ಪರಪ್ಪನ ಅಗ್ರಹಾರದಿಂದ ದರ್ಶನ್ ಬಿಡುಗಡೆಗೆ ಮುಹೂರ್ತ ಫಿಕ್ಸ್, ದೈವ ನುಡಿದ ಭವಿಷ್ಯ ಏನು..?
ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ ಹೀಗಾಗಿಯೇ ಅವರನ್ನು ಜೈಲಿಂದ ಬಿಡುಗಡೆ ಮಾಡಬೇಕು ಅನ್ನುವುದು ಅಭಿಮಾನಿಗಳ ಹಕ್ಕೋತ್ತಾಯ.
ಆದರೆ. ಆ ಕಾಲಕ್ಕೆ ಕರುನಾಡು ಯಾವತ್ತು ಸಾಕ್ಷಿಯಾಗಲಿದೆ ಅನ್ನುವುದು ಇನ್ನೂ ಗೊತ್ತಿಲ್ಲ. ಹೀಗಿರುವಾಗ ಬೆಂಗಳೂರಿನ ಬಾಪೂಜಿನಗರದ ಶಾರದಾಂಬೆ ದೇವಸ್ಥಾನದಲ್ಲಿ ಕುಟ್ಟೊ ಕಲ್ಲು ಮೂಲಕ ಅರ್ಚಕರ ಮಗಳಿಂದ ದೇವಿ ಓಂ ಶಕ್ತಿ ಶಾರದಾಂಬೆ ಭವಿಷ್ಯ ಬರೆಸಿದೆ ಅನ್ನುವ ಸುದ್ದಿ ಗುಲ್ಲಾಗಿದೆದರ್ಶನ್ ಯಾವಾಗ ಬಿಡುಗಡೆ ಆಗುತ್ತಾರೆ ಎಂದು ದೇವಸ್ಥಾನದ ಅರ್ಚಕರೇ ದೈವದ ಮೊರೆ ಹೋಗಿರುವ ಘಟನೆ ನಡೆದಿದೆ ಎಂಬ ಮಾತು ಗುಲ್ಲಾಗಿದೆ..

ಹೌದು. ಓಂ ಶಕ್ತಿ ಶಾರದಾಂಬೆ ಬಿಸುವ ಕಲ್ಲು ಮೂಲಕ ಭವಿಷ್ಯ ನುಡಿದ ದೈವ, ದರ್ಶನ್ ಸದ್ಯ ಮೀನ ರಾಶಿಯಲ್ಲಿದ್ದಾರೆ. ಯಾವುದಕ್ಕೂ ಗ್ರಹಚಾರ ಸರಿಯಾಗಿಲ್ಲ. ಗುರುಬಲ ಇಲ್ಲದೇ ಇರುವುದರಿಂದ ಕೆಟ್ಟ ದೆಸೆ ನಡೆಯುತ್ತಿದೆ, ಶನಿ ಬಂದು ಕೂತಿದ್ದಾನೆ ಎಂದು ಭವಿಷ್ಯ ನುಡಿದಿದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಇನ್ನು ಬೆಂಗಳೂರಿನಲ್ಲಿರುವ ರಾಜರಾಜೇಶ್ವರಿನಗರದ ದರ್ಶನ್ ನಿವಾಸಕ್ಕೆ ವಾಸ್ತುದೋಷ ಇದೆ. ಮನೆಯ ಮೂಲೆಯೇ ಸರಿಯಿಲ್ಲ. ಈ ಎಲ್ಲಾ ಕಾರಣದಿಂದ ಅವರ ಬಿಡುಗಡೆಗೆ ಅಡ್ಡಿ ಆಗಿದೆ. ಇನ್ನೂ 2 ತಿಂಗಳು ಬಿಡುಗಡೆಯ ಭಾಗ್ಯವಿಲ್ಲ. ಬಳಿಕ ಜೈಲಿನಿಂದ ಹೊರಬರಲಿದ್ದಾರೆ ಎಂದು ದೈವ ಭವಿಷ್ಯ ನುಡಿದಿದೆ ಅನ್ನುವುದು ದರ್ಶನ್ ಅಭಿಮಾನಿಗಳ ಪಾಲಿಗೆ ಸದ್ಯದ ಬ್ರೇಕಿಂಗ್ ನ್ಯೂಸು

ಅಂದ ಹಾಗೇ ಇವತ್ತಿಗೆ ಅಭಿಮಾನಿಗಳ ಪಾಲಿನ ನೆಚ್ಚಿನ ದಾಸ ಜೈಲು ಪಾಲಾಗಿ ಎರಡು ತಿಂಗಳಾಗಲಿವೆ. ಇನ್ನೂ ಕೊಲೆ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರಿಗೆ 90 ದಿನಗಳ ಕಾಲಾವಕಾಶ ಇರುತ್ತೆ. ಒಂದು ವೇಳೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ, ಚಾರ್ಜ್ ಶೀಟ್ಸಲ್ಲಿಕೆಗೂ ಮುನ್ನ ಕೊಲೆ ಕೇಸ್ನಲ್ಲಿ ಬೇಲ್ ಸಿಗೋದಿಲ್ಲ.ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಆಗುವವರೆಗೂ ದರ್ಶನ್ & ಗ್ಯಾಂಗ್ಗೆ ನ್ಯಾಯಾಂಗ ಬಂಧನವೇ ಗಟ್ಟಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸದ್ಯ ದರ್ಶನ್, ಪವಿತ್ರಾ ಗೌಡ ಸೇರಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ 4 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಆಗಸ್ಟ್ 14ರಂದು ಮುಕ್ತಾಯವಾಗಲಿದೆ
ಒಟ್ನಲ್ಲಿ ದರ್ಶನ್ ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಭವಿಷ್ಯ ಕೇಳಿ ಅವರ ಕೆಲ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಕೆಲವರು ದರ್ಶನ್ ವಿರುದ್ಧ ಅನೇಕ ಸಾಕ್ಷ್ಯಗಳಿದ್ದು ಯಾವುದೇ ಕಾರಣಕ್ಕೂ ಸದ್ಯಕ್ಕಂತೂ ಹೊರಬರಲು ಸಾಧ್ಯ ಇಲ್ಲ. ದರ್ಶನ್ ಗೆ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದೈವ ನುಡಿದ ಭವಿಷ್ಯ ನಿಜವಾಗುತ್ತದಾ? ದರ್ಶನ್ ಎರಡು ತಿಂಗಳಲ್ಲಿ ಹೊರಬರ್ತಾರಾ ಕಾಲವೇ ಉತ್ತರಿಸಬೇಕು.ಅಲ್ಲಿಯವರೆಗೆ ತಾಳ್ಮೆ ಇರಲಿ..


Click it and Unblock the Notifications











