ಜಾಸ್ತಿ ಮಾತಾಡಿದ್ರೆ ಪವನ್ ಕಲ್ಯಾಣ್ ಡಿವೋರ್ಸ್ ವಿಷ್ಯ ಬಿಚ್ಚಿಡಬೇಕಾಗುತ್ತೆ.!
Recommended Video

ತೆಲುಗು ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಎರಡನೇ ಮದುವೆ ಆಗ್ತಿದ್ದಾರೆ. ಈ ವಿಷ್ಯವೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವಿವಾದ, ಚರ್ಚೆ, ಗಮನ ಸೆಳೆಯುತ್ತಿದೆ.
ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದು ದೂರವಿರುವ ರೇಣು ದೇಸಾಯಿ, ಮತ್ತೊಬ್ಬರ ಜೊತೆ ಸಪ್ತಪದಿ ತುಳಿಯಲು ಸಿದ್ಧವಾಗಿದ್ದಾರೆ. ಇತ್ತೀಚಿಗಷ್ಟೆ ಗುಟ್ಟಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.
ಆದ್ರೆ, ಇದನ್ನ ಅರಗಿಸಿಕೊಳ್ಳಲಾದ ಪವನ್ ಕಲ್ಯಾಣ್ ಫ್ಯಾನ್ಸ್ ರೇಣು ದೇಸಾಯಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಮತ್ತೆ ಮದುವೆಯಾದ್ರೆ ಸಾಯಿಸ್ತೀವಿ ಅಂತ ಟ್ವೀಟ್ ಮಾಡ್ತಿದ್ದಾರೆ. ಇದೀಗ, ಪಿ.ಕೆ ಫ್ಯಾನ್ಸ್ ವಿರುದ್ಧ ರೇಣು ದೇಸಾಯಿ ಸಿಡಿದೆದ್ದಿದ್ದು, ಜಾಸ್ತಿ ಮಾತನಾಡದ್ರೆ ಡಿವೋರ್ಸ್ ಬಗ್ಗೆ ಬಯಲು ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪವನ್ ಕಲ್ಯಾಣ್ ವಿಶ್ ಮಾಡಿದ್ದಾರೆ
ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದುಕೊಂಡಿರುವ ನಟಿ ಮತ್ತೊಮ್ಮೆ ಮದುವೆ ಆಗುತ್ತಿರುವ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಅವರೇ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಆದ್ರೆ, ಅವರ ಅಭಿಮಾನಿಗಳು ಮಾತ್ರ ಸುಮ್ಮನಿರುತ್ತಿಲ್ಲ. ರೇಣು ದೇಸಾಯಿ ವಿರುದ್ಧ ಸುಮ್ಮನೆ ಕಾಮೆಂಟ್ ಮಾಡುತ್ತಲೇ ಇದ್ದಾರೆ. ಇದು ಸಹಜವಾಗಿ ರೇಣು ಅವರನ್ನ ಕೆಣಕಿದೆ.

ನನಗೆ ಕೃತಜ್ಞತೆಯಾಗಿರಬೇಕು
''ನನಗೆ ನನ್ನ ಬಗ್ಗೆ ಬರುತ್ತಿರುವ ಕೆಟ್ಟ ಕಾಮೆಂಟ್ ಗಳನ್ನ ಕೇಳುವ ಅವಶ್ಯಕತೆ ನನಗಿಲ್ಲ. ಇಷ್ಟು ದಿನ ಡಿವೋರ್ಸ್ ವಿಷ್ಯವನ್ನ ಪ್ರಸ್ತಾಪ ಮಾಡಿಲ್ಲ. ಅದಕ್ಕೆ ನೀವು ನನಗೆ ಕೃತಜ್ಞತೆಯಾಗಿರಬೇಕು'' ಎಂದು ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿದ್ದಾರೆ.

ವಾಸ್ತವ ಬಯಲು ಮಾಡಬೇಕಾಗುತ್ತೆ.!
''ನನ್ನ ಮತ್ತು ಪವನ್ ಕಲ್ಯಾಣ್ ಅವರ ನಡುವಿನ ವಿಚ್ಛೇದನದ ಹಿಂದಿನ ಅಸಲಿ ವಿಷ್ಯವನ್ನ ಬಹಿರಂಗಪಡಿಸಿದ್ರೆ, ಪವನ್ ಕಲ್ಯಾಣ್ ಅಭಿಮಾನಿಗಳು ಗರ್ವಭಂಗ ಆಗೋದು ಖಚಿತ'' ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ಸೆನ್ಸಷ್ನಲ್ ಉಂಟು ಮಾಡಿದೆ.

ವಿಚ್ಛೇದನಕ್ಕೆ ಕಾರಣವೇನು.?
ಅಷ್ಟಕ್ಕೂ, ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ನಡುವಿನ ವಿಚ್ಚೇದನಕ್ಕೆ ನಿಜವಾದ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ಆದ್ರೆ, ವೈಯಕ್ತಿಕವಾಗಿ ಭಿನ್ನಾಭಿಪ್ರಾಯದಿಂದ ದೂರುವಾದರು ಎಂಬುದಷ್ಟೇ ತಿಳಿದಿರುವ ಸತ್ಯ. ಆದ್ರೆ, ಅಭಿಮಾನಿಗಳಿಗೆ ಗೊತ್ತಿಲ್ಲದೇ ಇರುವುದು ಇನ್ನು ಏನೋ ಇದೆ ಎಂಬುದು ಸದ್ಯ ರೇಣು ಅವರ ಮಾತಿನಿಂದ ಗೊತ್ತಾಗುತ್ತಿದೆ.

ಪವನ್ ಮತ್ತು ರೇಣು ದಾಂಪತ್ಯದ ಬಗ್ಗೆ
ರೇಣು ದೇಸಾಯಿ ಮೂಲತಃ ಗುಜರಾತಿಯವರು. 2009 ರಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಅವರೊಂದಿಗೆ ಮದುವೆ ಆದರು. ಇವರಿಬ್ಬರ ಪ್ರೀತಿಯ ಪ್ರತಿರೂಪವಾಗಿ ಆಧ್ಯಾ ಮತ್ತು ಅಕಿರಾ ಎಂಬ ಇಬ್ಬರು ಮಕ್ಕಳಿದ್ದರು. ಆದ್ರೆ, ದಾಂಪತ್ಯದಲ್ಲಿ ಮನಸ್ತಾಪ ಮೂಡಿದ ಹಿನ್ನಲೆ 2012ರಲ್ಲಿ ಪರಸ್ಪರ ಒಪ್ಪಿಗೆ ಮೆರೆಗೆ ವಿಚ್ಛೇದನ ಪಡೆದುಕೊಂಡರು.

ವರ' ಯಾರು ಎಂಬುದು ಗೌಪ್ಯವಾಗಿದೆ
ಎಂಗೇಜ್ ಆಗಿರುವ ಬಗ್ಗೆ ಫೋಟೋ ಶೇರ್ ಮಾಡಿರುವ ನಟಿ ರೇಣು ದೇಸಾಯಿ, ತಮ್ಮನ್ನ ಮದುವೆ ಆಗುತ್ತಿರುವ 'ವರ' ಯಾರು ಎಂಬುದನ್ನ ಬಿಟ್ಟುಕೊಟ್ಟಿಲ್ಲ. ಉಂಗುರ ಬದಲಿಸುತ್ತಿರುವ ಫೋಟೋ ಮಾತ್ರ ಹಂಚಿಕೊಳ್ಳುವ ಮೂಲಕ ತಾವು ಎರಡನೇ ಮದುವೆ ಆಗುತ್ತಿದ್ದೀನಿ ಎಂದು ಖಚಿತಪಡಿಸಿದ್ದಾರೆ.


Click it and Unblock the Notifications











