ಇನ್ನೂ ಮೂರೇ ಮೂರು ತಿಂಗಳು ದರ್ಶನ್ ಜೈಲಿಂದ ಆಚೆ ಬರುತ್ತಾರೆ, ಡೆವಿಲ್ ಬ್ಲಾಕ್‌ಬಸ್ಟರ್ ಆಗುತ್ತೆ..!
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ.
ಈ ವಾದ-ವಿವಾದ ಏನೇ ಇರಲಿ.. ಸದ್ಯಕ್ಕೆ ದರ್ಶನ್ ಹಣೆಬರಹಕ್ಕೆ ಈ ಗ್ರಹ ಗತಿಗಳೇ ಕಾರಣ ಎಂಬ ಮಾತುಗಳು ಮಾತ್ರ ದಶ ದಿಕ್ಕುಗಳಲ್ಲಿ ಬಲವಾಗಿ ಕೇಳಿ ಬರುತ್ತಿವೆ. ಎದುರಾದ ಇದೊಂದು ಅಪಾಯವನ್ನು ದರ್ಶನ್ ಪಾರು ಮಾಡಿದರೆ ಮುಂದೆ ಯಾರಿಂದನೂ ದರ್ಶನ್ ಅವರನ್ನು ತಡೆಯಲು ಸಾಧ್ಯ ಇಲ್ಲ ಎಂಬ ಭವಿಷ್ಯವಾಣಿ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ದರ್ಶನ್ ಅಭಿಮಾನಿಯೊಬ್ಬರು ಜೋಕುಮಾರಸ್ವಾಮಿ ಬಳಿ ದರ್ಶನ್ ಅವರ ದರ್ಶನ ಭಾಗ್ಯ ಯಾವಾಗ ಸಿಗಬಹುದೆಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಹೌದು, ಅಸಲಿಗೆ ಗಣೇಶ ಮೂರ್ತಿ ವಿರ್ಸಜನೆಯಾದ ನಂತರ ಭಾದ್ರಪದ ಮಾಸದ ಅಷ್ಟಮಿ ದಿವಸದಂದು ಜನಿಸುವ ಜೋಕುಮಾರಸ್ವಾಮಿ ಮೇಲೆ ಉತ್ತರ ಕರ್ನಾಟಕದಲ್ಲಿ ಇವತ್ತು ಕೂಡ ಅನೇಕರಿಗೆ ನಂಬಿಕೆ ಇದೆ. ಉತ್ತರ ಕರ್ನಾಟಕದಲ್ಲಿ ಕೃಷಿಕರ ಜನಪದ ಮತ್ತು ಮಳೆ ತರುವ ದೇವರು ಜೋಕುಮಾರಸ್ವಾಮಿ ಎಂದು ಕೃಷಿಕರು ನಂಬಿದ್ದಾರೆ.
ಈ ಹಬ್ಬದ ಅಂಗವಾಗಿ ಗಂಗಾಮತಸ್ಥ ಸಮಾಜದ ಜನರು 07 ದಿನಗಳ ಕಾಲ ಜೋಕುಮಾರನನ್ನು ಬುಟ್ಟಿಯಲ್ಲಿ ಹಾಕಿಕೊಂಡು ಮನೆ-ಮನೆಗೆ ತೆರಳಿ ''ಅಡ್ಡಡ್ಡ ಮಳೆ ಬಂದ.. ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ'' ಎಂದು ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತಾ ಜೋಕುಮಾರನನ್ನೂ ಆರಾಧಿಸುತ್ತಾರೆ.

ಇಂತಹ ಇತಿಹಾಸವನ್ನೊಂದಿರುವ ಈ ಹಬ್ಬ ನಡೆಯುತ್ತಿರುವ ಸಮಯದಲ್ಲಿ ವಿಜಯಪುರದ ಗೋಳಗುಮ್ಮಟ ಏರಿಯಾದ ಅಭಿಮಾನಿ ಸಚಿನ್ ಎಂಬಾತ ದರ್ಶನ್ ಗೆ ಸಂಬಂಧಿಸಿದಂತೆ ಒಂದೊಂದು ಪ್ರಶ್ನೆಗಳನ್ನು ಕೇಳಿ ಬುಟ್ಟಿಯನ್ನು ಮೇಲೆತ್ತಿ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದಾರೆ. ಆ ಪ್ರಕಾರ ದರ್ಶನ್ ಹೊರಬರುವುದು ಯಾವಾಗ ಎಂಬ ಈ ಪ್ರಶ್ನೆಗೆ ಬುಟ್ಟಿ ಸುಲಭವಾಗಿ ಮೇಲೆ ಬಂದಿದ್ದು, ಇನ್ನೂ ಮೂರು ತಿಂಗಳಿನಲ್ಲಿ ದರ್ಶನ್ ಜೈಲಿಂದ ಹೊರ ಬರುತ್ತಾರೆ ಎನ್ನುವ ಉತ್ತರವೂ ಸಿಕ್ಕಿದೆ.
ಇನ್ನೂ ಜೈಲಿಂದ ದರ್ಶನ್ ಹೊರಗಡೆ ಬಂದ ಮೇಲೆ ಮುಂದಿನ ದಿನಗಳು ಹೇಗಿರಲಿವೆ ಎನ್ನುವ ಪ್ರಶ್ನೆಗೆ ಜೋಕುಮಾರ ಸ್ವಾಮಿಯ ಬುಟ್ಟಿ ಭಾರವಾಗಿದ್ದು, ಇದು ಅಭಿಮಾನಿಯನ್ನು ಈಗ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಜೋಕುಮಾರಸ್ವಾಮಿಯ ಈ ಭವಿಷ್ಯದಿಂದ ಜೈಲಿನಿಂದ ಹೊರಗೆ ಬಂದರೂ ನಟ ದರ್ಶನ್‌ಗೆ ಕಂಟಕ ತಪ್ಪಿದ್ದಲ್ಲ ಎಂಬ ಮಾತು ಈಗ ಕೇಳಿ ಬರುತ್ತಿದೆ. ಇನ್ನೂ ಇದೇ ಸಮಯದಲ್ಲಿ ದರ್ಶನ್ ಅವರ ಡೆವಿಲ್ ಚಿತ್ರದ ಕುರಿತು ಕೂಡ ಪ್ರಶ್ನೆಯನ್ನೂ ಕೇಳಲಾಗಿದ್ದು, ಬುಟ್ಟಿ ಸುಲಭವಾಗಿ ಮೇಲಕ್ಕೆ ಬಂದಿದೆ. ಸಿನಿಮಾ ಗೆಲ್ಲುತ್ತೆ ಎನ್ನುವ ಸೂಚನೆಯನ್ನು ಜೋಕುಮಾರಸ್ವಾಮಿ ದೈವ ಈ ಮೂಲಕ ನೀಡಿದೆ.

ಉಳಿದಂತೆ ಸದ್ಯಕ್ಕೆ ದರ್ಶನ್ ಬಳ್ಳಾರಿಯಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಇನ್ನೂ ದರ್ಶನ್ ಬಂಧನಕ್ಕೊಳಗಾಗಿ ಮೂರು ತಿಂಗಳು ಕಳೆದಿವೆ. ಪೊಲೀಸರು ಹತ್ ಹತ್ರ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಕೂಡ ಸಲ್ಲಿಸಿಯಾಗಿದೆ. ಆದರೂ ಕೂಡ ದರ್ಶನ್ ಇಲ್ಲಿಯವರೆಗೆ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿಲ್ಲ. ಇನ್ನೂ ಇತ್ತ ಈ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಕೂಡ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಂಪಡೆದಿದ್ದಾರೆ. ಸದ್ಯಕ್ಕೆ ದರ್ಶನ್ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ ಸೆಪ್ಟೆಂಬರ್ 17 ರವರೆಗೆ ವಿಸ್ತರಿಸಲಾಗಿದೆ.


Click it and Unblock the Notifications











