ಹಲವು ಬಾರಿ ಅತ್ಯಾ*ಚಾರ,ಎರಡು ಬಾರಿ ಗರ್ಭಪಾತ ;ಕಾಮಿಡಿ ಕಿಲಾಡಿ ಮಡೆನೂರು ಮನು ವಿರುದ್ದ ಸಂತ್ರಸ್ತ ಯುವತಿ ಹೇಳಿದ್ದೇನು ?
ಎಲ್ಲ ಅಂದುಕೊಂಡಂತೆ ಆಗಿದ್ದರೆ ನಾಳೆ { ಮೇ 23 } ಮಡೆನೂರು ಮನು ಚಿತ್ರಮಂದಿರದ ಆವರಣದಲ್ಲಿ ಇರಬೇಕಿತ್ತು. ತಮ್ಮ ಚಿತ್ರ ಕುಲದಲ್ಲಿ ಕೀಳ್ಯಾವುದೋ ಬಿಡುಗಡೆಯನ್ನು ಸಂಭ್ರಮಿಸಬೇಕಿತ್ತು. ಆದರೆ..ಚಿತ್ರ ಬಿಡುಗಡೆಯ ಹಿಂದಿನ ಮಡೆನೂರು ಮನು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕ ಜನ ಮನ ಗೆದ್ದು ಈಗ ಬೆಳ್ಳಿತೆರೆಯಲ್ಲಿ ನಾಯಕನಾಗಿ ಮಿಂಚಲು ರೆಡಿಯಾಗಿರುವ ಮಡೆನೂರು ಮನು ಸದ್ಯ ನಿಜ ಜೀವನದಲ್ಲಿ ಯುವತಿಯ ಪಾಲಿಗೆ ಖಳನಾಯಕನಾಗಿದ್ದಾರೆ.
ಮಡೆನೂರು ಮನು ಮೇಲೆ ಯುವತಿ ಅತ್ಯಾಚಾರದ ಆರೋಪವನ್ನು ಮಾಡಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಸದ್ಯ ದೂರು ದಾಖಲಾಗಿದೆ. ದಾಖಲಾದ ದೂರಿನಲ್ಲಿ ಮಡೆನೂರು ಮನು ವಿರುದ್ದ ಯುವತಿ ಮಾಡಿರುವ ಆರೋಪಗಳೇನು..? ಇಬ್ಬರ ಪರಿಚಯವಾಗಿದ್ದು ಹೇಗೆ ? ಅತ್ಯಾಚಾರ ನಡೆದಿದ್ದು ಯಾವಾಗ ? ಯುವತಿ ನೀಡಿರುವ ದೂರಿನಲ್ಲಿ ಏನಿದೆ ? ಎಂದು ತಿಳಿಯಲು ಮುಂದೆ ಓದಿ.

2018ರಲ್ಲಿ ಪರಿಚಯ
ಮಡೆನೂರು ಮನು ಮೇಲೆ ಆರೋಪ ಮಾಡಿರುವ ಯುವತಿ, ಈ ಮೊದಲು ಅಂದರೆ ಮಡೆನೂರು ಮನು ಪರಿಚಯವಾಗುವ ಮುನ್ನ ಬೆಂಗಳೂರಿನ ಕಾಮಾಕ್ಯದಲ್ಲಿ ಸುಮಾರು 5 ವರ್ಷ ವಾಸ ಮಾಡಿದ್ದರು.
2018ರಿಂದ ಯುವತಿ ಮತ್ತು ಮಡೆನೂರು ಮನು ಸ್ನೇಹ ಶುರುವಾಯ್ತು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಇಬ್ಬರು ಜೊತೆಯಲ್ಲಿ ಕೆಲಸ ಮಾಡಿದ್ದರು. ಸಂತ್ರಸ್ತೆ ಯುವತಿಗೆ ಖುದ್ದು ಮಡೆನೂರು ಮನು ಬೆಂಗಳೂರಿನ ನಾಗರಭಾವಿಯಲ್ಲಿ ಮನೆಯನ್ನು ಹುಡುಕಿ ಕೊಟ್ಟಿದ್ದರು.
ಹೀಗೆ ಮದುವೆಯಾಗಿ ಒಂದು ಮಗು ಇದ್ದರೂ ಕೂಡ ಯುವತಿಯ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಮನು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವತಿ ಮತ್ತು ಇತರೇ ಕಾಮಿಡಿ ನಟರ ಜೊತೆ ಭಾಗವಹಿಸಿದ್ದರು.
2022ರಲ್ಲಿ ಅತ್ಯಾಚಾರ
ನವೆಂಬರ್ 29 -2022ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದಿದ್ದ ಈ ಹಾಸ್ಯ ನಂತರ ಮನು ಸಂಭಾವನೆ ನೀಡುವ ನೆಪದಲ್ಲಿ ಯುವತಿಯನ್ನು ತಮ್ಮ ರೂಮ್‌ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ವಿರೋಧದ ನಡುವೆ ಮದುವೆ
ಅತ್ಯಾಚಾರ ಎಸಗಿದ ನಂತರ ಡಿಸೆಂಬರ್ 3ರಂದು ನನ್ನ ಮನೆಗೆ ಬಂದಿದ್ದ ಮಡೆನೂರು ಮನು, ಬಲವಂತವಾಗಿ ನನಗೆ ತಾಳಿಯನ್ನು ಕೂಡ ಕಟ್ಟಿದ್ದರು, ಆ ನಂತರ ಅದೇ ಮನೆಯಲ್ಲಿ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದರು ಎಂದು ಸಂತಸ್ತೆ ಆರೋಪವನ್ನು ಮಾಡಿದ್ದಾರೆ.
ಮನೆಯಲ್ಲಿ ಹಲವು ಬಾರಿ ನನ್ನನ್ನು ಲೈಂಗಿಕವಾಗಿ ಮಡೆನೂರು ಮನು ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಿರುವ ಯುವತಿ ನನ್ನ ನಗ್ನ ವಿಡಿಯೋವನ್ನು ಕೂಡ ಮಡೆನೂರು ಮನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಗರ್ಭಪಾತ
ಆ ನಂತರ ನಾನು ಗರ್ಭಿಣಿಯಾದ ವಿಚಾರ ತಿಳಿದು ಮನೆಗೆ ಬಂದು ಗರ್ಭಪಾತ ಆಗುವ ಮಾತ್ರೆಯನ್ನು ಮಡೆನೂರು ಮನು ನನಗೆ ನೀಡಿದ್ದ ಎಂದಿರುವ ಯುವತಿ ಆ ನಂತರ ನಾನು ಮತ್ತೆ ಪ್ರಗ್ನೆಂಟ್ ಆಗಿದ್ದು, ಮತ್ತೆ ಅದೇ ರೀತಿ ನನಗೆ ಗರ್ಭಪಾತ ಮಾಡಿಸಿದ್ದ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ಧಾರೆ.
ನನ್ನ ಮೇಲೆ ಅತ್ಯಾಚಾರ ಮಾಡಿ, ನನ್ನನ್ನೂ ಹೊಡೆದು ಹಲ್ಲೆ ಮಾಡಿ ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಕೆಯನ್ನು ಕೂಡ ಮನು ಹಾಕಿದ್ದ ಎಂದು ಹೇಳಿದ್ದಾರೆ.
ಲಕ್ಷಾಂತರ ರೂಪಾಯಿ ಹಣ
ಮಡೆನೂರು ಮನು ನಾಯಕನಾಗಿ ಚಿತ್ರವನ್ನು ಮಾಡಿದ್ದು, ಆ ಚಿತ್ರಕ್ಕೆ ನಾನು ಲಕ್ಷಾಂತರ ರೂಪಾಯಿಗಳನ್ನು ನೀಡಿದ್ದೇನೆ, ನನ್ನ ಮೇಲೆ ಅತ್ಯಾಚಾರ ಮಾಡಿ ಮದುವೆಯ ನಾಟಕವಾಡಿ ಆ ನಂತರ ಗರ್ಭಪಾತ ಮಾಡಿಸಿ, ನನ್ನ ಮೇಲೆ ಹಲ್ಲೆಯನ್ನು ಮಾಡಿರುವ, ಪ್ರಾಣ ಬೆದರಿಕೆಯನ್ನು ಹಾಕಿರುವ ಮಡೆನೂರು ಮನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಸಂತ್ರಸ್ತ ಯುವತಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.


Click it and Unblock the Notifications









