ದರ್ಶನ್ ಮತ್ತು ಪವಿತ್ರಾ ಗೌಡಗೆ ಮರಣದಂಡನೆ, ಕೋರ್ಟ್ ಹಾಲ್‌ನಲ್ಲಿ ಅಲ್ಲೋಲ..ಕಲ್ಲೋಲ..!
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ಈ ಮಾತುಗಳಿಗೆ ಸದ್ಯ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್ ಅನುದಿನ ಅನುಕ್ಷಣ ಪರಪ್ಪನ ಅಗ್ರಹಾರದಲ್ಲಿ ನರಳುತ್ತಿದ್ದಾರೆ. ಯಾಕೆಂದರೆ.. ಈ ಬಾರಿ ಹಿಂದಿನಂತೆ ವಿಐಪಿ ಸೌಲಭ್ಯ ಇಲ್ಲ. ಬಾಯ್ತಪ್ಪಿ ಕೇಳುವ ಅವಕಾಶ ಕೂಡ ಇಲ್ಲ. ಸುಪ್ರೀಂ ಕೋರ್ಟ್ ಖಂಡತುಂಡವಾಗಿ ಈ ವಿಚಾರದಲ್ಲಿ ಆದೇಶವನ್ನು ನೀಡಿದೆ. ಯಾವ ವಿಶೇಷ ಸೌಲಭ್ಯ ನೀಡದಂತೆ ಹೇಳಿದೆ.
ಈ ಹಿನ್ನೆಲೆ ಕೊನೆ ಪಕ್ಷ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿದಂತೆ ಕನಿಷ್ಠ ಸೌಲಭ್ಯವಾದರೂ ಕೊಡಿ ಎಂದು ದರ್ಶನ್ ಪರ ವಕೀಲರು ಬೆಂಗಳೂರಿನ 64ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣಾಧೀನ ಕೈದಿಗೆ ಕೊಡಬಹುದಾದ ಕನಿಷ್ಠ ಸೌಲಭ್ಯಗಳನ್ನು ನೀಡುವಂತೆ ನಾವು ಕೇಳುತ್ತಿದ್ದೇವೆ. ಕಾನೂನು ಪ್ರಕಾರ ಏನು ಕೊಡಬೇಕೋ ಅದನ್ನೇ ಕೊಡಲಿ ಎಂದು ದರ್ಶನ್ ಪರ ವಕೀಲರು ವಾದವನ್ನು ಮಾಡುತ್ತಿದ್ದಾರೆ. ಪ್ರಿಸನ್ಸ್ ಕಾಯ್ದೆಯ 63ರ ಪ್ರಕಾರ ಸ್ವಂತ ವಸ್ತುಗಳನ್ನು ಹೊಂದಲು ಅವಕಾಶ ಇದೆ ಎಂದು ಹೇಳುತ್ತಿದ್ಧಾರೆ.

ಮತ್ತೊಂದು ಕಡೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇರುವುದು ಸೂಕ್ತವಲ್ಲ ಅವರನ್ನು ಈ ಕೂಡಲೇ ಬಳ್ಳಾರಿ ಜೈಲಿಗೆ ಕಳುಹಿಸಬೇಕೆಂದು ಸರ್ಕಾರದ ಪರ ವಕೀಲರು ಮನವಿಯನ್ನು ಮಾಡಿದ್ದಾರೆ. ಇಂದು (ಸೆಪ್ಟೆಂಬರ್ 3) ಈ ಎರಡು ಅರ್ಜಿಗಳ ವಿಚಾರಣೆ ಕೂಡ ನ್ಯಾಯಾಲಯದಲ್ಲಿ ನಡೆದಿದೆ. ಇದರ ನಡುವೆ ಅನಾಮಿಕ ವ್ಯಕ್ತಿಯೊಬ್ಬರು ನ್ಯಾಯಾಲಯದ ಆವರಣದಲ್ಲಿ ಅಲ್ಲೋಲ..ಕಲ್ಲೋಲ ಸೃಷ್ಟಿಸಿದ್ದಾರೆ.
ಹೌದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಕೋರ್ಟ್ ಹಾಲ್‌ಗೆ ಏಕಾಏಕಿ ನುಗ್ಗಿದ ವ್ಯಕ್ತಿಯೊಬ್ಬರು ದರ್ಶನ್.. ಪವಿತ್ರಾ ಗೌಡ ಸೇರಿ ಉಳಿದ ಎಲ್ಲಾ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಅನಾಮಿಕ ವ್ಯಕ್ತಿಯ ಈ ವರ್ತನೆಯಿಂದ ತಬ್ಬಿಬ್ಬಾದ ನ್ಯಾಯಾಧೀಶರು, ಅರ್ಜಿ ಹಿಡಿದು ಬಂದ ವ್ಯಕ್ತಿಯ ಹಿನ್ನೆಲೆ ಕೇಳಿದಾಗ ವ್ಯಕ್ತಿ ನಾನು ರವಿ ಬೆಳಗೆರೆ ಕಡೆಯವನು ಎಂದು ಹೇಳಿದ್ದಾರೆ. ಇದಕ್ಕೆ ನ್ಯಾಯಾಧೀಶರು ಯಾರ್ಯಾರೋ ನೀಡುವ ಅರ್ಜಿಯನ್ನು ಪಡೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದು ಸರ್ಕಾರದ ಮುಖೇನ ಬರುವಂತೆ ಆ ವ್ಯಕ್ತಿಗೆ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಿಯಮದ ಪ್ರಕಾರವೇ ನಡೆಸಬೇಕು ಮತ್ತು ಹೊರಗಿನ ವ್ಯಕ್ತಿಗಳ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದ್ಧಾರೆ. ಆ ನಂತರ ನ್ಯಾಯಾಧೀಶರ ಆದೇಶದ ಮೇರೆಗೆ ಆ ವ್ಯಕ್ತಿಯನ್ನು ಅಲ್ಲಿಂದ ಹೊರಗಡೆ ಕಳುಹಿಸಲಾಗಿದೆ.
ಅಪರಿಚಿತ ವ್ಯಕ್ತಿಯ ಈ ಕೆಲಸದಿಂದ ಕೆಲ ಕಾಲ ಕೋರ್ಟ್ ಹಾಲ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು ಸುಳ್ಳಲ್ಲ. ಇನ್ನುಳಿದಂತೆ ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡುವಂತೆ ಕೋರಲಾದ ಅರ್ಜಿ ಮತ್ತು ದಿಂಬು, ಹಾಸಿಗೆ, ಕನಿಷ್ಠ ಮೂಲಭೂತ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಸಿಹೆಚ್64 ಕೋರ್ಟ್ ಆದೇಶವನ್ನು ಸೆಪ್ಟೆಂಬರ್ 9ರಂದು ಕಾಯ್ದಿರಿಸಿದೆ. ಅವತ್ತೇ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ..? ಅಥವಾ ಪರಪ್ಪನ ಅಗ್ರಹಾರದಲ್ಲಿಯೇ ಉಳಿಯುತ್ತಾರಾ..? ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ. ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರವಾಗಿದ್ದೇ ಆದಲ್ಲಿ ದರ್ಶನ್ ಅವರ ಸಂಕಷ್ಟ ಇನ್ನೂ ಹೆಚ್ಚಾಗಲಿದೆ. ವಿಜಯಲಕ್ಷ್ಮಿ ಅವರ ಹೋರಾಟ ಕೂಡ ಇನ್ನೂ ಕಠಿಣವಾಗಲಿದೆ. ಈ ಪ್ರಕರಣದಲ್ಲಿ ಮುಂದೆ ಏನಾಗುತ್ತೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











