ದರ್ಶನ್ ಹೇಳಿದ್ದಕ್ಕೆ ಕಿಡ್ನಾಪ್.. ವಕೀಲರ ವಾದ; ಪವಿತ್ರಾ ಗೌಡನಿಂದಲೇ ದರ್ಶನ್‌ಗೆ ಮತ್ತೆ ಸಂಕಷ್ಟ?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಕೋರ್ಟ್ ಸಲ್ಲಿಸಿದ್ದಾರೆ. ಇನ್ನೊಂದು ಕಡೆ ಅವರಿಗೆ ಸಹಜ ಜಾಮೀನು ಕೊಡಿಸುವುದಕ್ಕೆ ಶತ ಪ್ರಯತ್ನ ನಡೆಯುತ್ತಿದೆ. ಈ ಬೆನ್ನಲ್ಲೇ ಪವಿತ್ರ ಗೌಡ ಪರ ವಕೀಲರ ವಾದ ಮಂಡನೆ ದರ್ಶನ್‌ರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಪವಿತ್ರಾ ಗೌಡ ಪರ ವಕೀಲರು ಕೂಡ ಜಾಮೀನು ಕೊಡಿಸುವುದಕ್ಕೆ ಶತ ಪ್ರಯತ್ನ ನಡೆಯುತ್ತಲೇ ಇದೆ. ಹೈಕೋರ್ಟ್‌ನಲ್ಲಿ ಇವರ ಜಾಮೀನು ವಿಚಾರಣೆ ನಡೆಯುತ್ತಲೇ ಇದೆ. ಇನ್ನೂ ಜಾಮೀನು ಕೊಡಬೇಕಾ ಬೇಡ್ವಾ? ಅನ್ನುವ ನಿರ್ಧಾರಕ್ಕೆ ನ್ಯಾಯಾಧೀಶರು ಬಂದಿಲ್ಲ.

ಪವಿತ್ರಾ ಗೌಡ ಪರ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಈ ವೇಳೆ ಅವರು ವಾದ ಗಮನ ಸೆಳೆದಿದೆ. ದರ್ಶನ್ ಸೂಚನೆ ಮೇರೆಗೆ ಪವನ್ ಕಿಡ್ನಾಪ್ ಮಾಡಿದ್ದಾನೆಂಬ ಎಂದು ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿಸಿದ್ದಾರೆ. ಇದು ದರ್ಶನ್‌ರನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿದೆ ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡಗೆ ಜಾಮೀನು ಮಂಜೂರು ಮಾಡುವಂತೆ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ಅವರ ಮಂಡಿಸಿದ ವಾದ ಗಮನ ಸೆಳೆದಿದೆ. ಪವಿತ್ರಾ ಗೌಡ ಹಾಗೂ ದರ್ಶನ್ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎಂದು ಹೇಳಿದ್ದಾರೆ. ಹಾಗೇ ದರ್ಶನ್ ಹೇಳಿದ್ದಕ್ಕೆ ಪವಿತ್ರಾ ಗೌಡ ಮನೆಯಲ್ಲಿ ಕೆಲಸಕ್ಕೆ ಇದ್ದ ಪವನ್ ಕಿಡ್ನಾಪ್ ಮಾಡಿದ್ದಾನೆ ಎಂದು ಹೇಳಿದ್ದಾರೆ.

ಇದು ದರ್ಶನ್‌ಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿಸಬಹುದು. ಈ ಕೊಲೆ ಪ್ರಕರಣಕ್ಕೂ ನಟನಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಇತ್ತ ಪವಿತ್ರಾ ಗೌಡ ಪರ ವಕೀಲರು ದರ್ಶನ್ ಅಣತಿ ಮೇರೆಗೆ ರೇಣುಕಾಸ್ವಾಮಿಯನ್ನು ಪವನ್ ಕಿಡ್ನಾಪ್ ಮಾಡಿದ್ದಾನೆ ಎಂದು ವಾದಿಸಿದ್ದಾರೆ. ಇದು ದರ್ಶನ್‌ಗೆ ಜಾಮೀನು ನೀಡುವ ವೇಳೆ ಚರ್ಚೆಗೆ ಬರುವ ಸಾಧ್ಯತೆಯಿದೆ. ನ್ಯಾಯಾಧೀಶರು ಇದನ್ನು ಗಂಭೀರವಾಗಿ ಪರಿಗಣಿಸಿದರೆ, ಮಧ್ಯಂತರ ಜಾಮೀನು ಅನ್ನು ವಿಸ್ತರಿಸುವ ಸಾಧ್ಯತೆ ಕಡಿಮೆ ಇದೆ ಎಂದು ಚರ್ಚೆಯಾಗುತ್ತಿದೆ.
ಇದೇ ವೇಳೆ ಆರೋಪ ಪಟ್ಟಿಯಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಪವಿತ್ರಾ ಗೌಡ ಚಪ್ಪಲಿಯಿಂದ ಹೊಡೆದ ಕಾರಣಕ್ಕೆ ರೇಣುಕಾಸ್ವಾಮಿ ಸತ್ತಿಲ್ಲ. ರೇಣುಕಾಸ್ವಾಮಿ ಬರುವವರೆಗೆ ಪವನ್ ಶೆಡ್ ಬಳಿಕ ಇದ್ದ. ಪವಿತ್ರಾ ಗೌಡ ಅವರನ್ನು ದರ್ಶನ್ ಶೆಡ್‌ಗೆ ಕರೆದುಕೊಂಡು ಹೋಗಿದ್ದರು. ಆ ವೇಳೆ ರೇಣುಕಾಸ್ವಾಮಿಗೆ ಬೈದು ಅಲ್ಲಿಂದ ವಾಪಾಸ್ ಮನೆಗೆ ತೆರಳಿದ್ದರು ಎಂದು ವಾದ ಮಂಡಿಸಿದ್ದಾರೆ.
ಹಾಗೇ ಪವಿತ್ರಾ ಗೌಡಗೆ ಅಪ್ರಾಪ್ತ ಮಗಳು ಇದ್ದಾಳೆ ಎಂದು ತಮ್ಮ ವಾದದಲ್ಲಿ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪವಿತ್ರಾ ಗೌಡ ಜಾಮೀನು ಮಂಜೂರು ಮಾಡಬೇಕು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರಣೆಯನ್ನು ನ್ಯಾಯಾಧೀಶರು ಡಿಸೆಂಬರ್ 6ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಅಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಲಿದ್ದಾರೆ. ಆದರೆ, ಪವಿತ್ರಾ ಗೌಡ ಪರ ವಕೀಲ ವಾದ ಮಂಡಿಸುವ ವೇಳೆ ದರ್ಶನ್ ಸೂಚನೆ ಮೇರೆಗೆ ಕಿಡ್ನಾಪ್ ಮಾಡಲಾಗಿದೆ ಎಂದಿದ್ದು ಅವರ ಜಾಮೀನಿಗೆ ಸಂಕಷ್ಟ ತಂದೊಡ್ಡುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











