ರಾಧಿಕಾ ಪಂಡಿತ್ ತಮ್ಮ ಬಾಂಡಿಂಗ್ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.

Relationship tips Radhika Pandit on what makes a love and marriage work

ಯಶ್- ರಾಧಿಕಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಗೋವಾದಲ್ಲಿ ನಿಶ್ಚಿತಾರ್ಥ, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮದುವೆ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆ ಅಂತೆಲ್ಲಾ ಬಹಳ ಅದ್ಧೂರಿಯಾಗಿ ವಿವಾಹ ಮಹೋತ್ಸವ ನೆರವೇರಿತ್ತು. ಮಕ್ಕಳ ನಾಮಕರಣ, ಹುಟ್ಟುಹಬ್ಬ ಎಲ್ಲವೂ ಜೋರಾಗಿರುತ್ತದೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳನ್ನು ರಾಧಿಕಾ ಹಂಚಿಕೊಳ್ಳುತ್ತಾರೆ.

ಬಹಳ ದಿನಗಳ ಬಳಿಕ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳು ಜೊತೆ ಚಿಟ್‌ಚಾಟ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳಿಂದ ಇಂಟ್ರೆಸ್ಟಿಂಗ್ ಪ್ರಶ್ನೆಗಳು ಬಂದಿವೆ. ಅದಕ್ಕೆ ರಾಧಿಕಾ ಉತ್ತರಿಸಿದ್ದಾರೆ. ಯಾವುದೇ ಜಗಳ ಇಲ್ಲದೇ 10 ವರ್ಷಗಳಿಂದ ನಿಮ್ಮ ಪ್ರೀತಿ ಮುಂದುವರೆಸಿದ್ದೀರಾ? ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ರಾಧಿಕಾ ಹೇಳಿದ್ದು ಹೀಗೆ.

Relationship tips Radhika Pandit on what makes a love and marriage work

"ನಮ್ಮ ನಡುವೆ ಕೂಡ ಜಗಳ, ವಾಗ್ವಾದ ನಡೆಯುತ್ತಿರುತ್ತದೆ. ಅದು ಎಲ್ಲಾ ರಿಲೇಷನ್‌ಶಿಪ್‌ನಲ್ಲಿ ಕಾಮನ್ ಎಂದು ನನಗೆ ಅನ್ನಿಸುತ್ತದೆ. ಕೊನೆಯದಾಗಿ ಜಗಳವಲ್ಲ, ಅದನ್ನು ಹೇಗೆ ಪ್ಯಾಚ್‌ಅಪ್‌ ಮಾಡಿಕೊಳ್ಳುತ್ತೇವೆ ಎನ್ನುವುದು ನಿಮ್ಮನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ, ಗಟ್ಟಿಗೊಳಿಸುತ್ತದೆ. ಎಲ್ಲಾ ಮುಗಿದ ಮೇಲೆ ಈಗೋ/ಜಡ್ಜ್‌ಮೆಂಟ್‌ಗಳಿಗೆ ದಾಂಪತ್ಯ ಜೀವನದಲ್ಲಿ ಜಾಗ ಇರಬಾರದು ಅಲ್ಲವೇ?" ಎಂದು ರಾಧಿಕಾ ರಿಪ್ಲೇ ಮಾಡಿದ್ದಾರೆ.

ಗಂಡ ಹಾಗೂ ಹೆಂಡತಿ ಬಾಂಧವ್ಯ ಗಟ್ಟಿಯಾಗಿರಲು ಯಾವ ವಿಚಾರ ಬಹಳ ಮುಖ್ಯ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಅದಕ್ಕೆ "ಸ್ನೇಹ ಎಲ್ಲಾ ಬಾಂಧವ್ಯಗಳ ಬುನಾದಿ. ಅದು ಗಂಡ, ಹೆಂಡತಿ ಅಥವಾ ಪೋಷಕರೇ ಆಗಿರಲಿ, ಸ್ನೇಹ ಬಹಳ ಮುಖ್ಯ" ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

ರಾಧಿಕಾ ನಿಮ್ಮನ್ನು ನೋಡಿದರೆ ಬಹಳ ಖುಷಿಯಾಗುತ್ತದೆ. ಯಾವುದಾದರೂ ನಿಯಮಿತ ವ್ಯಾಯಾಮ ಮಾಡುತ್ತೀರಾ? ಎಂದು ಮತ್ತೊಬ್ಬರು ಕೇಳಿದ್ದಾರೆ. "ದೈಹಿಕವಾಗಿ ಕಾಣುವುದಕ್ಕೆ ಹೋಲಿಸಿದರೆ ಆರೋಗ್ಯ ಬಹಳ ಮುಖ್ಯ. ನಾವು ಹೇಗೆ ಕಾಣಿಸುತ್ತೇವೆ, ಫಿಟ್ ಆಗಿದ್ದೇವೆ ಮತ್ತು ಆರೋಗ್ಯಕ್ಕೆ ಕನಿಷ್ಠ 30 ನಿಮಿಷ ದೈಹಿಕ ಚಟುವಟಿಕೆ ಬೇಕು. ಅದು ವಾಕಿಂಗ್, ಜಿಮ್ ವರ್ಕೌಟ್, ಯಾವುದೇ ತರಹದ ಕ್ರೀಡೆ, ಯೋಗ ಅಥವಾ ಇಷ್ಟವಾಗಿದ್ದು ಯಾವುದಾರೂ ಸರಿ. ನಾನು ಪ್ರಕೃತಿ ನಡುವೆ ಉತ್ತಮ ವಾಕಿಂಗ್ ಇಷ್ಟಪಡುತ್ತೇನೆ" ಎಂದಿದ್ದಾರೆ.

ಮತ್ತೊಬ್ಬರು, "ನಿಮ್ಮ ವೈಟ್ ಗೋಲ್ಡ್ ರಿಂಗ್ ಫೋಟೋವನ್ನು ತೋರಿಸಿ" ಎಂದು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ರಾಧಿಕಾ, ರಿಂಗ್ ಧರಿಸಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. "ಈ ವೈಟ್ ಗೋಲ್ಡ್ ರಿಂಗ್‌ ನನಗೆ ತುಂಬ ಸ್ಪೆಷಲ್. ಯಾಕೆಂದರೆ, ಇದನ್ನು ನನ್ನ ಮೊದಲ ಸಂಪಾದನೆಯಲ್ಲಿ ನಾನು ತೆಗೆದುಕೊಂಡಿದ್ದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೆ ರಾಧಿಕಾ ಪಂಡಿತ್ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ. ಯಶ್- ರಾಧಿಕಾ ಮತ್ತೆ ಜೊತೆಯಾಗಿ ನಟಿಸಿದರೆ ಅಭಿಮಾನಿಗಳಿಗೆ ಹಬ್ಬವೇ ಸರಿ.

More from Filmibeat

English summary
Actress Radhika Pandit On Her Bond With Hubby actor Yash;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X