twitter
    For Quick Alerts
    ALLOW NOTIFICATIONS  
    For Daily Alerts

    ಡಿಸೆಂಬರ್ 1 ಚಿತ್ರದ ಡೌಟ್ ಪರಿಹಾರಕ್ಕೊಂದು ದಿನ

    By Mahesh
    |

    2013ನೇ ಸಾಲಿನ ಪ್ರತಿಷ್ಠಿತ ಅರುವತ್ತೊಂದನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಿ ಶೇಷಾದ್ರಿ ನಿರ್ದೇಶನದ ಕನ್ನಡ ಚಿತ್ರ 'ಡಿಸೆಂಬರ್ 1' ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಂವಾದ.ಕಾಮ್ ತಂಡ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಬಗ್ಗೆ ನಿಮ್ಮಲ್ಲಿರುವ ಅನಿಸಿಕೆ, ಅಭಿಪ್ರಾಯ, ಸಂದೇಹಗಳನ್ನು ಪರಿಹಾರಿಸಿಕೊಳ್ಳಬಹುದಾಗಿದೆ.

    ಉತ್ತರ ಕರ್ನಾಟಕದ ಭಾಗದಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಯೋಜನೆ ಜಾರಿಗೊಂಡಾಗ ನಡೆದ ಒಂದು ಪ್ರಸಂಗದ ಬಗ್ಗೆ ದಿನಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ.

    ರೊಟ್ಟಿ ದೇವಕ್ಕ ಎಂಬ ಹೆಣ್ಮಗಳು ತನ್ನ ಸಂಸಾರ ನಿಭಾಯಿಸುವ ಬಗೆ, ಸಿಎಂ ಗ್ರಾಮ ವಾಸ್ತವ್ಯಕ್ಕೂ ಮುನ್ನ ಹಾಗೂ ನಂತರದ ಪರಿಸ್ಥಿತಿ, ಇಡೀ ಗ್ರಾಮ ಈ ಕುಟುಂಬವನ್ನು ಕಾಣುವ ರೀತಿಯನ್ನು ಚಿತ್ರಿಸಲು ಯತ್ನಿಸಲಾಗಿದೆ ಎಂದು ಪ್ರಶಸ್ತಿ ಗೆದ್ದ ಬೆನ್ನಲ್ಲೇ ಪಿ. ಶೇಷಾದ್ರಿ ಅವರು ಹೇಳಿದ್ದರು. [ಸಂಪೂರ್ಣ ಮಾತುಕತೆ ಇಲ್ಲಿ ಓದಿ]

    ಚಿತ್ರದ ಬಗ್ಗೆ ಆರೋಪ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ ಅವರು ಈ ರೀತಿಯ ಆರೋಪಗಳನ್ನು ಎಂದೂ ಎದುರಿಸಿದಂತಹವರಲ್ಲ. ಅವರ ಮಟ್ಟಿಗೆ ಈ ಬೆಳವಣಿಗೆಗಳು ಹೊಸದು. ತಮ್ಮ 'ಡಿಸೆಂಬರ್ 1' ಚಿತ್ರ ಇಷ್ಟೆಲ್ಲಾ ವಿವಾದಕ್ಕೆ ಗುರಿಯಾಗುತ್ತದೆ ಎಂದು ಅವರು ಊಹಿಸಿರಲಿಲ್ಲ.

    ಈ ಬಗ್ಗೆ ಮಾತಿಗೆ ಎಳೆದಾಗ ಅವರು ತಮಗೆ ಅನಿಸಿದ್ದನ್ನು ನೇರವಾಗಿ ಒನ್ಇಂಡಿಯಾ ಕನ್ನಡ ಜೊತೆ ಹಂಚಿಕೊಂಡರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಗ್ರಾಮವಾಸ್ತವ್ಯ ಪರಿಕಲ್ಪನೆಗೆ ಧಕ್ಕೆ ಬರುವಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ ಎಂದು ಆರೋಪಿಸಿದರು. ಇನ್ನೊಬ್ಬ ನಿರ್ದೇಶಕ ಓಂ ಪ್ರಕಾಶ್ ನಾಯಕ್ ಅವರು ತಮ್ಮ ಕಥೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿದರು.ಆದರೆ, ಎಲ್ಲವೂ ಸತ್ಯಕ್ಕೆ ದೂರವಾದ ಮಾತು. [ಒನ್ ಇಂಡಿಯಾಗೆ ನೀಡಿದ ಸಂದರ್ಶನ]

    Renowned Director P Sheshadri December 1 Movie Samvada

    ಸಂವಾದ ಕಾರ್ಯಕ್ರಮ ವಿವರ:

    ಕನ್ನಡ ಚಿತ್ರ ಸಂಸ್ಕೃತಿಯನ್ನ ವಿಸ್ತರಿಸುವಲ್ಲಿ ಕಾರ್ಯೋನ್ಮುಖವಾಗಿರುವ ಸಂಸ್ಥೆ ಸಂವಾದ ಡಾಟ್ ಕಾಂ. ಕಳೆದ 8 ವರುಷಗಳಿಂದ ಸಿನೆಮಾ ಕೇಂದ್ರಿತ ಹಲವು ಸಂವಾದ, ಚರ್ಚೆ, ಚಲನಚಿತ್ರ ಶಿಬಿರ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬಂದಿದೆ.

    ಸಂವಾದ ಡಾಟ್ ಕಾಂ ಬರುವ ಭಾನುವಾರ 22ನೇ ಭಾನುವಾರ ಪಿ ಶೇಷಾದ್ರಿಯವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ 'ಡಿಸೆಂಬರ್ 1' ರ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಿದೆ.

    ದಿನಾಂಕ: ಜೂನ್ 22, 2014

    ಸ್ಥಳ: ಬಾದಾಮಿ ಹೌಸ್, ಬೆಂಗಳೂರು

    ಬೆಳಿಗ್ಗೆ 11-30 ಕ್ಕೆ ಚಿತ್ರ ಪ್ರದರ್ಶನ ನಂತರ ಚಿತ್ರ ತಂಡದೊಂದಿಗೆ ಸಂವಾದ.

    ಪಾಸ್ ಗಳಿಗಾಗಿ ಸಂಪರ್ಕಿಸಬಹುದಾದ ಸಂಖ್ಯೆ:
    99004 39930, 97317 55966
    email: [email protected]

    English summary
    P Sheshadri's December-1st Kannada feature film bagged National award. December-1st is a Kannada feature film based on Larnataka Chief Ministers VILLAGE STAY program. Samvaada.org team has organized a special show and debate on the movie, event is on June.22.
    Wednesday, June 18, 2014, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X