twitter
    For Quick Alerts
    ALLOW NOTIFICATIONS  
    For Daily Alerts

    ಈ ವರ್ಷ ರೀಮೇಕ್ ಚಿತ್ರಗಳಿಗೆ ಸೋಲು, ಗೆದ್ದಿದ್ದು ಒಂದೆರೆಡು ಮಾತ್ರ.!

    |

    ಈ ವರ್ಷ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗ ಹೊಸ ದಾಖಲೆ ಬರೆದಿದೆ. ಸುಮಾರು 210ಕ್ಕೂ ಹೆಚ್ಚು ಸಿನಿಮಾಗಳು ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡಿದ್ದವು. ಇದರಲ್ಲಿ ರೀಮೇಕ್ ಚಿತ್ರಗಳು ಇವೆ.

    ಈ ವರ್ಷ ರಿಲೀಸ್ ಆದ ರೀಮೇಕ್ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ಅಲ್ಲೊಂದು ಇಲ್ಲೊಂದು ರೀಮೇಕ್ ಸಿನಿಮಾ ಬಂದರೂ ದೊಡ್ಡ ಯಶಸ್ಸು ಯಾವ ಚಿತ್ರಕ್ಕೂ ಸಿಕ್ಕಿಲ್ಲ. ಕಲೆಕ್ಷನ್ ನಲ್ಲೂ ಈ ಚಿತ್ರಗಳು ಕಮಾಲ್ ಮಾಡಿಲ್ಲ.

    ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ಚಿತ್ರಗಳು ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್-10 ಚಿತ್ರಗಳು

    ಆದ್ರೆ, ಕೆಲವು ಸಿನಿಮಾಗಳು ತಕ್ಕ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪರಭಾಷೆಯಿಂದ ಕನ್ನಡಕ್ಕೆ ತಂದ ಕೆಲವು ಚಿತ್ರಗಳನ್ನ ಕನ್ನಡಿಗರು ಒಪ್ಪಿಕೊಂಡರು. ಹಾಗಿದ್ರೆ, ಈ ವರ್ಷ ಬಂದ ರೀಮೇಕ್ ಚಿತ್ರಗಳು ಯಾವುದು? ಯಾವುದು ಪಾಸ್ , ಯಾವುದು ಫೇಲ್? ಮುಂದೆ ಓದಿ....

    ವರ್ಷದ ಆರಂಭವೇ ರೀಮೇಕ್

    ವರ್ಷದ ಆರಂಭವೇ ರೀಮೇಕ್

    2018ನೇ ವರ್ಷ ಆರಂಭವಾಗಿದ್ದೇ ರೀಮೇಕ್ ಚಿತ್ರದ ಮೂಲಕ. ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯದ ಬೃಹಸ್ಪತಿ ಸಿನಿಮಾ ಜನವರಿ ಮೊದಲ ವಾರವೇ ತೆರೆಕಂಡಿತ್ತು. ಆದ್ರೆ, ಬಂದ ವೇಗದಲ್ಲೇ ಈ ಸಿನಿಮಾ ಕಾಣೆಯಾಯಿತು. ಇದು ತಮಿಳು ವಿಐಪಿ ಚಿತ್ರದ ರೀಮೇಕ್.

    ಬೃಹಸ್ಪತಿ ವಿಮರ್ಶೆ: 'ಡೀಸೆಂಟ್ ಪೋಲಿ'ಯ ಡೀಸೆಂಟ್ ಸಿನಿಮಾ.!ಬೃಹಸ್ಪತಿ ವಿಮರ್ಶೆ: 'ಡೀಸೆಂಟ್ ಪೋಲಿ'ಯ ಡೀಸೆಂಟ್ ಸಿನಿಮಾ.!

    ಸಂಹಾರ ಮಾಡಿದ ಚಿರು

    ಸಂಹಾರ ಮಾಡಿದ ಚಿರು

    ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯಾ ನಟಿಸಿದ್ದ ಸಂಹಾರ ಸಿನಿಮಾ ತಮಿಳು ಅದೇ ಕಂಗಳ್ ಚಿತ್ರದ ರೀಮೇಕ್. ಗುರುದೇಶಪಾಂಡೆ ನಿರ್ದೇಶನ ಮಾಡಿದ್ದ ಈ ಚಿತ್ರ ತಕ್ಕ ಮಟ್ಟಿಗೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.

    ವಿಮರ್ಶೆ: 'ಕುರುಡು' ಪ್ರೀತಿ ತೋರಿ ದುಡ್ಡು ಪೀಕುವ ರಾಕ್ಷಸಿಯ 'ಸಂಹಾರ'ವಿಮರ್ಶೆ: 'ಕುರುಡು' ಪ್ರೀತಿ ತೋರಿ ದುಡ್ಡು ಪೀಕುವ ರಾಕ್ಷಸಿಯ 'ಸಂಹಾರ'

    ಹುಚ್ಚ 2 ಮತ್ತು ಧ್ವಜ

    ಹುಚ್ಚ 2 ಮತ್ತು ಧ್ವಜ

    ಮದರಂಗಿ ಖ್ಯಾತಿಯ ನಟ ಕೃಷ್ಣ ಮತ್ತು ಶ್ರಾವ್ಯ ರಾವ್ ಅಭಿನಯಿಸಿದ್ದ ಹುಚ್ಚ 2 ಸಿನಿಮಾ ತಮಿಳಿನ ರಾಮ್ ಚಿತ್ರದ ರೀಮೇಕ್. ಓಂ ಪ್ರಕಾಶ್ ರಾವ್ ಈ ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡದಲ್ಲಿ ಈ ಸಿನಿಮಾ ಅಷ್ಟಾಗಿ ಕ್ಲಿಕ್ ಆಗಿಲ್ಲ. ಇನ್ನು ಇದಾದ ಬಳಿಕ ಬಂದ ಧ್ವಜ ಸಿನಿಮಾ ತಮಿಳಿನ ಕೋಡಿ ಚಿತ್ರದ ರೀಮೇಕ್. ಪ್ರಿಯಾಮಣಿ, ರವಿಗೌಡ ಅಭಿನಯಿಸಿದ್ದರು. ಈ ಸಿನಿಮಾನೂ ಸದ್ದು ಮಾಡಿಲ್ಲ.

    ವಿಮರ್ಶೆ: 'ಧ್ವಜ' ಹಾರಾಟ, ಪ್ರೇಮಿಗಳ ನಡುವೆ ರಾಜಕೀಯ ಹೋರಾಟವಿಮರ್ಶೆ: 'ಧ್ವಜ' ಹಾರಾಟ, ಪ್ರೇಮಿಗಳ ನಡುವೆ ರಾಜಕೀಯ ಹೋರಾಟ

    ಅಮ್ಮ ಐ ಲವ್ ಯೂ

    ಅಮ್ಮ ಐ ಲವ್ ಯೂ

    ತಮಿಳಿನ ಪಿಚ್ಚೆಕಾರನ್ ಚಿತ್ರದ ಕನ್ನಡ ಅವತರಣಿಕೆ ಅಮ್ಮ ಐ ಲವ್ ಯೂ ತಕ್ಕ ಮಟ್ಟಿಗೆ ಯಶಸ್ಸು ಕಂಡಿತು. ಚಿರು ಸರ್ಜಾ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದರು. 50 ದಿನ ಪೂರೈಸಿದ ಈ ಸಿನಿಮಾ ಚಿರು ಸರ್ಜಾಗೆ ಒಳ್ಳೆಯ ಹೆಸರು ತಂದುಕೊಡ್ತು.

    ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ 'ಸ್ಟಾರ್' ಯಾರು ಗೊತ್ತಾ?ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ 'ಸ್ಟಾರ್' ಯಾರು ಗೊತ್ತಾ?

    ಕುಮಾರಿ 21ಎಫ್

    ಕುಮಾರಿ 21ಎಫ್

    ತೆಲುಗಿನ ಕುಮಾರಿ 21ಎಫ್ ಚಿತ್ರದ ರೀಮೇಕ್ ಆಗಿದ್ದ ಈ ಚಿತ್ರ ಕನ್ನಡದಲ್ಲೂ ಅದೇ ಹೆಸರಿನಲ್ಲಿ ಬಿಡುಗಡೆಯಾಯಿತು. ಹಿರಿಯ ನಟ ದೇವರಾಜ್ ಅವರ ಕಿರಿಯ ಪುತ್ರ ಪ್ರಣಾಮ್ ದೇವರಾಜ್ ನಾಯಕನಾಗಿ ಪಾದಾರ್ಪಣೆ ಮಾಡಿದ್ರು. ಆದ್ರೆ, ತೆಲುಗಿನಲ್ಲಿ ಸಿಕ್ಕ ಸಕ್ಸಸ್ ಈ ಚಿತ್ರಕ್ಕೆ ಸಿಕ್ಕಿಲ್ಲ.

    'ಕುಮಾರಿ 21F' ಸಿನಿಮಾ ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?'ಕುಮಾರಿ 21F' ಸಿನಿಮಾ ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ಸ್ ಏನು.?

    ಅಂಬಿ ನಿಂಗ್ ವಯಸ್ಸಾಯ್ತೋ

    ಅಂಬಿ ನಿಂಗ್ ವಯಸ್ಸಾಯ್ತೋ

    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುದೀಪ್ ಅಭಿನಯಿಸಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್. ಅಂಬಿ ಮತ್ತು ಕಿಚ್ಚನ ಜೋಡಿಗೆ ಪ್ರೇಕ್ಷಕರು ಚಪ್ಪಾಳೆ ಹೊಡೆದರು. ಅಂದ್ಹಾಗೆ, ಈ ಸಿನಿಮಾ ಅಂಬರೀಶ್ ಕೊನೆಯ ಚಿತ್ರವಾಯಿತು.

    ವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲವಿಮರ್ಶೆ : ಅಂಬಿಗೆ ಮುಪ್ಪಾಗಿದ್ದರೂ, ಅವ್ರ ಗತ್ತಿಗೆ ಮುಪ್ಪಿಲ್ಲ

    ನಡುವೆ ಅಂತರವಿರಲಿ - ಜಗತ್ ಕಿಲಾಡಿ

    ನಡುವೆ ಅಂತರವಿರಲಿ - ಜಗತ್ ಕಿಲಾಡಿ

    ಪ್ರಖ್ಯಾತ್ ಮತ್ತು ಐಶಾನಿ ಶೆಟ್ಟಿ ಅಭಿನಯಿಸಿದ್ದ ನಡುವೆ ಅಂತರವಿರಲಿ ಸಿನಿಮಾ ತಮಿಳಿನ Aadhalal Kadhal Seiveer ಚಿತ್ರ ರೀಮೇಕ್. ಅದಾದ ಬಳಿಕ ಬಂದ ಜಗತ್ ಕಿಲಾಡಿ ಚಿತ್ರ ತಮಿಳಿನ ಚದುರಂಗವೇಟೈ ಚಿತ್ರದ ರೀಮೇಕ್. ಈ ಎರಡು ಸಿನಿಮಾಗಳು ಬಿಡುಗಡೆಗೂ ಮುಂಚೆ ಹೆಚ್ಚು ಸದ್ದು ಮಾಡಿದ್ದವು. ಆದ್ರೆ, ಆಮೇಲೆ ಸೈಲೆಂಟ್ ಆಯ್ತು.

    8 ಎಂಎಂ

    8 ಎಂಎಂ

    ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದ 8 ಎಂಎಂ ಸಿನಿಮಾ ಭಾರಿ ಕುತೂಹಲ ಹುಟ್ಟುಹಾಕಿತ್ತು. ಆದ್ರೆ, ಬಿಡುಗಡೆಗೆ ಸನಿಹದಲ್ಲಿದ್ದಾಗ ಇದು 8 ತೋಟಕಲ್ ಚಿತ್ರದ ರೀಮೇಕ್ ಎಂದು ಬಹಿರಂಗವಾಯಿತು. ವಿಭಿನ್ನ ಪಾತ್ರದಲ್ಲಿ ನಟಿಸಿದ್ದ ಜಗ್ಗೇಶ್ ಗೆ ಇದು ಹೊಸ ರೀತಿ ಸಿನಿಮಾ ಆದರು, ಪ್ರೇಕ್ಷಕರಿಗೆ ಹೊಸತು ಎನಿಸಲಿಲ್ಲ.

    '8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ'8 ಎಂಎಂ' ವಿಮರ್ಶೆ : ಗನ್ ಜೊತೆ ಆಟ, ಜೂಟಾಟ, ಹೊಡೆದಾಟ

    ವಿಜಯ ಕಿಸ್ಮತ್

    ವಿಜಯ ಕಿಸ್ಮತ್

    ವಿಜಯ ರಾಘವೇಂದ್ರ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ಸಿನಿಮಾ ಕಿಸ್ಮತ್. ಈ ವರ್ಷ ತೆರೆಕಂಡ ಕೊನೆಯ ರೀಮೇಕ್ ಸಿನಿಮಾ. ತಮಿಳಿನ ನೇರಂ ಚಿತ್ರದ ರೀಮೇಕ್ ಆಗಿದ್ದ ಕಿಸ್ಮತ್ ಕನ್ನಡದಲ್ಲಿ ಚೆನ್ನಾಗಿ ಮೂಡಿಬಂದಿತ್ತಾದರೂ, ಪ್ರೇಕ್ಷಕರಿಂದ ಸೂಪರ್ ಎನಿಸಿಕೊಳ್ಳಲಿಲ್ಲ.

    ವಿಮರ್ಶೆ: 'ಚಿನ್ನಾರಿಮುತ್ತ'ನಿಗೆ ಅದೃಷ್ಟ ತಂದು ಕೊಟ್ಟ 'ಕಿಸ್ಮತ್'ವಿಮರ್ಶೆ: 'ಚಿನ್ನಾರಿಮುತ್ತ'ನಿಗೆ ಅದೃಷ್ಟ ತಂದು ಕೊಟ್ಟ 'ಕಿಸ್ಮತ್'

    English summary
    When compared to original movies, the official remake films have bad at sandalwood box office 2018.
    Friday, December 14, 2018, 17:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X