ನೇರ ಚಿತ್ರಗಳ ಮುಂದೆ ಮಕಾಡೆ ಮಲಗಿದ 'ರೀಮೇಕ್' ಚಿತ್ರಗಳು

By Bharath Kumar

ಪ್ರತಿವರ್ಷದಂತೆ ಈ ವರ್ಷವೂ ಕನ್ನಡದಲ್ಲಿ ರೀಮೇಕ್ ಸಿನಿಮಾಗಳು ಹೆಚ್ಚು ಸುದ್ದಿ ಮಾಡಿದ್ವು. ಆದ್ರೆ, ಬಿಡುಗಡೆಗೆ ಮುಂಚೆ ಸೌಂಡ್ ಮಾಡಿದ್ದ ಈ ಚಿತ್ರಗಳು ರಿಲೀಸ್ ಆದ್ಮೇಲೆ ಅದ್ಯಾಕೋ ಸೈಲಾಂಟ್ ಆಗಿ ಕಾಣೆಯಾದವು.

ರೀಮೇಕ್ ಸಿನಿಮಾಗಳಿಗೆ ಈ ವರ್ಷ ಚೆನ್ನಾಗಿರಲಿಲ್ಲ. ಅಲ್ಲೊಂದು ಇಲ್ಲೊಂದು ತಕ್ಕ ಮಟ್ಟಿಗೆ ಒಳ್ಳೆ ಸಿನಿಮಾ ಬಂದ್ರು, ಬಾಕ್ಸ ಆಫೀಸ್ ನಲ್ಲಿ ದುಡ್ಡು ಗಳಿಸಲೇ ಇಲ್ಲ.

ಹಾಗಿದ್ರೆ, ಈ ವರ್ಷ ತೆರೆಕಂಡ ರೀಮೇಕ್ ಸಿನಿಮಾಗಳು ಯಾವುದು? ಯಾವ ಚಿತ್ರಕ್ಕೆ ಪ್ರೇಕ್ಷಕರು ಚಪ್ಪಾಳೆ ಹೊಡೆದರು. ಯಾವ ಚಿತ್ರಕ್ಕೆ ಅಭಿಮಾನಿಗಳು ಕೈಕೊಟ್ರು ಎಂದು ತಿಳಿದುಕೊಳ್ಳಲು ಈ ಸ್ಟೋರಿ ಪೂರ್ತಿ ಓದಿ.....

ಜನ ಮೆಚ್ಚಿದ 'ಪುಷ್ಪಕ ವಿಮಾನ'

ಜನ ಮೆಚ್ಚಿದ 'ಪುಷ್ಪಕ ವಿಮಾನ'

ರಮೇಶ್ ಅರವಿಂದ್ ಮುಖ್ಯ ಪಾತ್ರದಲ್ಲಿ ಅಭಿನಯಸಿದ್ದ 'ಪುಷ್ಪಕ ವಿಮಾನ', ಕೊರಿಯನ್ ಭಾಷೆಯ 'ಮಿರಾಕಲ್ ಸೆಲ್ ನಂಬರ್ 7' ಚಿತ್ರದಿಂದ ಸ್ಪೂರ್ತಿ ಪಡೆದುಕೊಂಡಿರುವ ಸಿನಿಮಾ. ರಮೇಶ್ ಅವರ 100ನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

ರಾಜ್-ವಿಷ್ಣು

ರಾಜ್-ವಿಷ್ಣು

ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸಿದ್ದ 'ರಾಜ್-ವಿಷ್ಣು', ತಮಿಳಿನ 'ರಜನಿ ಮುರಗನ್' ಚಿತ್ರದ ರೀಮೇಕ್. ಟೈಟಲ್ ನಿಂದ ಮಾಡಿದ್ದ ಹವಾ, ಥಿಯೇಟರ್ ಗೆ ಬಂದ ಮೇಲೆ ಠುಸ್ ಆಗಿತ್ತು.

ಠುಸ್ 'ಪಟಾಕಿ'

ಠುಸ್ 'ಪಟಾಕಿ'

ತೆಲುಗಿನ 'ಪಟಾಸ್' ಚಿತ್ರದ ರೀಮೇಕ್, ಕನ್ನಡದಲ್ಲಿ 'ಪಟಾಕಿ' ಆಗಿ ತೆರೆಕಂಡಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಡೈಲಾಗ್ ಕಿಂಗ್ ಸಾಯಿ ಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಅಬ್ಬರಿಸಿ ಬಂದ 'ಪಟಾಕಿ' ಬಾಕ್ಸ್ ಅಫೀಸ್ ನಲ್ಲಿ ಠುಸ್ ಆಗಿತ್ತು.

'ಆಕೆ' ಕಂಡು ಓಕೆ ಅಂದ್ರು ಪ್ರೇಕ್ಷಕರು

'ಆಕೆ' ಕಂಡು ಓಕೆ ಅಂದ್ರು ಪ್ರೇಕ್ಷಕರು

ತಮಿಳಿನಲ್ಲಿ ನಯನತಾರ ಅಭಿನಯಿಸಿದ್ದ 'ಮಾಯ' ಚಿತ್ರದ ರೀಮೇಕ್, ಕನ್ನಡದಲ್ಲಿ 'ಆಕೆ'. ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ಅಭಿನಯಿಸಿದ್ದ ಈ ಚಿತ್ರಕ್ಕೆ ಪ್ರೇಕ್ಷಕರು ಓಕೆ ಅಂದಿದ್ರು. ಆದ್ರೆ, ಥಿಯೇಟರ್ ನಲ್ಲಿ ಇದ್ದಿದ್ದು ಮಾತ್ರ ಕೆಲವೇ ದಿನಗಳು.

ಮರಾಠಿಯ ಸೈರಾಟ್ 'ಮನಸು ಮಲ್ಲಿಗೆ'

ಮರಾಠಿಯ ಸೈರಾಟ್ 'ಮನಸು ಮಲ್ಲಿಗೆ'

ಮರಾಠಿಯಲ್ಲಿ ಬ್ಲ್ಯಾಕ್ ಬಸ್ಟರ್ ಬಾರಿಸಿದ್ದ 'ಸೈರಾಟ್' ಚಿತ್ರವನ್ನ ಕನ್ನಡದಲ್ಲಿ ಎಸ್ ನಾರಾಯಣ್ 'ಮನಸು ಮಲ್ಲಿಗೆ' ಎಂದು ರೀಮೇಕ್ ಮಾಡಿದರು. ಸಿನಿಮಾ ನೋಡಿದ ಚಿತ್ರಪ್ರೇಮಿಗಳು ಇದು ಇನ್ನೊಂದು 'ಚೆಲುವಿನ ಚಿತ್ತಾರ 'ಎಂದರೇ ಹೊರತು ಆ ಮಟ್ಟಿಗೆ ಹಿಟ್ ಅಂತೂ ಆಗಲೇ ಇಲ್ಲ. ಈ ಚಿತ್ರದಲ್ಲಿ ರಿಂಕು ರಾಜಗುರು ಮತ್ತು ನಿಶಾಂತ್ ನಾಯಕ, ನಾಯಕಿಯಾಗಿ ಅಭಿನಯಿಸಿದ್ದರು.

ಸತ್ಯ ಹರಿಶ್ಚಂದ್ರ

ಸತ್ಯ ಹರಿಶ್ಚಂದ್ರ

ಶರಣ್ ಅಭಿನಯಿಸಿದ್ದ ಕಾಮಿಡಿ ಎಂಟರ್ ಟೈನರ್ ಸಿನಿಮಾ 'ಸತ್ಯ ಹರಿಶ್ಚಂದ್ರ'. ಪಂಜಾಬಿ ಭಾಷೆಯ 'ಸಿಂಗ್ ವರ್ಸಸ್ ಕೌರ್' ಚಿತ್ರದ ರೀಮೇಕ್. ಎಷ್ಟು ವೇಗವಾಗಿ ಈ ಸಿನಿಮಾ ಬಂತೋ, ಅಷ್ಟೇ ವೇಗವಾಗಿ ಚಿತ್ರಮಂದಿರದಿಂದ ಹೊರಗೆ ಹೋಯ್ತು.

ಅನೂಪ್ 'ಪಂಟ'

ಅನೂಪ್ 'ಪಂಟ'

ತಮಿಳಿನ 'ರಾಜತಂಥೀರಮ್' ಚಿತ್ರದ ಕನ್ನಡ ರೀಮೇಕ್ 'ಪಂಟ'. ಎಸ್ ನಾಯಾರಣ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅನೂಪ್ ರೇವಣ್ಣ ನಾಯಕನಾಗಿ ಅಭಿನಯಿಸಿದ್ದರು.

ಉಪೇಂದ್ರ ಮತ್ತೆ ಬಾ

ಉಪೇಂದ್ರ ಮತ್ತೆ ಬಾ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರೇಮಾ ಹಲವು ವರ್ಷಗಳ ನಂತರ ಅಭಿನಯಿಸಿದ್ದ ಚಿತ್ರ 'ಉಪೇಂದ್ರ ಮತ್ತೆ ಬಾ'. ಆದ್ರೆ, ಪ್ರೇಕ್ಷಕರು ಮಾತ್ರ ಚಿತ್ರಮಂದಿರಕ್ಕೆ ಬಂದಿದ್ದು ಕಮ್ಮಿ. ಅಂದ್ಹಾಗೆ, ಇದು ತೆಲುಗಿನ 'ಸೋಗ್ಗಾಡೆ ಚಿನ್ನಿ ನಾಯಿನ' ಚಿತ್ರದ ಕನ್ನಡ ಅವತರಣಿಕೆ.

ಚೇತನ್ 'ಅತಿರಥ'

ಚೇತನ್ 'ಅತಿರಥ'

ತಮಿಳಿನ 'ಕಂಥೀರನ್' ಚಿತ್ರದ ಕನ್ನಡ ರೀಮೇಕ್ ಈ 'ಅತಿರಥ'. ಚೇತನ್ , ಲತಾ ಹೆಗಡೆ ಅಭಿನಯಿಸಿದ್ದ ಈ ಚಿತ್ರಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ

ಗೌಡ್ರು ಹೋಟೆಲ್

ಗೌಡ್ರು ಹೋಟೆಲ್

ಕನ್ನಡದ 'ಗೌಡ್ರು ಹೋಟೆಲ್' ಸಿನಿಮಾ ಮಲಯಾಳಂ ಭಾಷೆಯ 'ಉಸ್ತದ್ ಹೋಟೆಲ್' ಚಿತ್ರದ ರೀಮೇಕ್. ಪ್ರಕಾಶ್ ರೈ, ರಚನಾ ಚಂದ್ರ, ವೇದಿಕಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು.

ಆಡು ಆಟ ಆಡು

ಆಡು ಆಟ ಆಡು

ತಮಿಳಿನ 'ತಿರುಟ್ಟು ಪಯಲೇ' ಚಿತ್ರದ ರೀಮೇಕ್ ಕನ್ನಡ 'ಆಡೂ ಆಟ ಆಡು'. ಶ್ರುತಿ ಮರಾತೆ, ಬಿಜು ಮೆನನ್, ತಿಲಕ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದರು.

ಕಿಟ್ಟಿಯ 'ಸಿಲಿಕಾನ್ ಸಿಟಿ'

ಕಿಟ್ಟಿಯ 'ಸಿಲಿಕಾನ್ ಸಿಟಿ'

ತಮಿಳಿನ 'ಮೆಟ್ರೋ' ಚಿತ್ರದ ರೀಮೇಕ್ 'ಸಿಲಿಕಾನ್ ಸಿಟಿ'. ಶ್ರೀನಗರ ಕಿಟ್ಟಿ, ಸೂರಜ್ ಗೌಡ, ಕಾವ್ಯ ಶೆಟ್ಟಿ ಅಭಿನಯಿಸಿದ್ದ ಈ ಚಿತ್ರವನ್ನ ಮುರಳಿ ಗುರಪ್ಪ ನಿರ್ದೇಶನ ಮಾಡಿದ್ದರು.

ಮಲಯಾಳಂ ರೀಮೇಕ್ 'ಕಿಡಿ'

ಮಲಯಾಳಂ ರೀಮೇಕ್ 'ಕಿಡಿ'

ಮಲಯಾಳಂ ಭಾಷೆಯ 'ಕಲಿ' ಚಿತ್ರದ ಕನ್ನಡ ರೀಮೇಕ್ 'ಕಿಡಿ'. ಎಸ್ ರಘು ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಚಂದ್ರ, ಪಲ್ಲವಿ ಗೌಡ, ಉಗ್ರಂ ಮಂಜು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

More from Filmibeat

English summary
When compared to original movies, the official remake films have bad at sandalwood box office 2017.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X