»   » ಅನಿರುದ್ಧ್ ಮ್ಯಾಜಿಕ್: 1 ಮಿಲಿಯನ್ ವೀಕ್ಷಣೆಗೆ ಒಳಪಟ್ಟ 'ಸಿರಿಕ್ಕಾದೆ'

ಅನಿರುದ್ಧ್ ಮ್ಯಾಜಿಕ್: 1 ಮಿಲಿಯನ್ ವೀಕ್ಷಣೆಗೆ ಒಳಪಟ್ಟ 'ಸಿರಿಕ್ಕಾದೆ'

By: Sony
Subscribe to Filmibeat Kannada

ಕಾಲಿವುಡ್ ನಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿರುವ ಅನಿರುದ್ಧ್ ರವಿಚಂದರ್ ಅವರು 'ರೆಮೋ' ಚಿತ್ರದ ಪ್ರಚಾರಾರ್ಥವಾಗಿ 'ಸಿರಿಕ್ಕಾದೆ' ಎಂಬ ವಿಶೇಷ ಮ್ಯೂಸಿಕ್ ವಿಡಿಯೋ ಆಲ್ಬಂ ಹೊರತಂದಿರುವ ವಿಚಾರವನ್ನು ನಾವೇ ನಿಮಗೆ ತಿಳಿಸಿದ್ವಿ.

ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಚಿತ್ರದ ವಿಶೇಷ ಪ್ರೊಮೋಷನಲ್ ಹಾಡು 'ಸಿರಿಕ್ಕಾದೆ' ಇದೀಗ ಒಂದು ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದೆ. ಚಿತ್ರದ ಸ್ಪೆಷಲ್ ಹಾಡು ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಪಟ್ಟಿದ್ದಕ್ಕಾಗಿ ಇಡೀ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.[ಸಂಗೀತ ಪ್ರಿಯರನ್ನು ಸಮ್ಮೋಹನಗೊಳಿಸಲು ಸಜ್ಜಾದ ಅನಿರುದ್ಧ್ ರವಿಚಂದರ್]

'Remo's 'Sirikkadhey' Music Video crosses 1 Million views

ಈಗಾಗಲೇ ತಮಿಳಿನಲ್ಲಿ ರಿಲೀಸ್ ಅಗಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರು ಈ ಹಾಡು ಸೆಪ್ಟೆಂಬರ್ 5 ರಂದು ಇಂಗ್ಲೀಷ್ ವರ್ಷನ್ ನಲ್ಲಿ, 'ಕಮ್ ಕ್ಲೋಸರ್' ಎಂಬ ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ. ಅದೇ ದಿನದಂದು ಚಿತ್ರದ ಆಡಿಯೋ ಬಿಡುಗಡೆ ಕೂಡ ಅದ್ಧೂರಿಯಾಗಿ ನೆರವೇರಲಿದೆ.

ಅಕ್ಟೋಬರ್ 7 ರಂದು, ಸುಮಾರು 3000 ತೆರೆಗಳಲ್ಲಿ 'ರೆಮೋ' ಸಿನಿಮಾ ತೆರೆ ಕಾಣುತ್ತಿದ್ದು, ಚಿತ್ರದಲ್ಲಿ ಕಾಲಿವುಡ್ ನಟ ಶಿವಕಾರ್ತಿಕೇಯನ್ ಮತ್ತು ನಟಿ ಕೀರ್ತಿ ಸುರೇಶ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[ಕರ್ನಾಟಕದಲ್ಲಿ 'ರೆಮೋ' ವಿತರಣೆ ಮಾಡಲಿರುವ ದೀಪಕ್ ಸಾಮಿ]

'Remo's 'Sirikkadhey' Music Video crosses 1 Million views

ಪ್ರಭು ರಾಧಾಕೃಷ್ಣನ್ ಅವರು 'ಸಿರಿಕ್ಕಾದೆ' ರೋಮ್ಯಾಂಟಿಕ್ ಹಾಡಿಗೆ ನಿರ್ದೇಶನ ಮಾಡಿದ್ದು, ಅರ್ಜುನ್ ಮತ್ತು ಶ್ರೀನಿಧಿ ವೆಂಕಟೇಶ್ ಅವರು ಧ್ವನಿ ನೀಡಿದ್ದರು.['ರೆಮೋ' ಆಡಿಯೋ ಲಾಂಚ್ ಗೆ ದಿನಗಣನೆ ಶುರು]

'Remo's 'Sirikkadhey' Music Video crosses 1 Million views

ಭಾಗ್ಯರಾಜ್ ಕಣ್ಣನ್ ಆಕ್ಷನ್-ಕಟ್ ಹೇಳಿರುವ 'ರೆಮೋ' ಚಿತ್ರಕ್ಕೆ, 24AM ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಆರ್.ಡಿ ರಾಜಾ ಅವರು ಬಂಡವಾಳ ಹೂಡಿದ್ದಾರೆ.

English summary
‘Sirikkadhey’ song from the Tamil movie 'Remo' has crossed 1 Million views. The others songs along with the ‘Sirikkadhey’ English version will be released on 5th September and will be telecasted by MTV. The movie has beautiful compositions of Anirudh Ravichandar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada