For Quick Alerts
  ALLOW NOTIFICATIONS  
  For Daily Alerts

  ಒಳ್ಳೆ ಚಿತ್ರವನ್ನು ಕನ್ನಡ ಪ್ರೇಕ್ಷಕರು ಕೈ ಬಿಡಲಿಲ್ಲ: ಎಮೋಷನಲ್ ಹಿಟ್ 'ಲವ್ 360' ರೀಮೆಕ್ ರೈಟ್ಸ್‌ಗೆ ಸಖತ್ ಡಿಮ್ಯಾಂಡ್!

  |

  ಶಶಾಂಕ್ ನಿರ್ದೇಶನದ 'ಲವ್ 360' ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ನಿಧಾನವಾಗಿ ಥಿಯೇಟರ್‌ಗಳು ಹೌಸ್‌ಫುಲ್ ಆಗುತ್ತಿದ್ದು, ತಂಡಕ್ಕೆ ಸಂತಸ ತಂದಿದೆ. ಇದರ ಬೆನ್ನಲ್ಲೇ ಚಿತ್ರದ ರೀಮೆಕ್ ರೈಟ್ಸ್‌ಗೂ ಬೇಡಿಕೆ ಶುರುವಾಗಿದ್ದು, ಶೀಘ್ರದಲ್ಲೇ ಬೇರೆ ಭಾಷೆಗಳಿಗೆ ಸಿನಿಮಾ ನಿರ್ಮಾಣವಾಗಲಿದೆ.

  ಆಗಸ್ಟ್ 19ಕ್ಕೆ ರಿಲೀಸ್ ಆಗಿದ್ದ 'ಲವ್ 360' ಎಮೋಷನಲ್ ಲವ್‌ ಸ್ಟೋರಿ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಕಳೆದ ಶನಿವಾರ ಹಾಗೂ ಭಾನುವಾರ ಪ್ರೇಕ್ಷಕರು ಥಿಯೇಟರ್‌ಗೆ ಬಾರದೇ ಚಿತ್ರಕ್ಕೆ ಹಿನ್ನಡೆ ಆಗಿತ್ತು. ಈ ಬಗ್ಗೆ ನಿರ್ದೇಶಕ ಶಶಾಂಕತ್ ವಿಡಿಯೋ ಮಾಡಿ ಮಾಡಿ ಮನವಿ ಮಾಡಿಕೊಂಡಿದ್ದರು. ಒಳ್ಳೆ ಸಿನಿಮಾವನ್ನು ಕೈಬಿಡಬೇಡಿ, ಸಿನಿಮಾ ನೋಡಿ ನಿಮಗೆ ಖಂಡಿತ ಇಷ್ಟವಾಗುತ್ತದೆ ಎಂದು ಕೇಳಿಕೊಂಡಿದ್ದರು. ಅದರ ಬೆನ್ನಲ್ಲೇ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ನಿಧಾನವಾಗಿ 'ಲವ್ 360' ಸಿನಿಮಾ ಗೆಲುವಿನತ್ತ ಮುಖ ಮಾಡಿತು.

  'ದಾರಿ ತಪ್ಪಿದ ಮಗ' ಹಾಗೂ 'ಓಂ' ಲಿಂಕ್ ಸೂಪರ್: 'ಶಿವ 143' ಸಿನಿಮಾ ನೋಡಿ 'ಶಿವ'ಣ್ಣನ ರಿವ್ಯೂ!'ದಾರಿ ತಪ್ಪಿದ ಮಗ' ಹಾಗೂ 'ಓಂ' ಲಿಂಕ್ ಸೂಪರ್: 'ಶಿವ 143' ಸಿನಿಮಾ ನೋಡಿ 'ಶಿವ'ಣ್ಣನ ರಿವ್ಯೂ!

  2ನೇ ವಾರ 'ಲವ್ 360' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸ್ವತಃ ನಿರ್ದೇಶಕ ಶಶಾಂಕ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೊಸ ಪ್ರತಿಭೆ ಪ್ರವೀಣ್ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರೆ, 'ಹೆಂಗೆ ನಾವು' ಡೈಲಾಗ್ ಖ್ಯಾತಿಯ ರಚನಾ ಇಂದರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಮುಗ್ಧ ಮನಸುಗಳ ಪ್ರೇಮಕಥೆಯನ್ನು ಚಿತ್ರದಲ್ಲಿ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಕೊನೆಗೂ ಶಶಾಂಕ್ ಅಂಡ್ ಟೀಮ್ ಗೆದ್ದಿದ್ದಾರೆ.

  ತೆಲುಗು- ತಮಿಳಿಗೆ 'ಲವ್ 360' ರೀಮೆಕ್

  ತೆಲುಗು- ತಮಿಳಿಗೆ 'ಲವ್ 360' ರೀಮೆಕ್

  ಹೌದು 'ಲವ್ 360' ತೆಲುಗು ಹಾಗೂ ತಮಿಳು ಭಾಷೆಗಳಿಗೆ ರೀಮೆಕ್ ಆಗುತ್ತಿರುವ ವಿಚಾರವನ್ನು ಸ್ವತಃ ನಿರ್ದೇಶಕ ಶಶಾಂಕ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ಕನ್ನಡ ಪ್ರೇಕ್ಷಕರು ಹಾಗೂ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಹೆಸರಾಂತ ಸಂಸ್ಥೆಯೊಂದು ತೆಲುಗು ಹಾಗೂ ತಮಿಳಿಗೆ ರೀಮೆಕ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಈ ವಿಚಾರ ಇಡೀ ತಂಡಕ್ಕೆ ಖುಷಿ ತಂದಿದೆ.

  ಶಿವರಾಜ್ ಕುಮಾರ್, ಪ್ರಭುದೇವ 'ಕುಲದಲ್ಲಿ ಕೀಳ್ಯಾವುದೋ' ಶೂಟಿಂಗ್ ಶುರು!ಶಿವರಾಜ್ ಕುಮಾರ್, ಪ್ರಭುದೇವ 'ಕುಲದಲ್ಲಿ ಕೀಳ್ಯಾವುದೋ' ಶೂಟಿಂಗ್ ಶುರು!

  ಮತ್ತೆ ಪ್ರೇಮಕಥೆ ಹೇಳಿ ಗೆದ್ದ ಶಶಾಂಕ್

  ಮತ್ತೆ ಪ್ರೇಮಕಥೆ ಹೇಳಿ ಗೆದ್ದ ಶಶಾಂಕ್

  'ಕೃಷ್ಣನ್ ಲವ್ ಸ್ಟೋರಿ', 'ಮೊಗ್ಗಿನ ಮನಸು', 'ಕೃಷ್ಣಲೀಲಾ' ನಂತರ ಶಶಾಂಕ್ 'ಲವ್ 360' ಅನ್ನುವ ಮತ್ತೊಂದು ಪ್ರೇಮಕಥೆ ಹೇಳಿ ಸಕ್ಸಸ್ ಕಂಡಿದ್ದಾರೆ. ರಾಮ್ ಹಾಗೂ ಜಾನಕಿ ಎಮೋಷನಲ್ ಲವ್ ಸ್ಟೋರಿ ನೋಡಿದವರೆಲ್ಲಾ ಮೆಚ್ಚಿಕೊಂಡಾಡುತ್ತಿದ್ದಾರೆ. ಒಂದು ಸರಳವಾದ ಪ್ರೇಮಕಥೆಗೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಶಶಾಂಕ್ 'ಲವ್ 360' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದಷ್ಟು ಟ್ವಿಸ್ಟ್‌ಗಳ ಜೊತೆಗೆ ಸಿನಿಮಾ ಪ್ರೇಕ್ಷರನ್ನು ರಂಜಿಸುವಲ್ಲಿ ಸಕ್ಸಸ್ ಕಂಡಿದೆ. ಈಗಾಗಲೇ ಸಾಕಷ್ಟು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿ ಗೆದ್ದಿರುವ ನಿರ್ದೇಶಕರು ಈ ಸಿನಿಮಾ ಮೂಲಕ ಪ್ರವೀಣ್ ಎನ್ನುವ ಯುವ ಪ್ರತಿಭೆಯನ್ನು ಪರಿಚಯಿಸಿದ್ದಾರೆ.

  ಮುಗ್ಧ ಪ್ರೇಮಿಗಳ ವಿಭಿನ್ನ ಪ್ರೇಮಕಥೆ

  ಮುಗ್ಧ ಪ್ರೇಮಿಗಳ ವಿಭಿನ್ನ ಪ್ರೇಮಕಥೆ

  ಚಿಕ್ಕಂದಿನಿಂದಲೂ ಒಟ್ಟಿಗೆ ಬದುಕುವ ರಾಮ್‌ ಹಾಗೂ ಜಾನಕಿಯ ಕಥೆಯಲ್ಲಿ ಏನೆಲ್ಲಾ ತಿರುವುಗಳು ಸಿಗುತ್ತದೆ. ಅದನ್ನೆಲ್ಲಾ ಮೀರಿ ಅವರಿಬ್ಬರು ಪ್ರೀತಿಯಲ್ಲಿ ಗೆಲ್ತಾರಾ ಇಲ್ವಾ ಅನ್ನುವುದನ್ನು ತೆರೆಮೇಲೆ ನೋಡಬೇಕು. ಮುಗ್ಧ ಪ್ರೇಮಿಗಳ ಕಥೆಯಲ್ಲಿ ಆಕ್ಷನ್, ಕಾಮಿಡಿ, ಮರ್ಡರಿ ಮಿಸ್ಟರ್ ಎಲ್ಲವೂ ಇದೆ. ರಾಮ್‌ ಪಾತ್ರದಲ್ಲಿ ಪ್ರವೀಣ್‌ ಜಾನಕಿಯಾಗಿ ರಚನಾ ಮೋಡಿ ಮಾಡಿದ್ದಾರೆ. ಟೈಟಲ್‌ಗೆ ತಕ್ಕಂತೆ 'ಪ್ರೀತಿಯ 360' ಕೋನಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರತಂಡದ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಂತಾಗಿದೆ. ಕನ್ನಡ ಪ್ರೇಕ್ಷಕರು ಒಳ್ಳೆ ಪ್ರಯತ್ನವನ್ನು ಗೆಲ್ಲಿಸಿದ್ದಾರೆ.

  ವೀಕೆಂಡ್‌ನಲ್ಲಿ 'ಲವ್ 360' ಹೌಸ್‌ಫುಲ್

  ವೀಕೆಂಡ್‌ನಲ್ಲಿ 'ಲವ್ 360' ಹೌಸ್‌ಫುಲ್

  ನಿರ್ದೇಶಕ ಶಶಾಂಕ್‌ ನಮ್ಮ ಸಿನಿಮಾ ಕೈಬಿಡಬೇಡಿ, ಗೆಲ್ಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಂತೆ ಪ್ರೇಕ್ಷಕರು ಥಿಯೇಟರ್‌ಗಳ ಕಡೆ ಮುಖ ಮಾಡಿದ್ದರು. ಕಳೆದ ಭಾನುವಾರದ ಸಂಜೆಯಿಂದಲೇ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈ ವೀಕೆಂಡ್ ಸಹ 'ಲವ್ 360' ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮಲ್ಟಿಫ್ಲೆಕ್ಸ್‌ಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ರೆಸ್ಪಾನ್ಸ್ ಜೋರಾಗಿದೆ.

  Recommended Video

  ಶ್ರೀನಿಧಿ ಶೆಟ್ಟಿಯನ್ನು ಹಾಡಿ ಹೊಗಳಿದ ವಿಕ್ರಮ್ | Filmibeat Kannada
  English summary
  Remake Rights For Director Shashank's 'Love 360' in Great Demand. Know More
  Monday, August 29, 2022, 13:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X