ರೇಣುಕಾಸ್ವಾಮಿಗೆ ಗಂಡು ಮಗು ಜನಿಸಿದ ಸುದ್ದಿ ಕೇಳಿದ ದರ್ಶನ್ ರಿಯಾಕ್ಷನ್ ಏನು? ಆ ಎರಡು ಪದಗಳ್ಯಾವುವು?
ರೇಣುಕಾಸ್ವಾಮಿ ಪ್ರಕರಣ ದರ್ಶನ್ ಬದುಕಿನಲ್ಲೊಂದು ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿದೆ. ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದದರೂ ಜನ ಮಾನಸದಿಂದ ಅಷ್ಟು ಸುಲಭಕ್ಕೆ ಕಾಣೆಯಾಗುವುದಿಲ್ಲ. ಇಡೀ ದೇಶವೇ ಈ ಪ್ರಕರಣವನ್ನು ಗಂಭೀರವಾಗಿ ನೋಡುತ್ತಿದೆ. ಈ ಸಂಬಂಧ ನಾಲ್ಕು ತಿಂಗಳು ದರ್ಶನ್ ಜೈಲಿನಲ್ಲಿಯೇ ಕಳೆಯುವಂತೆ ಮಾಡಿದೆ.
ಇತ್ತೀಚೆಗೆ ಸೆಷನ್ಸ್ ಕೋರ್ಟ್ ಕೂಡ ಜಾಮೀನನ್ನು ತಿರಸ್ಕರಿಸಿದೆ. ಹೀಗಾಗಿ ಹೈ ಕೋರ್ಟ್ ಮೆಟ್ಟಿಲೇರಿರುವ ದರ್ಶನ್ ಅಲ್ಲಿಯಾದರೂ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿ ಇದ್ದಾರೆ. ಈ ಸಂಬಂಧ ದರ್ಶನ್ ಪರ ವಕೀಲ ಹೈಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಕೊಡಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮಾಧ್ಯಮಗಳಲ್ಲಿ ದರ್ಶನ್ ಬಗ್ಗೆ ಮತ್ತೊಂದು ಸದ್ದು ಹರಿದಾಡುತ್ತಿದೆ.

ಹತ್ಯೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸುದ್ದಿ ದರ್ಶನ್ ಅವರಿಗೆ ಜೈಲು ಸಿಬ್ಬಂದಿ ಮುಟ್ಟಿಸಿದ್ದರು. ಅದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಪ್ರತಿಕ್ರಿಯೆ ಏನು? ಅನ್ನೋದನ್ನು ವರದಿ ಮಾಡಲಾಗಿದೆ. ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿಯನ್ನು ಕೇಳಿ ದರ್ಶನ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ರೇಣುಕಾಸ್ವಾಮಿ ಪತ್ನಿ ಸಹನಾ ಅಕ್ಟೋಬರ್ 16ರಂದು ಚಿತ್ರದುರ್ಗದ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ ನೀಡಿದ್ದರು. ಹೋದ ಮಗನೇ ಮತ್ತೆ ಮರಳಿ ಬಂದಂತೆ ಆಗಿದೆ ಎಂದು ರೇಣುಕಾಸ್ವಾಮಿ ತಂದೆ ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದರು.

ರೇಣುಕಾಸ್ವಾಮಿ ಘಟನೆ ನಡೆಯುವ ವೇಳೆ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು. ಈಗ ವೈದ್ಯರು ನಿಗದಿ ಪಡಿದ ದಿನಾಂಕಕ್ಕಿಂತ ಮುನ್ನವೇ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾರೆ. ಈ ಸುದ್ದಿಯನ್ನು ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಸಿಬ್ಬಂದಿಗಳು ಹೇಳಿದ್ದರು. ಆಗ ದರ್ಶನ್ ಪ್ರತಿಕ್ರಿಯೆ ಏನಾಗಿತ್ತು? ಅನ್ನೋದನ್ನು ಮಾಧ್ಯಮಗಳು ವರದಿ ಮಾಡಿವೆ. ಆ ಪ್ರಕಾರ ದರ್ಶನ್ "ಹೌದಾ.. ಒಳ್ಳೆಯದಾಗಲಿ" ಎಂದು ಜೈಲು ಸಿಬ್ಬಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ನ್ಯೂಸ್ 18 ಕನ್ನಡದಲ್ಲಿ ವರದಿಯಾಗಿದೆ.
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಹೆಚ್ಚಾಗಿ ಜೈಲು ಸಿಬ್ಬಂದಿಗಳ ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಸಿಬ್ಬಂದಿ ಜೊತೆ ಮಾತಾಡುವಾಗ ರೇಣುಕಾಸ್ವಾಮಿಗೆ ಮಗು ಆಗಿರುವ ವಿಷಯ ಬಂದಿದ್ದು, ಅದಕ್ಕೆ ಒಳ್ಳೆಯದಾಗಲಿ ಎಂದು ಪ್ರತಿಕ್ರಿಯಿಸಿರುವ ಬಗ್ಗೆ ವರದಿಯಾಗಿದೆ. ದರ್ಶನ್ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಿದೆ.
ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರನ್ನು ಭೇಟಿ ಮಾಡುವುದಕ್ಕೆ ದರ್ಶನ್ ಬ್ಯಾರಕ್‌ನಿಂದ ಹೊರ ಬಂದಾಗ ಅಭಿಮಾನಿಗಳು ಡಿ ಬಾಸ್ ಅಂತ ಕೇಕೆ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳನ್ನು ನೋಡಿ ಕಿರುನಗೆ ಬೀರಿದ ದೃಶ್ಯಗಳಿವೆ. ಹಾಗೇ ಸನ್ನಿಯ ಮೂಲಕ ಸಂದೇಶ ರವಾನೆ ಮಾಡಿದ್ದೂ ಇದೆ. ಸದ್ಯ ದರ್ಶನ್ ಬೆನ್ನು ನೋವು ಹೆಚ್ಚಾದ ಬೆನ್ನಲ್ಲೇ ಹಾಸಿಗೆ ಹಾಗೂ ದಿಂಬಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


Click it and Unblock the Notifications











