ಪವಿತ್ರಾ ಗೌಡಗೆ ಜೈಲು: ದರ್ಶನ್ ಸೇರಿದಂತೆ 4 ಮಂದಿಗೆ ಪೊಲೀಸ್ ಕಸ್ಟಡಿ

By ಫಿಲ್ಮಿಬೀಟ್ ಡೆಸ್ಕ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ 19 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಕಳೆದ 11 ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿದ್ದ ದರ್ಶನ್, ಪವಿತ್ರಾ ಗೌಡ ಹಾಗೂ ಉಳಿದ ಆರೋಪಿಗಳ ಅವಧಿ ಇಂದಿಗೆ (ಜೂನ್ 20) ಅಂತ್ಯವಾಗಲಿದೆ. ಈ ಸಂಬಂಧ ಇವರೆಲ್ಲರನ್ನೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.

ಕಳೆದ ಬಾರಿ ಪೊಲೀಸ್ ಕಸ್ಟಡಿ ಅಂತ್ಯ ಕೊಂಡ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ವಕೀಲರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂದು ಮನವಿ ಮಾಡಿದ್ದರು. ಆದರೂ, ತನಿಖೆ, ಸ್ಥಳ ಮಹಜರು ಹಾಗೂ ಸಾಕ್ಷ್ಯಗಳನ್ನು ರಿಕವರಿ ಮಾಡಿಕೊಳ್ಳಬೇಕು ಎಂಬ ಕಾರಣ ನೀಡಿ ದರ್ಶನ್ ಹಾಗೂ ಸಂಗಡಿಗಳನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಕೂಡ ಮನವಿ ಮಾಡಿಕೊಂಡಿದ್ದರು. ಆಗ 5 ದಿನಗಳ ಕಾಲ ಷರತ್ತಿನ ಮೇರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದರು.

Renukaswamy murder case actor Darshan Pavithra Gowda and other accused sentenced Judicial Custody

ಇಂದು (ಜೂನ್ 20) ಎರಡನೇ ಅವಧಿ ಮುಗಿದಿದ್ದರಿಂದ ಸಂಜೆ 5 ಗಂಟೆಯೊಳಗೆ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಬೇಕಿತ್ತು. ಅದರಂತೆ ಮ್ಯಾಜಿಸ್ಟ್ರೇಜ್ ಕೋರ್ಟ್‌ಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳನ್ನು ಕರೆದುಕೊಂಡು ಬರಲಾಗಿತ್ತು. ಎರಡು ಕಡೆಯ ವಕೀಲರು ವಾದ ವಿವಾದ ನಡೆದಿತ್ತು.

ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ದರ್ಶನ್ ಹಾಗೂ ಆರು ಮಂದಿಯನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಕೇಳಿದ್ದರು. ಅದರಂತೆ, ನ್ಯಾಯಮೂರ್ತಿ ವಿಶ್ವನಾಥ್ ಸಿ ಗೌಡರ್ ಅವರು ದರ್ಶನ್ ಹಾಗೂ ಆರು ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎನ್ನಲಾಗಿದೆ.

ಪೊಲೀಸ್ ಕಸ್ಟಡಿಗೆ ಹೋದವರು

ನ್ಯಾಯಾಧೀಶರ ಮುಂದೆ ಎಸ್‌ಪಿಪಿ ವಾದ ಮಂಡಿದ್ದರು. ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ. ಅಲ್ಲದೇ 30 ಲಕ್ಷ ರೂಪಾಯಿ ಹಣದ ಮೂಲದ ಪ್ರತ್ಯಕ್ಷ ಸಾಕ್ಷಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡಬೇಕು ಎಂದು ವಾದಿಸಿದ್ದರು. ಹೀಗಾಗಿ ದರ್ಶನ್ (A2), ವಿನಯ್ (A10), ಪ್ರದೋಶ್ (A14), ಧನರಾಜ್ (A9) ಇವರನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

ಜೈಲು ಸೇರಿದವರು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಹಾಗೂ ಮೂರನೇ ಆರೋಪಿ ಪವನ್ ಸೇರಿದಂತೆ ಉಳಿದ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಆದೇಶ ನೀಡಲಾಗಿದೆ. ಈ ಕಾರಣಕ್ಕೆ ಉಳಿದ ಆರೋಪಿಗಳನ್ನು ಇಂದೇ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗುತ್ತೆ.

More from Filmibeat

English summary
Actor Darshan, Pavithra Gowda and other accused sent to Parappana Agrahara Jail. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X