ರೇಣುಕಾಸ್ವಾಮಿ ದುರಂತ ಅಂತ್ಯ ಕಂಡು ಒಂದು ವರ್ಷ ; ದರ್ಶನ್ ನಮ್ಮನ್ನು ಸಂಪರ್ಕಿಸುತ್ತಾರೆ ಎನ್ನುವ ನಂಬಿಕೆ ಇಲ್ಲ ಎಂದ ತಂದೆ..!

ಇದೇ ದಿನ ಸರಿಯಾಗಿ ಒಂದು ವರ್ಷದ ಹಿಂದೆ ಕನ್ನಡ ಚಿತ್ರರಂಗ ಬೆಚ್ಚಿ ಬಿದ್ದಿತ್ತು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ದುರಂತ್ಯ ಅಂತ್ಯವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ನಾನಾ ಬೆಳವಣಿಗೆಗಳು ನಡೆದಿವೆ. ಜೈಲು ಪಾಲಾಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನು ಪಡೆದು ಹೊರಗಡೆ ಕೂಡ ಬಂದಾಗಿದೆ. ಆದರೆ. ಆ ಮನೆಯಲ್ಲಿ ಇನ್ನೂ ನೀರವ ಮೌನ ಇದೆ. ಮಗನನ್ನು ಕಳೆದುಕೊಂಡಿರುವ ರೇಣುಕಾಸ್ವಾಮಿಯ ತಂದೆ ತಾಯಿಯ ದುಃಖ ಕಡಿಮೆಯಾಗಿಲ್ಲ. ಪುತ್ರ ಶೋಕಂ ನಿರಂತರ.

ಇನ್ನು ರೇಣುಕಾಸ್ವಾಮಿಯ ಪತ್ನಿ ಸಹನಾ ಅವರ ಕಷ್ಟವನ್ನು ಯಾರು ಕೇಳುವರಿಲ್ಲ. ಸರ್ಕಾರ ಮಾತಿಗೆ ತಕ್ಕಂತೆ ನಡೆಯಲಿಲ್ಲ. ಈ ಹಿನ್ನೆಲೆ ತಮ್ಮ ಮನದ ನೋವನ್ನು ಮಾಧ್ಯಮಗಳ ಮುಂದೆ ರೇಣುಕಾ ಸ್ವಾಮಿ ಕುಟುಂಬ ವರ್ಗ ಹಂಚಿಕೊಂಡಿದೆ. ನ್ಯಾಯ ಸಿಗುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಹಾಗಿದ್ದರೆ.. ರೇಣುಕಾ ಸ್ವಾಮಿ ಕುಟುಂಬದವರು ಮಾಧ್ಯಮವರಿಗೆ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ

Renukaswamy Case Turns One Year Victim s Father Says Darshan Will Never Reach Out

ದರ್ಶನ್ ನಮ್ಮನ್ನು ಸಂಪರ್ಕಿಸುತ್ತಾರೆ ಎನ್ನುವ ನಂಬಿಕೆ ಇಲ್ಲ.

ಮಗನನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಆ ನೋವಲ್ಲಿಯೇ ಇನ್ನು ಇದ್ದೇವೆ. ಮೊಮ್ಮಗನ ಆರೈಕೆ ಆಟ ಪಾಠದಲ್ಲಿ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿರುವ ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥಯ್ಯ ಶಿವನಗೌಡ ನ್ಯಾಯ ಸಿಗುತ್ತೆ ಎನ್ನುವ ಭರವಸೆ ನಮಗೆ ಇನ್ನೂ ಇದೆ ಎಂದು ಹೇಳಿದ್ದಾರೆ. ಸರ್ಕಾರದ ಮೇಲೆ, ಪೊಲೀಸರ ಮೇಲೆ ಮತ್ತು ಕಾನೂನು ವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಜಾಮೀನಿನ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಈ ಪ್ರಕರಣವನ್ನು ಸರ್ಕಾರ ಫಾಸ್ಟ್ ಟ್ರ್ಯಾಕ್ ಮೂಲಕ ನಡೆಸಬೇಕು ಎಂದು ಮನವಿಯನ್ನು ಮಾಡಿರುವ ಕಾಶಿನಾಥಯ್ಯ ಶಿವನಗೌಡ ಹೊರಗಡೆ ಬಂದ ನಂತರ ದರ್ಶನ್ ನಮ್ಮನ್ನು ಸಂಪರ್ಕಿಸಿಲ್ಲ ಅವರು ನಮ್ಮನ್ನು ಸಂಪರ್ಕಿಸುತ್ತಾರೆ ಎನ್ನುವ ನಂಬಿಕೆ ಕೂಡ ನಮಗೆ ಇಲ್ಲ ಎಂದು ಹೇಳಿದ್ದಾರೆ.

ಕಾನೂನನ್ನು ಗಮನದಲ್ಲಿಟ್ಕೊಂಡು ಅವರು ಸುಮ್ಮನೆ ಇರಬಹುದು ಎಂದು ಹೇಳಿರುವ ರೇಣುಕಾ ಸ್ವಾಮಿ ಅವರ ತಂದೆ ಒಂದು ವೇಳೆ ಅವರು ಸಂಪರ್ಕಿಸಲು ಬಂದರೆ ನಮ್ಮ ಹಿರಿಯರು ಆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ನಮ್ಮ ಸೊಸೆ ವಿಚಾರದಲ್ಲಿ ಸರ್ಕಾರ ಮಾತು ಕೊಟ್ಟಂತೆ ನಡೆಯಲಿಲ್ಲ ನಮ್ಮ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು ಆದರೆ ಆದರೆ ಸೊಸೆಗೆ ನೌಕರಿ ಕೊಡಲು ಕಾನೂನು ಪ್ರಕಾರ ಬರಲ್ಲ ಅಂದಿದ್ದಾರೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ತಾಯಿ ರತ್ನ ಪ್ರಭ ಮಾತು

ನಮ್ಮ ಮಗನನ್ನು ಕಳೆದುಕೊಂಡು ಒಂದು ವರ್ಷವಾಗಿದೆ ಎಂದಿರುವ ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭ ನಾವೆಲ್ಲ ದುಃಖದಲ್ಲಿದ್ದೇವೆ ಆ ನೋವನ್ನು ಮರೆಯಲು ಇಂದಿಗೂ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ನನ್ನ ಸೊಸೆಯ ಭವಿಷ್ಯಕ್ಕೆ ಬುನಾದಿ ಹಾಕಬೇಕು ಎಂದು ಸರ್ಕಾರಕ್ಕೆ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದ್ದೇನು ?

ರೇಣುಕಾಸ್ವಾಮಿ ದುರಂತ ನಡೆದು ಒಂದು ವರ್ಷವಾದ ಹಿನ್ನೆಲೆ ಮಾತನಾಡಿರುವ ರೇಣುಕಾ ಸ್ವಾಮಿ ಪತ್ನಿ ಸಹನಾ, ನಮ್ಮ ಮನೆಯವರು ತೀರಿಕೊಂಡು ಒಂದು ವರ್ಷವಾಗಿದೆ, ಮನೆಯಲ್ಲಿ ತಂದೆ ಮತ್ತು ತಾಯಿಗೆ ವಯಸ್ಸಾಗಿದೆ, ಒಂದು ವರ್ಷದಿಂದ ಸಾಕಷ್ಟು ನೋವು ನೋವುಂಡಿದ್ದೇವೆ ಎಂದು ಹೇಳಿದ್ದಾರೆ. ನನ್ನ ಮತ್ತು ನನ್ನ ಮಗುವಿನ ಭವಿಷ್ಯಕ್ಕೆ ಸರ್ಕಾರ ನೆರವಾಗಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಆತ್ಮಶಾಂತಿ

ರೇಣುಕಾಸ್ವಾಮಿ ಅವರ ಚಿಕ್ಕಪ್ಪ ಷಡಕ್ಷರಯ್ಯ ಕೂಡ ಮಾತನಾಡಿದ್ದು, ರೇಣುಕಾಸ್ವಾಮಿ ಸಾವನ್ನಪ್ಪಿದ ನಕ್ಷತ್ರದ ಪ್ರಕಾರ ಆತ್ಮಶಾಂತಿಗೆ ಪೂಜೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಮಗುವನ್ನು ನೊಡಿದ್ರೆ ನಮಗೆ ತುಂಬಾ ದುಃಖ ಆಗುತ್ತೆ ಎಂದಿರುವ ಷಡಕ್ಷರಯ್ಯ ರೇಣುಕಾಸ್ವಾಮಿ ಪತ್ನಿ ಸಹನಾ ಜೀವನಕ್ಕೆ ಸರ್ಕಾರ ಒಂದು ದಾರಿ ಮಾಡಬೇಕು ಎಂದು ಹೇಳಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ದೇಶದ ಕಾನೂನು ಇತಿಹಾಸದಲ್ಲಿ ಯಾರನ್ನೂ ಬಿಟ್ಟಿಲ್ಲ. ಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಭರವಸೆ ಇದೆ ಎಂದು ಕೂಡ ಹೇಳಿದ್ದಾರೆ.

More from Filmibeat

English summary
As the Renukaswamy murder case completes one year, the victim’s father says Darshan never contacted the family. They now request a fast-track hearing for justice.
Read more about: darshan filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X