2012ರಲ್ಲಿ ರಮ್ಯಾ ಅಚ್ಚುಮೆಚ್ಚಿನ ನಟಿ

By Mahesh

ರಮ್ಯಾ ರಾಗಿಣಿ ರಾಧಿಕಾ ಪಂಡಿತ್ ನಡುವೆ ಪೈಪೋಟಿ ಬೀಳ ಬಹುದು ಎನಿಸಿತ್ತು. ಆದರೆ, ಅಂತಿಮ ಹಂತದಲ್ಲಿ ರಮ್ಯಾ vs ರಾಧಿಕಾ ಯುದ್ಧದಲ್ಲಿ ಒನ್ ಇಂಡಿಯಾ ಓದುಗರು ರಮ್ಯಾ ಅವರ ಕೈ ಹಿಡಿದು ಜಯಭೇರಿ ಬಾರಿಸಿದ್ದಾರೆ. ಆದರೆ, ಗೆಲುವಿನ ಅಂತರ ಅತ್ಯಲ್ಪವಾಗಿದೆ.

ಮೂರನೇ ಸ್ಥಾನಕ್ಕೆ ಚಿಕ್ಕಮಗಳೂರಿನ ಬಾಲೆ ದೀಪಾ ಸನ್ನಿಧಿ ಅಚ್ಚರಿಯ ಎಂಟ್ರಿ ಕೊಟ್ಟಿದ್ದು, ಬೆಂಗಳೂರು ಬೆಡಗಿಯನ್ನು ರಾಗಿಣಿ ದ್ವಿವೇದಿ ಹಿಂದಕ್ಕೆ ತಳ್ಳಿದ್ದಾರೆ.

ಚಿತ್ರಕ್ಕೆ ಕಳೆಕಟ್ಟುತ್ತಿದ್ದ ನಾಯಕಿಯರು ಗಟ್ಟಿಯಾಗಿ ನೆಲೆ ನಿಲ್ಲುವುದೇ ಕಮ್ಮಿಯಾಗಿರುವ ದಿನಗಳಲ್ಲಿ ಹಾಗೂ ಹಿಟ್ ಆದ ಚಿತ್ರಗಳಲ್ಲೂ ನಾಯಕಿರಿಗೆ ಹೆಚ್ಚಿನ ಸ್ಕೋಪ್ ಇರಲಿಲ್ಲ.
ನಾಯಕ ಪ್ರಧಾನ ಚಿತ್ರಗಳೇ ಹೆಚ್ಚಾಗಿರುವುದರಿಂದ ನಾಯಕಿಯ ನಟನಾ ಪ್ರತಿಭೆಗಿಂತ ಮೈಮಾಟಕ್ಕೆ ಹೆಚ್ಚು ಬೆಲೆಯಾಗಿರುವುದು ದುರಂತವಾದರೂ ಸತ್ಯ.

ಇರೋದರಲ್ಲಿ ಹಾಗೊಂದು ಹೀಗೊಂದು ಚಿತ್ರಗಳಲ್ಲಿ ನಾಯಕಿ ಪಾತ್ರ ಪೋಷಣೆ ಹೆಚ್ಚಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ಸಾಧ್ಯತೆಯಿದೆ. ರಾಧಿಕಾ ಪಂಡಿತ್ ಸದ್ಯಕ್ಕೆ ಟ್ರೆಂಡ್ ನಲ್ಲಿ ಟಾಪ್ ನಲ್ಲಿದ್ದರೂ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದು ಕಮ್ಮಿ ಹೀಗಾಗಿ ರಮ್ಯಾಗೆ ಬಂಪರ್. ಒಟ್ಟಾರೆ ಹಿಟ್ ಚಿತ್ರಗಳೇ ಕಮ್ಮಿ ಇರುವುದರಿಂದ ವರ್ಷದಲ್ಲಿ 2ಕ್ಕಿಂತ ಅಧಿಕ ಚಿತ್ರದಲ್ಲಿ ಕಾಣಿಸಿಕೊಂಡ ನಾಯಕಿಯರನ್ನು ಮಾತ್ರ ಆಯ್ಕೆ ಮಾಡಲಾಗಿತ್ತು.

ರಾಧಿಕಾ ಪಂಡಿತ್, ರಮ್ಯಾ, ಪೂಜಾಗಾಂಧಿ, ರಾಗಿಣಿ, ಪ್ರಿಯಾಮಣಿ ಪ್ರಣೀತಾ ಜೊತೆಗೆ ಹರಿಪ್ರಿಯ, ಸಂಜನಾ ಪಟ್ಟಿಯಲ್ಲಿದ್ದರು. ನಿಧಿ ಸುಬ್ಬಯ್ಯ 'ಅಣ್ಣಾಬಾಂಡ್', ದೀಪಾ ಸನ್ನಿಧಿ 'ಜಾನು' ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.

ರಮ್ಯಾ ಶೇ 37.7 ಮತಗಳಿಸಿದರೆ, ರಾಧಿಕಾ ಪಂಡಿತ್ ಶೇ 31.2 ಮತ ಗಳಿಸಿದ್ದು ವಿಶೇಷ. ಮಿಕ್ಕಂತೆ ಪೂಜಾ ಗಾಂಧಿ ಹಾಗೂ ಸಂಜನಾ ಕೊನೆ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಮ್ಯಾ

ರಮ್ಯಾ

541 ಶೇ 37.7
ಹಿಟ್ : ಲಕ್ಕಿ, ಸಿದ್ಲಿಂಗು, ಕಠಾರಿ ವೀರ ಫ್ಲಾಪ್: ಕ್ರೇಜಿಲೋಕ

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್

448 ಶೇ 31.2
ಹಿಟ್ ಚಿತ್ರಗಳು : ಡ್ರಾಮಾ, ಅದ್ದೂರಿ ಫ್ಲಾಪ್: ಅಲೆಮಾರಿ, ಸಾಗರ್, ಬ್ರೇಕಿಂಗ್ ನ್ಯೂಸ್, 18th ಕ್ರಾಸ್

ದೀಪಾ ಸನ್ನಿಧಿ

ದೀಪಾ ಸನ್ನಿಧಿ

165 ಶೇ 11.5
ಹಿಟ್: ಜಾನು

ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ

75 ಶೇ 5.2
ಹಿಟ್ :ಶಿವ ಫ್ಲಾಪ್: ವಿಲನ್, ರಕ್ಷಕ

ಪ್ರಿಯಾಮಣಿ

ಪ್ರಿಯಾಮಣಿ

61 ಶೇ 4.3
ಹಿಟ್: ಅಣ್ಣಾ ಬಾಂಡ್ ಫ್ಲಾಪ್: ಕೋಕೋ, ಚಾರುಲತಾ

ಪ್ರಣೀತಾ

ಪ್ರಣೀತಾ

50 ಶೇ 3.5
ಹಿಟ್: ಭೀಮಾತೀರದಲ್ಲಿ, ಸ್ನೇಹಿತರು ಫ್ಲಾಪ್: ಮಿ. 420

ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ

34 ಶೇ 2.4
ಹಿಟ್ : ಅಣ್ಣಾ ಬಾಂಡ್

ಹರಿಪ್ರಿಯ

ಹರಿಪ್ರಿಯ

30 ಶೇ 2.1
ಹಿಟ್: - ಫ್ಲಾಪ್ : ಕಿಲಾಡಿ ಕಿಟ್ಟಿ, ಸಾಗರ್, ಸೂಪರ್ ಶಾಸ್ತ್ರಿ

ಪೂಜಾ ಗಾಂಧಿ

ಪೂಜಾ ಗಾಂಧಿ

18 ಶೇ 1.3
ಹಿಟ್ : ದಂಡುಪಾಳ್ಯ ಫ್ಲಾಪ್: ಜೈಹಿಂದ್, ತವರಿನ ಋಣ, ಕೇಳದೆ ನಿಮಗೀಗ

ಸಂಜನಾ

ಸಂಜನಾ

12 ಶೇ 0.8
ಹಿಟ್: - ಫ್ಲಾಪ್ : ನರಸಿಂಹ, ಸಾಗರ್, ಒಂದು ಕ್ಷಣದಲ್ಲಿ

More from Filmibeat

English summary
Here, result of the best Kannada movie actress of the year 2012 poll. Oneindia Kannada readers chosen Ramya as the the best actress of the year followed Radhika Pandit and Deepa Sannidhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X