ಪುಟ್ಟಣ್ಣ ಕಣಗಾಲ್ ನಮ್ಮನಗಲಿ 30 ವರ್ಷ: ಅವರ ಚಿತ್ರಗಳ ಮೆಲುಕು

By ರಾಘವೇಂದ್ರ ಸಿ ವಿ / ಬಾಲರಾಜ್ ತಂತ್ರಿ

ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಅಜರಾಮರವಾಗಿ ಮೊದಲ ಪಂಕ್ತಿಯಲ್ಲಿ ಬರುವ ಹೆಸರೆಂದರೆ ಅಪ್ರತಿಮ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರದ್ದು. ಮೈಸೂರು ಜಿಲ್ಲೆಯ ಕಣಗಾಲ್ ಗ್ರಾಮದಲ್ಲಿ ಜನಿಸಿದ ಇವರ ಮೂಲ ಹೆಸರು ಸೀತಾರಾಮ ಶಾಸ್ತ್ರಿ.

ಚಿಕ್ಕವಯಸ್ಸಿನಲ್ಲೇ ರಂಗಭೂಮಿಯ ಮೇಲೆ ವಿಶೇಷ ಆಕರ್ಷಣೆ ಹೊಂದಿದ್ದ ಪುಟ್ಟಣ್ಣ, ನಿರ್ದೇಶಕವಾಗುವವರೆಗೆ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ತಾನು ಕೆಲಸ ಮಾಡುತ್ತಿದ್ದ ನಾಟಕ ಕಂಪೆನಿ ಮುಚ್ಚಲ್ಪಟ್ಟಾಗ ಹೊಟೇಲ್ ಮಾಣಿಯಾಗಿಯೂ ಪುಟ್ಟಣ್ಣ ದುಡಿದಿದ್ದುಂಟು. (ಪುಟ್ಟಣ್ಣ ಸವಿನೆನಪು ಸಮಾರಂಭ)

ತನ್ನ ಸರಳತೆ, ಹಾಗೂ ಸಜ್ಜನಿಕೆಯಿಂದಲೇ ಹೆಸರುವಾಸಿಯಾಗಿರುವ ಪುಟ್ಟಣ್ಣ ಕಣಗಾಲ್, ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಕನ್ನಡ ಸಿನಿಮಾ ರಂಗಕ್ಕೆ ಹೊಸ ಬೆಳಕು ಮತ್ತು ಎತ್ತರಕ್ಕೆ ಏರಿಸಿದವರು.

'ಬೆಳ್ಳಿಮೋಡ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುಟ್ಟಣ್ಣ ಕಣಗಾಲ್, ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಹೆಚ್ಚಾಗಿ ಪುಟ್ಟಣ್ಣ ಸಿನಿಮಾಗಳ ಕ್ಲೈಮ್ಯಾಕ್ಸ್ ದುರಂತ ಅಂತ್ಯವನ್ನು ಕಾಣುತ್ತಿದ್ದದ್ದು ಅವರ ಚಿತ್ರದ ಟ್ರೇಡ್ ಮಾರ್ಕ್.

ಮೂರು ಬಾರಿ ಫಿಲಂಫೇರ್, ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಪುಟ್ಟಣ್ಣ, ತನ್ನ ಸಿನಿಮಾಗಳ ಮೂಲಕ ವಿಷ್ಣು, ಅಂಬಿ, ಶ್ರೀನಾಥ್ ಸೇರಿದಂತೆ ಹಲವು ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.

1985 ಜೂನ್ ಐದರಂದು 'ಮಸಣದ ಹೂವು' ಚಿತ್ರದ ಶೂಟಿಂಗ್ ಸಮಯದದಲ್ಲಿ ಕೊನೆಯುಸಿರೆಳೆದ ಪುಟ್ಟಣ್ಣ, ಇಂದು ನಮ್ಮೊಂದಿಗಿಲ್ಲದೇ ವರ್ಷ ಮೂವತ್ತಾಯಿತು. ಈ ಸಂದರ್ಭದಲ್ಲಿ ಅವರ ಅತ್ಯುತ್ತಮ ನಿರ್ದೇಶನದ 15 ಸೂಪರ್ ಹಿಟ್ ಚಿತ್ರಗಳ ಒಂದು ಮೆಲುಕು ಸ್ಲೈಡಿನ ಮೂಲಕ ಪುಟ್ಟಣ್ಣ ಅವರಿಗೆ ಅರ್ಪಣೆ..

ಬೆಳ್ಳಿಮೋಡ

ಬೆಳ್ಳಿಮೋಡ

1966ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಲ್ಯಾಣ್ ಕುಮಾರ್, ಕಲ್ಪನಾ, ಪಂಡರೀಬಾಯಿ ಮುಂತಾದವರಿದ್ದರು.

ಮಲ್ಲಮ್ಮನ ಪವಾಡ

ಮಲ್ಲಮ್ಮನ ಪವಾಡ

ರಾಜಕುಮಾರ್, ಬಿ ಸರೋಜಾದೇವಿ, ವಜ್ರಮುನಿ, ದ್ವಾರಕೀಶ್ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರ 1969ರಲ್ಲಿ ಬಿಡುಗಡೆಯಾಗಿತ್ತು.

ಗೆಜ್ಜೆಪೂಜೆ

ಗೆಜ್ಜೆಪೂಜೆ

ಕಲ್ಪನಾ, ಗಂಗಾಧರ್, ಲೀಲಾವತಿ, ಆರತಿ, ಕೆ ಎಸ್ ಅಶ್ವಥ್ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರ 1969ರಲ್ಲಿ ಬಿಡುಗಡೆಯಾಗಿತ್ತು.

ಶರಪಂಜರ

ಶರಪಂಜರ

1971ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಲ್ಪನಾ, ಗಂಗಾಧರ್ ಮುಂತಾದವರಿದ್ದರು.

ಸಾಕ್ಷಾತ್ಕಾರ

ಸಾಕ್ಷಾತ್ಕಾರ

ರಾಜ್, ಜಮುನಾ, ಪೃಥ್ವಿರಾಜ್ ಕಪೂರ್, ಬಾಲಕೃಷ್ಣ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1971ರಲ್ಲಿ ಬಿಡುಗಡೆಯಾಗಿತ್ತು.

ನಾಗರಹಾವು

ನಾಗರಹಾವು

ವಿಷ್ಣುವರ್ಧನ್, ಅಂಬರೀಶ್, ವೈಶಾಲಿ, ಆರತಿ, ಎಂ ಪಿ ಶಂಕರ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1972ರಲ್ಲಿ ಬಿಡುಗಡೆ ಕಂಡಿತ್ತು.

ಎಡಕಲ್ಲು ಗುಡ್ಡದ ಮೇಲೆ

ಎಡಕಲ್ಲು ಗುಡ್ಡದ ಮೇಲೆ

ಜಯಂತಿ, ರಂಗಾ, ಚಂದ್ರಶೇಖರ್ ಮುಂತಾದರಿದ್ದ ಈ ಚಿತ್ರ 1973ರಲ್ಲಿ ರಿಲೀಸ್ ಆಯಿತು.

ಉಪಾಸನೆ

ಉಪಾಸನೆ

ಶ್ರೀನಾಥ್, ಆರತಿ ಪ್ರಮುಖ ತಾರಾಗಣದಲ್ಲಿದ್ದ ಈ ಚಿತ್ರ 1974ರಲ್ಲಿ ಬಿಡುಗಡೆಯಾಗಿತ್ತು.

ಶುಭಮಂಗಳ

ಶುಭಮಂಗಳ

ಶ್ರೀನಾಥ್, ಆರತಿ, ಶಿವರಾಂ ಪ್ರಮುಖ ತಾರಾಬಳಗದಲ್ಲಿದ್ದ ಈ ಚಿತ್ರ 1975ರಲ್ಲಿ ಬಿಡುಗಡೆಗೊಂಡಿತ್ತು.

ಬಿಳಿಹೆಂಡ್ತಿ

ಬಿಳಿಹೆಂಡ್ತಿ

1975ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅನಿಲ್ ಕುಮಾರ್, ಆರತಿ, ಮಾರ್ಗರೆಟ್, ಅಂಬರೀಶ್ ಮುಂತಾದವರಿದ್ದರು.

ಪಡುವಾರಹಳ್ಳಿ ಪಾಂಡವರು

ಪಡುವಾರಹಳ್ಳಿ ಪಾಂಡವರು

1978ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಾಮಕೃಷ್ಣ, ಅಂಬರೀಶ್, ಜೈಜಗದೀಶ್, ಜಯಶ್ರೀ ಪ್ರಮುಖ ತಾರಾಗಣದಲ್ಲಿದ್ದರು.

ಧರ್ಮಸೆರೆ

ಧರ್ಮಸೆರೆ

1979ರಲ್ಲಿ ಬಿಡುಗಡೆಕಂಡ ಈ ಚಿತ್ರದಲ್ಲಿ ಶ್ರೀನಾಥ್, ಆರತಿ ಮುಂತಾದವರಿದ್ದರು.

ರಂಗನಾಯಕಿ

ರಂಗನಾಯಕಿ

1981ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಅಂಬರೀಶ್, ಅಶೋಕ್, ಆರತಿ ಮುಂತಾದವರಿದ್ದರು.

ಮಾನಸ ಸರೋವರ

ಮಾನಸ ಸರೋವರ

1982ರಲ್ಲಿ ರಿಲೀಸ್ ಭಾಗ್ಯ ಕಂಡ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶ್ರೀನಾಥ್, ಪದ್ಮಾವಸಂತಿ, ರಾಮಕೃಷ್ಣ ಮುಂತಾದವರಿದ್ದರು.

ಅಮೃತಗಳಿಗೆ

ಅಮೃತಗಳಿಗೆ

1984ರಲ್ಲಿ ಬಿಡುಗಡೆಯಾದ ಈ ಚಿತ್ರದ ತಾರಾಗಣದಲ್ಲಿ ರಾಮಕೃಷ್ಣ, ಪದ್ಮಾವಸಂತಿ ಮುಂತಾದವರಿದ್ದರು.

More from Filmibeat

English summary
Remembering iconic film director Puttanna Kanagal on his 30th death anniversary. His directed list of best 15 movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X