2012ರ ಸ್ಯಾಂಡಲ್ ವುಡ್ ಕಿಂಗ್ ದರ್ಶನ್

By Mahesh

2012ರಲ್ಲಿ ಕನ್ನಡ ಚಿತ್ರರಂಗದ ಅನೇಕ ನಾಯಕ ನಟರು ಪ್ರಯೋಗಿಕ ಪಾತ್ರಗಳು, ವೈವಿಧ್ಯ ಪಾತ್ರಗಳ ಪೋಷಣೆಗೆ ಹೆಚ್ಚು ಒತ್ತು ನೀಡಿದ್ದು ಕನ್ನಡ ಚಿತ್ರ ಪ್ರೇಕ್ಷಕನ ಮಟ್ಟಿಗೆ ಶುಭ ಸುದ್ದಿ. ಒನ್ ಇಂಡಿಯಾ ಕನ್ನಡ ನಡೆಸಿದ ಮತದಾನದಲ್ಲಿ ನಮ್ಮ ಓದುಗರು ಸ್ಯಾಂಡಲ್ ವುಡ್ ಕಿಂಗ್ ಯಾರು ಎಂದು ತೋರಿಸಿಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಅಭೂತಪೂರ್ವ ಚಿತ್ರವಾಗಿ ಹೊರಹೊಮ್ಮಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣದಲ್ಲಿನ ತಮ್ಮ ಅಭಿನಯದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒನ್ ಇಂಡಿಯಾ ಓದುಗರಿಗೂ ಅಚ್ಚು ಮೆಚ್ಚು ಎನಿಸಿದ್ದಾರೆ.

ಸುಮಾರು 9,468 ಮತಗಳ ಪೈಕಿ ಶೇ 45 ರಷ್ಟು ಮತಗಳು ದರ್ಶನ್ ಅವರಿಗೆ ಸಂದಿದೆ. ಉಳಿದಂತೆ ರಿಯಲ್ ಸ್ಟಾರ್ ಉಪೇಂದ್ರ ಅವರೈಗೆ ಶೇ 23.3 ಮತಗಳು ಸಿಕ್ಕಿ ಕೊನೆ ಕ್ಷಣದಲ್ಲಿ ಪುನೀತ್ ಅವರನ್ನು ಮೂರನೇ ಸ್ಥಾನಕ್ಕೆ ಇಳಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಶೇ 22.2 ರಷ್ಟು ಮತ ಪಡೆದಿದ್ದಾರೆ.

ಟಾಪ್ 3 ಬಿಟ್ಟರೆ ಉಳಿದವರಿಗೆ ವೋಟ್ ಬಿದ್ದೇ ಇಲ್ಲ ಎನ್ನಬಹುದು. ಶೇ0.5 ರಿಂದ ಶೇ 2.1 ತನಕ ಉಳಿದ 7 ಜನರಿಗೆ ಮತ ಸಿಕ್ಕಿದೆ. ಒನ್ ಇಂಡಿಯಾ ಟಾಪ್ 10 ನಟರ ದೃಶ್ಯಾವಳಿ ಇಲ್ಲಿದೆ ನೋಡಿ

ದರ್ಶನ್ ತೂಗುದೀಪ

ದರ್ಶನ್ ತೂಗುದೀಪ

4,264 ಶೇ 45
ಹಿಟ್: ಚಿಂಗಾರಿ, ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ, ಸ್ನೇಹಿತರು ಚಿಂಗಾರಿಯಲ್ಲಿ ಲವಲವಿಕೆ ಪಾತ್ರದ ಜೊತೆಗೆ ವರ್ಷದ ಚಿತ್ರವಾಗಿರುವ ಸಂಗೊಳ್ಳಿ ರಾಯಣ್ಣದಲ್ಲಿ ದರ್ಶನ್ ಅಭಿನಯ ಪ್ರೇಕ್ಷಕರಿಗೆ ರೋಮಾಂಚನ ನೀಡಿದೆ.

ಉಪೇಂದ್ರ

ಉಪೇಂದ್ರ

2,204 ಶೇ 23.3
ಹಿಟ್: ಕಲ್ಪನ, ಕಠಾರಿವೀರ ಸುರಸುಂದರಾಂಗಿ ಫ್ಲಾಪ್: ಗಾಡ್ ಫಾದರ್, ಆರಕ್ಷಕ,

ಪುನೀತ್ ರಾಜ್ ಕುಮಾರ್

ಪುನೀತ್ ರಾಜ್ ಕುಮಾರ್

2,099 ಶೇ 22.2
ಹಿಟ್: ಅಣ್ಣಾಬಾಂಡ್, ದುನಿಯಾ ಸೂರಿ ನಿರ್ದೇಶನದಲ್ಲಿ ಪುನೀತ್ ಅವರು ಅಭಿನಯಿಸಿದ್ದು, ಎಂದಿನಂತೆ ಡ್ಯಾನ್ಸ್, ಫೈಟ್ ನಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಿದ ಅಪ್ಪು ಪ್ರೇಕ್ಷಕರ ಫೇವರೀಟ್.

ಶಿವರಾಜ್ ಕುಮಾರ್

ಶಿವರಾಜ್ ಕುಮಾರ್

236 ಶೇ 2.5
ಶಿವರಾಜ್ ಕುಮಾರ್ ಅವರು ಈ ವರ್ಷ ಕಡಿಮೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಶಿವದಲ್ಲಿ ಎಂದಿನ ಸಹಜ ಅಭಿನಯ ಮರೆಯಲು ಸಾಧ್ಯವಿಲ್ಲ.

ಧ್ರುವ ಸರ್ಜಾ

ಧ್ರುವ ಸರ್ಜಾ

201 ಶೇ 2.1
ಚೊಚ್ಚಲ ಚಿತ್ರ ಅದ್ದೂರಿ ಶತಕ ಬಾರಿಸಿದ್ದು, ಟಾಪ್ ನಟಿ ರಾಧಿಕಾ ಪಂಡಿತ್ ಜೋಡಿಯಾಗಿ ಮಿಂಚಿದ್ದು, ಡ್ಯಾನ್ಸ್ ಫೈಟ್ ನಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು ಧ್ರುವ ಸರ್ಜಾ ಗೆ ಪ್ಲಸ್ ಪಾಯಿಂಟ್

ಯಶ್

ಯಶ್

200 ಶೇ 2.1
ಹಿಟ್: ಡ್ರಾಮಾ, ಜಾನು ಮಂಡ್ಯ ಕಡೆ ಹೈಕ್ಲಳ ಭಾಷೆಯಲ್ಲಿ ಯಶ್ ಸಹಜ ಅಭಿನಯ ನೀಡಿದ ಡ್ರಾಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಜಾನು ಸೈಲೆಂಟ್ ಆಗಿ ಹಿಟ್ ಲಿಸ್ಟ್ ಸೇರಿದೆ. ಯಶ್ ಗೆ ಟೈಂ ಚೆನ್ನಾಗಿದೆ.

ದುನಿಯಾ ವಿಜಯ್

ದುನಿಯಾ ವಿಜಯ್

101 ಶೇ 1.1
ಹಿಟ್: ಭೀಮಾ ತೀರದಲ್ಲಿ, ಸ್ನೇಹಿತರು ಭೀಮಾತೀರದಲ್ಲಿ ಚಿತ್ರದಲ್ಲಿ ನೈಜ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸುವ ಮೂಲಕ ದುನಿಯಾ ವಿಜಯ್ ಎಲ್ಲಾ ರೀತಿ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ.

ಕೋಮಲ್ ಕುಮಾರ್

ಕೋಮಲ್ ಕುಮಾರ್

65 ಶೇ 0.7
ಹಿಟ್: ಗೋವಿಂದಾಯ ನಮಃ ಹಾಸ್ಯ ಟ್ರ್ಯಾಕ್ ನಲ್ಲಿ ಯಶಸ್ಸಿನ ಬಂಡಿ ಹತ್ತಿ ಹೊರಟಿರುವ ಕೋಮಲ್ ಕುಮಾರ್ ಆಬಾಲ ವೃದ್ಧರಾದಿಯಾಗಿ ಎಲ್ಲರ ಮೆಚ್ಚಿನ ನಟ

ಯೋಗೀಶ್

ಯೋಗೀಶ್

50 ಶೇ 0.5
ಹಿಟ್: ಸಿದ್ಲಿಂಗು-ಪಟ ಪಟ ಡೈಲಾಗ್ ಉದುರಿಸಿ ನೆಚ್ಚಿನ ನಟಿ ರಮ್ಯಾ ಸರಿ ಸಮಕ್ಕೂ ಪೈಪೋಟಿ ನೀಡಿದಂತೆ ಸಹಜ ಅಭಿನಯ ನೀಡಿದ್ದಾರೆ ಲೂಸ್ ಮಾದ ಯೋಗಿ ಫ್ಲಾಪ್: ಕಾಲಾಯ ತಸ್ಮೈ ನಮಃ, ಅಲೆಮಾರಿ

ಆದಿತ್ಯ

ಆದಿತ್ಯ

48 ಶೇ 0.5
ಹಿಟ್: ಎದೆಗಾರಿಕೆ- ಅಗ್ನಿ ಶ್ರೀಧರ್ ತಂಡದ ಚಿತ್ರದಲ್ಲಿ ಆದಿತ್ಯ ಅವರು ಸಹನೆಯ ನಟನೆ ಪ್ರೇಕ್ಷಕರ ಮನ ಸೆಳೆದಿದೆ. ಫ್ಲಾಪ್: ಶಿಕಾರಿ, ವಿಲನ್

More from Filmibeat

English summary
Here is the result of the best Kannada movie actor of the year 2012 poll. Oneindia Kannada readers chosen Darshan Toogudepa as the the best actor of the year followed Upendra and Puneet Rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X