ಮಾತನಾಡದ ದರ್ಶನ್; ಕಣ್ಣೀರಾಕುತ್ತಾ ಕೋರ್ಟ್‌ನಿಂದ ಹೊರಬಂದ ಪವಿತ್ರಾ ಗೌಡ

ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ 17 ಜನ ಆರೋಪಿಗಳು ಇಂದು(ಫೆಬ್ರವರಿ 25) ಸೆಷನ್ಸ್‌ ಕೋರ್ಟ್‌ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಎ1 ಪವಿತ್ರಾ ಗೌಡ ಹಾಗೂ ಎ2 ದರ್ಶನ್ ಕೂಡ ಕೋರ್ಟ್‌ಗೆ ಬಂದಿದ್ದರು. ವಿಚಾರಣೆ ನಡೆಸಿದ ಬಳಿಕ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಕೋರ್ಟ್ ಮುಂದೂಡಿದೆ.

ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಮುಖ್ಯವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಲೇಬೇಕು ಎಂದು ಹೈಕೋರ್ಟ್ ಸೂಚಿಸಲಾಗಿತ್ತು. ಹಾಗಾಗಿ ಎಲ್ಲಾ 17 ಜನ ಆರೋಪಿಗಳು ಕೋರ್ಟ್‌ಗೆ ಆಗಮಿಸಿದ್ದರು. ಎಲ್ಲರ ಹಾಜರಾತಿಯನ್ನು ಕೋರ್ಟ್ ಸಿಬ್ಬಂದಿ ದಾಖಲಿಸಿಕೊಂಡರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ದೂರವೇ ನಿಂತಿದ್ದರು. ಪರಸ್ಪರ ಮಾತನಾಡಲು ಇಲ್ಲ, ಅಂತರ ಕಾಯ್ದುಕೊಂಡಿದ್ದರು ಎಂದು ವರದಿಯಾಗಿದೆ.

Renukaswamy case Darshan Pavitra Gowda Appeared in court hearing adjourned till April 8th

ನಾಲ್ಕು ಜನ ಆರೋಪಿಗಳಿಗೆ ಮಾಫಿ ಸಾಕ್ಷಿಗೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರಾದ ಸುನಿಲ್ ಆರೋಪಿಸಿದ್ದಾರೆ. ಇತರೆ ಆರೋಪಿಗಳಿಗೂ ಅಪ್ರೂವ್ ಆಗುವಂತೆ ಪೊಲೀಸರು ಹೇಳುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಡ್ಜ್ ಜೈಶಂಕರ್ "ನೀವು ಈ ಬಗ್ಗೆ ಅರ್ಜಿ ಹಾಕಿದರೆ ವಿಚಾರಣೆ ನಡೆಸಬಹುದು" ಎಂದಿದ್ದಾರೆ. ಅರ್ಜಿ ಹಾಕಲು ಕೋರ್ಟ್ ಸೂಚಿಸಿ ವಿಚಾರಣೆ ಮುಂದೂಡಿದ್ದಾರೆ.

ವಿಚಾರಣೆ ಮುಗಿಸಿ ಪವಿತ್ರಾ ಗೌಡ ಕಣ್ಣೀರು ಹಾಕುತ್ತಾ ಕೋರ್ಟ್‌ನಿಂದ ಹೊರಬಂದಿದ್ದಾರೆ. ಬಳಿಕ ಕೋರ್ಟ್‌ನಿಂದ ನೇರವಾಗಿ ಆರ್‌ಆರ್‌ ನಗರದ ಮನೆಯತ್ತ ಪವಿತ್ರಾ ಗೌಡ ಹೊರಟಿದ್ದಾರೆ. ಜನವರಿ 10ರಂದು ನಡೆದಿದ್ದ ಕೋರ್ಟ್ ವಿಚಾರಣೆ ವೇಳೆಯೂ ದರ್ಶನ್- ಪವಿತ್ರಾ ಮುಖಾಮುಖಿ ಆಗಿದ್ದರು. ಈ ವೇಳೆ ಇಬ್ಬರೂ ಮಾತನಾಡಿದ್ದರು. ಆದರೆ ಈ ಬಾರಿ ಮಾತನಾಡಿಲ್ಲ.

ಆರ್‌ಆರ್‌ ನಗರದ ಮನೆಯಿಂದ ದರ್ಶನ್ ಕೋರ್ಟ್‌ಗೆ ಹೊರಟಾಗ ಕೆಲ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ದರ್ಶನ್ ಕೈ ಕುಲುಕಿ ಅಭಿಮಾನಿಗಳು ವಿಶ್ ಮಾಡಿದ್ದರು. ಕೆಲವರು ನೆಚ್ಚಿನ ನಟನ ಕಾಲಿಗೆ ಎರಗಿದ್ದರು. ಆ ಬಳಿಕ ಕಾರ್ ಏರಿ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಆಗಮಿಸಿದ್ದರು.

ಡಿಸೆಂಬರ್ 17ರಂದು ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿ ಹೊರ ಬಂದಿದ್ದರು. ಜೈಲಿನಿಂದ ಹೊರ ಬರುತ್ತಲೇ ನೇರವಾಗಿ ತಲಘಟ್ಟಪುರದ ವಜ್ರಮುನೇಶ್ವರ ದೇವಾಲಯಕ್ಕೆ ತೆರಳಿದ್ದಾರೆ. ಪೂಜೆ ಮಾಡಿ ಹರಕೆ ತೀರಿಸಿದ್ದರು. ಬಳಿಕ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಕುಂಭಮೇಳಕ್ಕೂ ಹೋಗಿ ಪುಣ್ಯಸ್ನಾನ ಮಾಡಿ ಬಂದಿದ್ದಾರೆ. ಈ ಬಗ್ಗೆ ಮಾಡಿದ್ದ ಪೋಸ್ಟ್‌ಗೂ ಸಾಕಷ್ಟು ಟೀಕೆ ಎದುರಿಸುವಂತಾಯಿತು. ಅದಕ್ಕೆ ಬೇಸರ ವ್ಯಕ್ತಪಡಿಸಿ ಮತ್ತೊಂದು ಪೋಸ್ಟ್ ಮಾಡಿದ್ದರು.

ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ 777 ಸ್ಟುಡಿಯೋ ಬ್ಯೂಟಿಕ್ ರೀ-ಲಾಂಚ್ ಮಾಡಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೊದಲಿನಂತೆ ಫುಲ್ ಆಕ್ಟೀವ್ ಆಗಿದ್ದಾರೆ. ಫೋಟೊ, ರೀಲ್ಸ್ ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
All accused in the Renukaswamy case, including Darshan, Pavithra Gowda will appeared before court, Pavitra Gowda Tears
Read more about: darshan pavitra gowda sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X