"ರೇಣುಕಾಸ್ವಾಮಿಯನ್ನು ಸಾಯಿಸಿ" ಎಂದು ಕಿರುಚಾಡಿದ್ರಾ ಪವಿತ್ರಾ ಗೌಡ? ಪ್ರಚೋದನೆ ಕೊಟ್ಟಿದ್ದು ಇವರೇನಾ?

By ಫಿಲ್ಮಿಬೀಟ್ ಡೆಸ್ಕ್

ಪವಿತ್ರಾ ಗೌಡಗೆ ಆಶ್ಲೀಲ ಮೆಸೇಜ್ ಕಳಿಸಿದ ಆರೋಪ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಆರೋಪಿ ನಂ 1 ಆಗಿದ್ದರೆ, ದರ್ಶನ್ ಆರೋಪಿ ನಂ 2 ಎಂದು ಪೊಲೀಸರು ಕೇಸ್ ದಾಖಲಿಸಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಈ ವೇಳೆ ಮಾಧ್ಯಮಗಳಲ್ಲಿ ರೇಣುಕಾಸ್ವಾಮಿ ಕೇಸ್ ಬಗ್ಗೆ ಹಲವು ವರದಿಗಳು ಬಿತ್ತರವಾಗುತ್ತಿದೆ. ಈ ಗ್ಯಾಪ್‌ನಲ್ಲಿ ಪವಿತ್ರಾ ಗೌಡ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದೆ. ಈ ಎಲ್ಲಾ ಕೃತ್ಯಗಳ ಹಿಂದೆ ಪ್ರಮುಖ ಆರೋಪಿಯಾಗಿ ಪವಿತ್ರಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಕೂಡ ಚಾರ್ಜ್‌ಶೀಟ್‌ನಲ್ಲಿ ಪವಿತ್ರಾ ಗೌಡ ಆರೋಪಿ ನಂ 1, ದರ್ಶನ್ ಆರೋಪಿ ನಂ 2 ಆಗಿಯೇ ಉಳಿಸಿಕೊಂಡಿದ್ದಾರೆ.

Renukaswamy begged and said sorry infront of Pavitra Gowda but her mind didn t change

ಈ ಮೊದಲು ದರ್ಶನ್‌ರನ್ನು ಆರೋಪಿ ನಂ 1 ಮಾಡುತ್ತಾರೆ ಪೊಲೀಸರು ಎಂಬ ಮಾತು ಕೇಳಿ ಬಂದಿತ್ತು. ಆದರೆ, ಪವಿತ್ರಾ ಗೌಡನೇ ಆರೋಪಿ ನಂ 1 ಎಂದು ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳಲ್ಲಿ ಪವಿತ್ರಾ ಗೌಡ ಯಾಕೆ ಆರೋಪಿ ನಂ 1 ಅನ್ನೋದನ್ನು ವರದಿ ಮಾಡಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಅವರೇ ಪ್ರಚೋದನೆ ನೀಡಿದ್ದಾರೆ ಎನ್ನಲಾಗಿದೆ. ರೇಣುಕಾ ಸ್ವಾಮಿಯನ್ನು ಸಾಯಿಸುವಂತೆ ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ವರದಿ ಮಾಡಿವೆ.

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್‌ಆರ್ ನಗರ ಸಮೀಪವಿರುವ ಪಟ್ಟಣಗೆರೆ ಶೇಡ್‌ಗೆ ಕರೆದುಕೊಂಡು ಬಂದಿದ್ದರು. ಆ ವೇಳೆ ರೇಣುಕಾಸ್ವಾಮಿಗೆ ಪವಿತ್ರಾ ಗೌಡ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಆ ಬಳಿಕ ಪವಿತ್ರಾ ಗೌಡ ಅವರಿಂದ ಚಪ್ಪಲಿ ತೆಗೆದುಕೊಂಡು ದರ್ಶನ್ ಕೂಡ ಚಪ್ಪಲಿಯಲ್ಲಿಯೇ ಮತ್ತೆ ಹೊಡೆದಿದ್ದಾರೆ. ಇಬ್ಬರೂ ಚಪ್ಪಲಿಯಲ್ಲಿ ಹೊಡೆದ ಬಳಿಕ ರೇಣುಕಾಸ್ವಾಮಿ ನಲುಗಿ ಹೋಗಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ದರ್ಶನ್ ಆ ಬಳಿಕ ರೇಣುಕಾಸ್ವಾಮಿಯನ್ನು ಎತ್ತಿ ಪಕ್ಕದಲ್ಲಿಯೇ ನಿಂತಿದ್ದ ಲಾರಿಗೆ ಬಡಿದಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರ ಮುಂದೆಯೂ ಅಂಗಲಾಚಿ ಬೇಡಿಕೊಂಡಿದ್ದ. ತಪ್ಪಾಗಿದೆ ಬಿಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ದ. ಅಲ್ಲದೆ, ದರ್ಶನ್ ಹಾಗೂ ಪವಿತ್ರಾ ಗೌಡ ಕಾಲುಗಳನ್ನು ಕೂಡ ಹಿಡಿದುಕೊಂಡಿದ್ದ ಎಂದು ವರದಿ ಮಾಡಲಾಗಿದೆ.

Renukaswamy begged and said sorry infront of Pavitra Gowda but her mind didn t change

ರೇಣುಕಾಸ್ವಾಮಿ ಹತ್ಯೆಗೆ ಪ್ರಚೋದನೆ ಮಾಡಿದ್ದೇ ಪವಿತ್ರಾ ಗೌಡ. ಪಟ್ಟಣಗೆರೆ ಶೇಡ್‌ಗೆ ಕರೆದುಕೊಂಡು ಬಂದಾಗ, ಆತನ್ನು ನೋಡುತ್ತಿದ್ದಂತೆ ಪವಿತ್ರಾ ಗೌಡ ಉರಿದು ಬಿದ್ದಿದ್ದರು. "ಆತನನ್ನು ಬಿಡಬೇಡಿ, ಸಾಯಿಸಿ, ಕಿಲ್ ಹಿಮ್" ಅಂತ ಕಿರುಚಿ ಕೊಳ್ಳುತ್ತಾರೆ. ಆ ಬಳಿಕ ದರ್ಶನ್ ಸುಮಾರು 11 ಮಂದಿ ರೇಣುಕಾಸ್ವಾಮಿ ಮೇಲೆ ಏಕಾಏಕಿ ತೀವ್ರವಾಗಿ ಹಲ್ಲೆ ಮಾಡುತ್ತಾರೆ. ಬಳಿಕ ನೆಲಕ್ಕೆ ಬಿದ್ದಿದ್ದ ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ಮರ್ಮಾಂಗ ದರ್ಶನ್‌ಗೆ ತುಳಿಯುತ್ತಾರೆ. ಆಗ ರೇಣುಕಾಸ್ವಾಮಿ ಕೊನೆಯುಸಿರು ಎಳೆಯುತ್ತಾನೆ ಎಂದು ಪೊಲೀಸರಿಂದ ಮಾಹಿತಿ ಸಿಕ್ಕಿದ್ದಾಗಿ ಸುವರ್ಣ ನ್ಯೂಸ್ ವರದಿ ಮಾಡಿದೆ.

ರೇಣುಕಾಸ್ವಾಮಿಯನ್ನು ಕರೆದುಕೊಂಡ ಬಂದ ಕೂಡಲೇ ದರ್ಶನ್ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ವಿನಯ್ ಮೊಬೈಲ್‌ನಲ್ಲಿ ಫೋಟೊ ರಿಟ್ರೀವ್ ಮಾಡಿರುವ ಪೊಲೀಸರಿಗೆ ರೇಣುಕಾಸ್ವಾಮಿ ಎರಡೂ ಕೈ ಮುಂದೆ ಚಾಚಿ ಬೇಡಿಕೊಳ್ಳುತ್ತಿರುವ ಫೋಟೋ ಸಿಕ್ಕಿದ್ದು, ಇದರಲ್ಲಿ ರೇಣುಕಾಸ್ವಾಮಿ ಮೈ ಮೇಲೆ ಬಟ್ಟೆ ಇಲ್ಲದೆ ಬರೀ ಮೈಯಲ್ಲಿದ್ದ ಎಂದೂ ವರದಿಯಾಗಿದೆ. ಸದ್ಯ ಇದೆಲ್ಲ ವಿಷಯವೂ ಅಧಿಕೃತವಾಗಿ ಹೊರಬೀಳಬೇಕಿದೆ.

More from Filmibeat

English summary
Inside story about Pavitra Gowda on Renukaswamy case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X