twitter
    For Quick Alerts
    ALLOW NOTIFICATIONS  
    For Daily Alerts

    ಡಾ.ವಿಷ್ಣು ಅಭಿಮಾನಿಗಳು ತಪ್ಪದೇ ಓದಬೇಕಾದ ಪತ್ರ ಇದು

    By Harshitha
    |

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರನ್ನ ಮತ್ತೆ ತೆರೆ ಮೇಲೆ ತರುವ ವಿಶಿಷ್ಟ ಪ್ರಯತ್ನ 'ನಾಗರಹಾವು' ಚಿತ್ರದಲ್ಲಿ ನಡೆಯುತ್ತಿದೆ. ಇದೇ ಕಾರಣಕ್ಕೆ 'ನಾಗರಹಾವು' ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ ಅಂತ ಬ್ರ್ಯಾಂಡ್ ಆಗಿದೆ.

    ಐದು ವರ್ಷಗಳ ಹಿಂದಿನ ಚಿತ್ರಕ್ಕೆ ಈಗ 'ನಾಗರಹಾವು' ಅಂತ ಹೆಸರಿಟ್ಟು ವಿಷ್ಣು ಹೆಸರಿನಲ್ಲಿ ಪ್ರಚಾರ ನೀಡಲಾಗುತ್ತಿದೆ ಎಂಬ ಕಾಮೆಂಟ್ ಗಳು ವ್ಯಕ್ತವಾಗಿದ್ದರೂ, ಅದೇ ವಿಷ್ಣು ಹೆಸರಿಗೆ ಶೋಭೆ ತರಲು, ವಿಷ್ಣು ಆದರ್ಶಗಳನ್ನು ಪಾಲಿಸುತ್ತಾ 'ಸಿಂಹ ಹಸ್ತ' ಎಂಬ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಚಿತ್ರತಂಡ ಚಾಲನೆ ನೀಡ್ತು. [ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!]

    ಆದ್ರೆ, ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನೀರಸ.! ಈ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ 'ಡಾ.ವಿಷ್ಣು ಸೇನಾ ಸಮಿತಿ' ಅಧ್ಯಕ್ಷ ಹಾಗೂ 'ಕನ್ನಡ ಮಾಣಿಕ್ಯ' ಮಾಸ ಪತ್ರಿಕೆ ಸಂಪಾದಕರಾಗಿರುವ ವೀರಕಪುತ್ರ ಶ್ರೀನಿವಾಸ್, ಎಲ್ಲಾ ವಿಷ್ಣು ಅಭಿಮಾನಿಗಳಿಗೆ ಒಂದು ಪತ್ರ ಬರೆದಿದ್ದಾರೆ. ಅದನ್ನ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

    ನಾವ್ ಯಾಕ್ಹೀಗೆ?

    ನಾವ್ ಯಾಕ್ಹೀಗೆ?

    ''ನಾವ್ ಯಾಕ್ಹೀಗೆ! ಸದಾ ಕೆಟ್ಟದರ ಹಿಂದೆ ರೇಸ್ ಹೊರಟು ಬಿಡುತ್ತೇವೆ. ಒಳ್ಳೆಯದು ನೂರಾರಿದ್ದರೂ ಸಣ್ಣದೊಂದು ಕೆಟ್ಟದ್ದು ನಮಗೆ ಇಂಪಾರ್ಟೆಂಟ್ ಅನಿಸಿಬಿಡುತ್ತೆ. ಮನಸ್ಥಿತಿಗಳ ಬದಲಾವಣೆ ಅಸಾಧ್ಯವೇ? ಈ ಪ್ರಶ್ನೆ ನನ್ನನ್ನೂ ಸೇರಿ ನಿಮ್ಮನ್ನು ಕೇಳಬೇಕೆನಿಸಿದೆ.'' ['ಸಿಂಹ ಹಸ್ತ' ತಂಡದಿಂದ ಬಡ ರೋಗಿಗಳಿಗೆ ಸಹಾಯ ಹಸ್ತ]

    ಹುಚ್ಚು ಮನುಷ್ಯ ವರ್ಮ

    ಹುಚ್ಚು ಮನುಷ್ಯ ವರ್ಮ

    ''ಆ ವರ್ಮ ಎನ್ನುವ ಹುಚ್ಚು ಮನುಷ್ಯ ವಿಷ್ಣು ಬಗ್ಗೆ ಕೆಟ್ಟದಾಗಿ ಮಾತನಾಡಿದರೆಂಬ ಕಾರಣಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾಯಿತು. ಅಭಿಮಾನಿಗಳು, ಸಿನಿಮಾ ತಾರೆಯರು, ನಾಡು ನುಡಿ ಚಿಂತಕರಾದಿಯಾಗಿ ಎಲ್ಲರೂ ಅದನ್ನು ಖಂಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಂತೂ ಬರೀ ಅದೇ ಚರ್ಚೆ ಆಯಿತು! ಇದು ಬೇಕಿತ್ತು ಕೂಡ. ಈ ಮಣ್ಣಿಗೆ ಗೌರವ ತಂದ ವಿಷ್ಣುವರ್ಧನ್ ಅವರಂತಹ ಮಹಾನ್ ಕಲಾವಿದನ ಬಗ್ಗೆ ಯಾರೋ ಒಬ್ಬ ತಿಕ್ಕಲು ತಿಕ್ಕಲಾಗಿ ಮಾತನಾಡಿದಾಗ ಅದನ್ನು ಪ್ರತಿಭಟಿಸಿದ್ದು ನಿಜಕ್ಕೂ ಸರಿ''

    ಒಳ್ಳೆಯ ಕೆಲಸ ನಡೆದರೆ?

    ಒಳ್ಳೆಯ ಕೆಲಸ ನಡೆದರೆ?

    ''ಆದರೆ at the same time, ವಿಷ್ಣು ಹೆಸರಲ್ಲಿ, ಆದರ್ಶಗಳ ನೆನಪಲ್ಲಿ ಅನೇಕ ಒಳ್ಳೆಯ ಕೆಲಸಗಳು ನಡೆದಾಗ ನಮ್ಮ ಪ್ರತಿಕ್ರಿಯೆ ಹೀಗೇ ಇತ್ತಾ ಅಂದರೆ? 'ಇಲ್ಲ' ಅಂತಲೇ ಹೇಳಬೇಕು'' ['ನಾಗರಹಾವು' ತಂಡವನ್ನ ಹಾಡಿ ಹೊಗಳಿದ ಎ.ಆರ್.ರೆಹಮಾನ್]

    'ನಾಗರಹಾವು'

    'ನಾಗರಹಾವು'

    ''Sajid Khureshi ಎಂಬ ನಿರ್ಮಾಪಕರೊಬ್ಬರು ಕನ್ನಡಕ್ಕೆ ಬಂದು ವಿಷ್ಣು ಹೆಸರಲ್ಲಿ 'ನಾಗರಹಾವು' ಚಿತ್ರ ಮಾಡ್ತಿದ್ದಾರೆ. ಅವರು ಬರೀ ಚಿತ್ರ ಮಾಡ್ತಿಲ್ಲ, ವಿಷ್ಣು ಅವರ ಚಿತ್ರವೊಂದಕ್ಕೆ ಅವರು ಬದುಕಿದ್ದಾಗಲೂ ಸಿಗದಷ್ಟು ಪ್ರಚಾರ ಕೊಡುತ್ತಿದ್ದಾರೆ. ಅಕಾಲಿಕವಾಗಿ ಅಗಲಿದ ವಿಷ್ಣು ಅವರನ್ನು ಮತ್ತೆ ಕನ್ನಡಿಗರ ಮನೆ ಮನಗಳಿಗೆ ತಲುಪಿಸುತ್ತಿದ್ದಾರೆ. ನಾಡಿನ ಸಾವಿರಾರು ಆಟೋ, ಬಸ್ಸು ಮತ್ತು ಹೋರ್ಡಿಂಗ್ ಗಳಲ್ಲಿ ವಿಷ್ಣು ಕಾಣುವಂತೆ ಮಾಡಿದ್ದಾರೆ.''

    'ಸಿಂಹ ಹಸ್ತ'

    'ಸಿಂಹ ಹಸ್ತ'

    ''ಅದೆಲ್ಲಾ ಬಿಡಿ, ಸಿನಿಮಾದ ಪ್ರಚಾರಕ್ಕೆ ಮಾಡ್ತಿದ್ದಾರೆ ಅಂದುಕೊಳ್ಳೋಣ! ಆದರೆ ಮೊನ್ನೆ "ಸಿಂಹಹಸ್ತ" ಎನ್ನುವುದೊಂದು ಕಾರ್ಯಕ್ರಮ ಮಾಡಿದರು. Actually ಅದು ಆಡಿಯೋ ಕಾರ್ಯಕ್ರಮ! ಆದರೆ ಅಲ್ಲಿ ನಡೆದದ್ದು ಅಪ್ಪಟ ವಿಷ್ಣು ಆದರ್ಶಗಳ ಮೇಲಾಟ.!''

    ಶ್ಲಾಘನೆ ಸಿಗಲಿಲ್ಲ!

    ಶ್ಲಾಘನೆ ಸಿಗಲಿಲ್ಲ!

    ''ಅಂದು ಸುಮಾರು 25 ಜನ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ರೋಗಿಗಳಿಗೆ ತಲಾ ಒಂದು ಲಕ್ಷದಂತೆ 25 ಲಕ್ಷ ವಿತರಿಸಿದರು. ಅವರು ಮನಸು ಮಾಡಿದ್ದರೆ, 5-6 ಲಕ್ಷದಲ್ಲಿ ಗ್ರ್ಯಾಂಡಾಗಿ ಆಡಿಯೋ ಬಿಡುಗಡೆ ಮಾಡಬಹುದಿತ್ತು. ಆದರೆ ವಿಷ್ಣು ಹೆಸರಲ್ಲಿ ಚಿತ್ರಮಾಡುತ್ತಿರುವ ನನಗೆ ಹಣವೊಂದೇ ಮುಖ್ಯವಾಗಬಾರದು, ವಿಷ್ಣು ಅವರ ನಡೆ-ನುಡಿಗಳಂತೆ ನಡೆದುಕೊಳ್ಳುವುದೂ ಮುಖ್ಯವಾಗಬೇಕು ಎಂದು 'ಸಿಂಹಹಸ್ತ' ಯೋಜನೆ ಜಾರಿಗೊಳಿಸಿದ್ದರು. ಆದರೆ ನಾವ್ಯಾರೂ ಅವರ ಈ ನಡೆ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾತನಾಡಲೇ ಇಲ್ಲ. ಚಿತ್ರರಂಗದವರು ಶ್ಲಾಘಿಸಲಿಲ್ಲ.''

    ಪ್ರಚಾರ ಪ್ರಿಯ?

    ಪ್ರಚಾರ ಪ್ರಿಯ?

    ''ಆದ್ರೆ, ಇದೇ ಕೆಲಸ ರಜನಿಕಾಂತ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಹೆಸರಲ್ಲಿ ನಡೆದಿದ್ದರೆ ಇಷ್ಟೊತ್ತಿಗೆ ಇಡೀ ದೇಶದಾದ್ಯಂತ ಈ ಸುದ್ದಿ ವೈರಲ್ ಅಗಿಬಿಡುತಿತ್ತು. ಆದ್ರೆ ನಾವು ಸುಮ್ಮನಾಗಿಬಿಟ್ಟೆವು. ಬದಲಾಗಿ ನಿರ್ಮಾಪಕ ದುಡ್ಡು ಮಾಡೋಕೆ ಬಂದವ್ನೆ, ಅವನ ಹತ್ರ ಬೇಜಾನ್ ದುಡ್ಡಿದೆ ಖರ್ಚು ಮಾಡ್ಲಿ ಬಿಡು, ಪ್ರಚಾರಪ್ರಿಯ ಎಂಬಂತಹ ಮಾತಿಗಳಿಗೆ ಧ್ವನಿ ಮತ್ತು ಕಿವಿಯಾದೆವು. ಅವರಿಗೆ ಪ್ರಚಾರವೇ ಮುಖ್ಯವಾಗಿದ್ದರೆ ಅದೇ ದುಡ್ಡಲ್ಲಿ ಅವರ ಫೋಟೋ ಇರುವ ಹೋರ್ಡಿಂಗ್ ಗಳನ್ನು ರಾಜ್ಯದಾದ್ಯಂತ ಹಾಕಿಕೊಳ್ಳಬಹುದಿತ್ತಲ್ಲವೇ.? ಕೆಲವೊಮ್ಮೆ ನಾವು ಮತ್ತೊಬ್ಬರ ಬಗ್ಗೆ ಮಾಡುವ ಟೀಕೆಗಳೇ ನಮ್ಮ ವ್ಯಕ್ತಿತ್ವವನ್ನು ಹೇಳಿಬಿಡುತ್ತವೆ ಅಲ್ಲವಾ!!''

    ಸೋ ಸ್ಯಾಡ್!

    ಸೋ ಸ್ಯಾಡ್!

    ''ವಿಷ್ಣು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ನಾವು ಸಿಡಿದೆದ್ದೆವು, ಆದರೆ ವಿಷ್ಣುವಿಗಾಗಿ ಒಳ್ಳೆಯ ಕೆಲಸ ಮಾಡಿದಾಗ ಸುಮ್ಮನಿದ್ದುಬಿಟ್ಟೆವು!! ಸೋ ಸ್ಯಾಡ್.''

    ನೀರಸ ಪ್ರತಿಕ್ರಿಯೆ

    ನೀರಸ ಪ್ರತಿಕ್ರಿಯೆ

    ''ಅದೂ ಬಿಡಿ,
    'ಸಿಂಹಹಸ್ತ' ಯೋಜನೆಯಲ್ಲಿ ನಿರ್ಮಾಪಕರು ಕೊಡುವ 25 ಲಕ್ಷದ ಜೊತೆಗೆ ಅಭಿಮಾನಿಗಳೆಲ್ಲರೂ ಒಂದಷ್ಟು ಕೈ ಜೋಡಿಸಿದರೆ ಇನ್ನೊಂದಷ್ಟು ಜನಕ್ಕೆ ನೆರವಾಗಬಹುದು ಅಂತ ಯೋಚಿಸಿ, ಅಕೌಂಟ್ ನಂಬರ್ ಕೊಟ್ಟು ಮನವಿ ಮಾಡಿದ್ದರು. ಆದ್ರೆ ನಂಬಿ, ಇಲ್ಲ ಬಿಡಿ, ಎ.ಆರ್.ರೆಹಮಾನ್ 50,000/- ವಿ.ಎಸ್.ಎಸ್ 10,000/- ಮತ್ತು ಸರವಣ, ಶಂಕರ್ ಮುಂತಾದ ಕೆಲವೇ ಕೆಲವು ಅಭಿಮಾನಿಗಳು ದೇಣಿಗೆ ನೀಡಿದರು ಎಂಬುದನ್ನು ಬಿಟ್ಟರೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು!!''

    ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

    ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?

    ''ಸಿಂಹಹಸ್ತ ಯೋಜನೆಯಲ್ಲಿ ಒಟ್ಟು ಸಂಗ್ರಹವಾದ ಮೊತ್ತ ಕೇವಲ 2 ಲಕ್ಷ ಚಿಲ್ಲರೆ!!! ನಿಜಕ್ಕೂ ಇಷ್ಟೇನಾ ಅಂದಿದ್ದಕ್ಕೆ? ನಿರ್ಮಾಪಕರು ಬ್ಯಾಂಕ್ ಸ್ಟೇಟ್ಮೆಂಟೇ ಕಳಿಸಿಬಿಟ್ಟರು. ನನ್ನ ಕಣ್ಣು ನಾನೇ ನಂಬದಾದೆ!!''

    ಬರೀ 2 ಲಕ್ಷ!

    ಬರೀ 2 ಲಕ್ಷ!

    ''ವಿ.ಎಸ್.ಎಸ್ ಬಳಿ ಇರುವ ಫೋನ್ ಸಂಖ್ಯೆಗಳ ಆಧಾರದಲ್ಲಿ ಸುಮಾರು 28,000 ಜನ ವಿಷ್ಣು ವೀರಾಭಿಮಾನಿಗಳು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲ ತಲಾ 100 ರೂಪಾಯಿ ಕೊಟ್ಟಿದ್ದರೂ 28 ಲಕ್ಷ ಆಗಬೇಕಿತ್ತಲ್ವಾ.!! ಆದ್ರೆ ಸಂಗ್ರಹವಾದುದು ಬರೀ 2 ಲಕ್ಷ ಚಿಲ್ಲರೆ.''

    ನಾವೆತ್ತ ಸಾಗುತ್ತಿದ್ದೇವೆ?

    ನಾವೆತ್ತ ಸಾಗುತ್ತಿದ್ದೇವೆ?

    ''ವಿಷ್ಣುವಿಗೆ ಮಕ್ಕಳಿಲ್ಲ.! ಅಭಿಮಾನಿಗಳೇ ಉತ್ತರಾಧಿಕಾರಿಗಳು ಎಂಬ ಮಾತು ಪದೇ ಪದೇ ಹೇಳ್ತಿರುತ್ತೇವೆ. ಆದ್ರೆ ಉತ್ತರಾಧಿಕಾರಿಗಳಾದವರ ಜವಾಬ್ದಾರಿಗಳು ಏನು ಎಂಬುದನ್ಯ್ನಾಕೆ ಮರೆತಿದ್ದೇವೆ?? ವಿಷ್ಣು ಅವರ ಆದರ್ಶಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಪಾತ್ರವೇನು? ಎಂಬ ಆತ್ಮಾವಲೋಕನಕ್ಕೆ ಇದು ಸಕಾಲವಲ್ಲವೇ?''

    ಬದಲಾಗಬೇಕಿದೆ!

    ಬದಲಾಗಬೇಕಿದೆ!

    ''ವಿಷ್ಣು ಅವರನ್ನು ಅವನ್ಯಾರೋ ಮಂಡೆ ಸರಿಯಿಲ್ಲದವನು, ಪಕ್ಕದ ರಾಜ್ಯದವನು ಅವಹೇಳನ ಮಾಡಿದ ಎಂಬ ಕಾರಣಕ್ಕೆ ನಾವು ವ್ಯಾಗ್ರರಾಗ್ತೀವಿ. ಆದ್ರೆ ಅದೇ ಮತ್ತೊಬ್ಬ ಪಕ್ಕದ ರಾಜ್ಯದ ವ್ಯಕ್ತಿ ವಿಷ್ಣು ಅವರನ್ನು "ನ ಭೂತೋ ನ ಭವಿಷ್ಯತಿ" ಎಂಬಂತೆ ಮತ್ತೆ ಕರುನಾಡಲ್ಲಿ ಕಂಗೊಳಿಸುವಂತೆ ಮಾಡುತ್ತಿದ್ದರೆ ಮೌನವಾಗಿರುವುದು ಸರಿಯೇ? ಬದಲಾಗಬೇಕಿದೆ ನಾವು ಮತ್ತು ನಮ್ಮ ಮನಸ್ಥಿತಿಗಳು''
    ನಿಮ್ಮ
    ವೀರಕಪುತ್ರ ಶ್ರೀನಿವಾಸ.

    ಲಿಂಕ್ ಇಲ್ಲಿದೆ

    ಲಿಂಕ್ ಇಲ್ಲಿದೆ

    ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಬರೆದಿರುವ ಪತ್ರದ ಲಿಂಕ್ ಇಲ್ಲಿದೆ ನೋಡಿ

    English summary
    Kannada Movie 'Nagarahavu' Producer Sajid Qureshi has spent Rs 25 Lakhs on the Medical treatment of 25 Poor Patients in the name of 'Simha Hastha'. Apart from Producer, Common people could also donate for the cause. But the response obtained was Dull. Hence, Veerakaputra Srinivas, President of Dr.Vishnu Sena Samithi has written letter addressing Vishnu fans.
    Saturday, August 20, 2016, 17:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X