ನಟ ದರ್ಶನ್‌ಗೆ ಜಾಮೀನು ಮಂಜೂರು; ಆಪ್ತರ ಫಸ್ಟ್ ರಿಯಾಕ್ಷನ್

ಅಂತೂ ಇಂತೂ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7 ಮಂದಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಮಧ್ಯಂತರ ಜಾಮೀನು ಪಡೆದು ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ಅಭಿಮಾನಿಗಳು ಜಮಾಯಿಸಿ ಸಂಭ್ರಮಿಸಿದ್ದಾರೆ.

ನಟ ದರ್ಶನ್ ಫೋಟೊಗೆ ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಾಸ್ ಈಸ್ ಬ್ಯಾಕ್ ಎಂದು ಪೋಸ್ಟ್ ಮಾಡಿ ಟ್ರೆಂಡ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ, ದರ್ಶನ್ ಆಪ್ತರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ವಿಜಯಲಕ್ಷ್ಮಿ ದರ್ಶನ್, ನಟ ಧನ್ವೀರ್ ಗೌಡ, ನಟಿ ಸೋನಲ್ ಮಂಥೆರಿಯೋ, ನಟಿ ರಕ್ಷಿತಾ ಪ್ರೇಮ್ ಸಹ ಪೋಸ್ಟ್ ಮಾಡಿದ್ದಾರೆ.

Renukaswamy case wife Vijayalakshmi Dhanveer Rachita reacts to Darshan gets Bail

ಶಿವನ ದೇವಸ್ಥಾನದಲ್ಲಿ ಹೂವು ಹಿಡಿದ ಫೋಟೊ ಹಂಚಿಕೊಂಡು ವಿಜಯಲಕ್ಷ್ಮಿ ಶಿವನ ಸ್ತೋತ್ರ ಹಂಚಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ನಟಿ ಸೋನಲ್ ಮಂಥೆರಿಯಾ ಕೂಡ ಇದೇ ರೀತಿ 'ಕಾಟೇರ' ಟೈಟಲ್ ಸಾಂಗ್ ಮ್ಯೂಸಿಕ್ ಹಾಕಿ ಖುಷಿ, ಧನ್ಯವಾದದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ನಟ ಧನ್ವೀರ್ ಗೌಡ ಚಾಮುಂಡಿ ತಾಯಿಗೆ ಧನ್ಯವಾದ ತಿಳಿಸಿ ಫೋಟೊ ಹಂಚಿಕೊಂಡಿದ್ದಾರೆ. "ಉಸಿರಿರುವರೆಗೂ ಇರ್ತೀವಿ ನಿಮ್ಮಿಂದೆ" ಎಂದು ಬರೆದು ದರ್ಶನ್ ಜೊತೆಗಿನ ಫೋಟೊ ಹಾಕಿದ್ದಾರೆ. ಅದಕ್ಕೆ 'ಕಾಟೇರ' ಚಿತ್ರದ ಸಾಂಗ್ ಬಿಜಿಎಂ ಸೇರಿಸಿದ್ದಾರೆ. ರಕ್ಷಿತಾ ಪ್ರೇಮ್ ಹೂವಿನ ಫೋಟೊ ಹ್ಯಾಪಿ ನ್ಯೂಸ್, ಹ್ಯಾಪಿ ಡೇ ಎಂದು ಬರೆದುಕೊಂಡಿದ್ದಾರೆ.

ದರ್ಶನ್ ಆಪ್ತ ಸ್ನೇಹಿತ ತರುಣ್ ಸುಧೀರ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ರಾಬರ್ಟ್' ಚಿತ್ರದ ಹಾಡಿನ ಹಿನ್ನೆಲೆಯಲ್ಲಿ ದರ್ಶನ್ ಫೋಟೊ ಹಾಕಿ ನಾಡಿನ ಜನತೆಗೆ ಹನುಮ ಜಯಂತಿ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ.

More from Filmibeat

English summary
Actor Darshan and Pavithra Gowda get bail, close friend first reaction in social media
Read more about: darshan sandalwood case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X