ಕೆಂಗೇರಿ ಬಿಜಿಎಸ್ ಆಸ್ಪತ್ರೆಯಿಂದ ಸೆಷನ್ಸ್ ಕೋರ್ಟ್‌ಗೆ ನಟ ದರ್ಶನ್
ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಕೋರ್ಟ್‌ಗೆ ತೆರಳಿದ್ದಾರೆ. ವೈದ್ಯರ ಅನುಮತಿ ಪಡೆದು ದರ್ಶನ್ ಜಾಮೀನು ಶ್ಯೂರಿಟಿ ಬಾಂಡ್‌ಗೆ ಸಹಿ ಹಾಕಲು ತೆರಳಿದ್ದಾರೆ. ಮನೆಗೆ ಮರಳಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ದರ್ಶನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಹೈಕೋರ್ಟ್‌ನಿಂದ ರೆಗ್ಯುಲರ್ ಬೇಲ್ ಸಿಕ್ಕಿತ್ತು. ಹಾಗಾಗಿ ಇದೀಗ ಸೆಷನ್ಸ್ ಕೋರ್ಟ್ ಮುಂದೆ ಹಾಜಾರಾಗಿದ್ದಾರೆ.
ನಟ ದರ್ಶನ್‌ಗೆ ಒಂದೂವರೆ ತಿಂಗಳ ಹಿಂದೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿ ಸರ್ಜರಿ ಮಾಡಿಸಬೇಕು ಎನ್ನುವ ನೆಪವೊಡ್ಡಿ 6 ವಾರಗಳ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ 5 ವಾರ ಕಳೆದರೂ ಸರ್ಜರಿ ಮಾಡಿಸಿಕೊಂಡಿರಲಿಲ್ಲ. ಇದೇ ವಿಚಾರವನ್ನು ಎಸ್‌ಎಸ್‌ಪಿ ಪ್ರಸನ್ನ ಕುಮಾರ್ ಕೋರ್ಟ್ ಮುಂದೆ ಇಟ್ಟಿದ್ದರು.

ಇನ್ನೆರಡು ದಿನಗಳಲ್ಲಿ ಸರ್ಜರಿಗೆ ವೈದ್ಯರು ಸಿದ್ಧತೆ ನಡೆಸಿದ್ದಾರೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಹಾಗಾಗಿ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ ಆಗಿತ್ತು. ಆದರೆ ಮೂರು ದಿನಗಳ ಹಿಂದೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಮಧ್ಯಂತ ಜಾಮೀನು ಪಡೆದಿದ್ದ ದರ್ಶನ್‌ಗೆ ರೆಗ್ಯುಲರ್ ಜಾಮೀನು ಕೂಡ ಸಿಕ್ಕಿ ನಿರಾಳರಾಗಿದ್ದರು.
ಮಧ್ಯಂತರ ಜಾಮೀನು ಪಡೆದು ಅಕ್ಟೋಬರ್ 30ರಂದು ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆ ಆಗಿದ್ದರು. ಅಂದು ಪತ್ನಿ ಜೊತೆ ಕಾರಿನಲ್ಲಿ ಪ್ರಯಾಣಿಸಿ ಬೆಂಗಳೂರು ಸೇರಿದ್ದರು. ಬಳಿಕ ಮೂರ್ನಾಲ್ಕು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದ ದರ್ಶನ್ ಬಳಿಕ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆ ತೆರಳಿದ್ದರು. ಅಲ್ಲಿನ ವೈದ್ಯರು ತಪಾಸಣೆ ನಡೆಸಿ ದರ್ಶನ್ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು.
ದರ್ಶನ್ ಬೆನ್ನುಹುರಿ ಸಮಸ್ಯೆಗೆ ಸರ್ಜರಿ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ಸರ್ಜರಿಗೆ ದರ್ಶನ್ ಒಪ್ಪುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಅಷ್ಟರಲ್ಲೇ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಿತ್ತು. ಬಳಿಕ ಅವಧಿ ವಿಸ್ತರಣೆಯಾಗಿ ರಿಲೀಫ್ ಸಿಕ್ಕಿತ್ತು. ಕೊನೆಗೆ ರೆಗ್ಯುಲರ್ ಜಾಮೀನು ಕೂಡ ಪಡೆದರು.
ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಬಂದು ದರ್ಶನ್ ಅವರನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಕರೆದುಕೊಂಡು ಹೊರಟಿದ್ದಾರೆ ಎನ್ನಲಾಗಿತ್ತು. ಕತ್ರಿಗುಪ್ಪೆಯಲ್ಲಿರುವ ವಿಜಯಲಕ್ಷ್ಮಿ ಅವರ ಅಪಾರ್ಟ್‌ಮೆಂಟ್ ಫ್ಲಾಟ್‌ಗೆ ದರ್ಶನ್ ತೆರಳುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ದರ್ಶನ್ ಇನ್ನು ಡಿಸ್ಚಾರ್ಜ್ ಆಗಿಲ್ಲ, ವೈದ್ಯರ ಅನುಮತಿ ಪಡೆದು ಹೊರ ಬಂದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











