ದರ್ಶನ್ & ಗ್ಯಾಂಗ್; ಜೈಲಿನಲ್ಲಿರುವ 4ನೇ ಆರೋಪಿ ತಾಯಿ ನಿಧನ
ನಟ ದರ್ಶನ್ ಹಾಗೂ ಗ್ಯಾಂಗ್ ಸೇರಿ ರೇಣುಕಾಸ್ವಾಮಿಯನ್ನು ಹತ್ಯೆಗೈದಿರುವ ಆರೋಪವಿದೆ. ಪ್ರಕರಣ ಸಂಬಂಧ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ. ಸದ್ಯ ನಾಲ್ಕನೇ ಆರೋಪಿ ರಾಘವೇಂದ್ರನ ತಾಯಿ ಕೊನೆಯುಸಿರೆಳೆದಿದ್ದಾರೆ.
ಪ್ರಕರಣದ ಆರೋಪಿ A4 ರಘು ತಾಯಿ ಮಂಜುಳಮ್ಮ (75) ಇಂದು(ಜುಲೈ 20) ಬೆಳಗ್ಗೆ ಮೃತಪಟ್ಟಿದ್ದಾರೆ. ಆತ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗಿದ್ದ. ಮಾನಸಿಕ ಅಸ್ವಸ್ಥತೆ, ವಯೋಸಹಜ ಕಾಯಿಲೆಯಿಂದ ಮಂಜುಳಮ್ಮ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ. ರಾಘವೇಂದ್ರನ ತಾಯಿ ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ವಾಸವಿದ್ದರು. ರಘು ಸಹೋದರ ಮುರುಳಿ ತಾಯಿಯ ಆರೈಕೆ ಮಾಡುತ್ತಿದ್ದರು.

ಪ್ರೀತಿಸಿ ಮದುವೆ ಆಗಿದ್ದ ರಾಘವೇಂದ್ರ ಬೇರೆ ಕಡೆ ವಾಸವಿದ್ದ. ಆಗಾಗ್ಗೆ ಸಹೋದರನ ಮನೆಗೆ ಹೋಗಿ ತಾಯಿ ಆರೋಗ್ಯ ವಿಚಾರಿಸುತ್ತಿದ್ದ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ರಾಘು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಘವೇಂದ್ರ ಪ್ರಮುಖ ಆರೋಪಿಯಾಗಿದ್ದಾನೆ. ಆತನ ಮೂಲಕವೇ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು ಎಂದು ವರದಿಯಾಗಿದೆ. ಅಂದಹಾಗೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿ, ನಟ ದರ್ಶನ್ ಎ2, ಪವನ್ ಎಂಬಾತ ಎ3 ಆರೋಪಿ, ರಾಘವೇಂದ್ರ ನಾಲ್ಕನೇ ಆರೋಪಿ ಆಗಿದ್ದಾನೆ.
ಈ ಹಿಂದೆ ಪ್ರಕರಣ 7ನೇ ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮಗನ ಬಂಧಣ ವಿಚಾರದಿಂದ ಮನನೊಂದಿದ್ದರು. ಹಾಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. 4ನೇ ಆರೋಪಿ ರಾಘವೇಂದ್ರ ಸೂಚನೆ ಮೇರೆಗೆ ಆಟೊ ಚಾಲಕನಾಗಿದ್ದ ಅನುಕುಮಾರ್ ತನ್ನ ಆಟೋದಲ್ಲಿ ರೇಣುಕಾಸ್ವಾಮಿಯನ್ನು ಕೊಂಚ ದೂರ ಕರೆದುಕೊಂಡು ಬಂದಿದ್ದ. ಬಳಿಕ ರವಿ ಎಂಬಾತ ಬಾಡಿಗೆ ಕಾರಿನಲ್ಲಿ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆತಂದಿದ್ದು ತನಿಖೆ ವೇಳೆ ಗೊತ್ತಾಗಿತ್ತು.


Click it and Unblock the Notifications











