For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆ

  |

  'ಡ್ರಗ್ಸ್ ಜಾಲ ಅದೆಷ್ಟು ದೊಡ್ಡದೆಂದರೆ ಸರ್ಕಾರಗಳೇ ಅದರ ಮುಂದೆ ಚಿಕ್ಕದಾಗಿ ಕಾಣುತ್ತವೆ' ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎನ್.ನಾಗರಾಜು ಡ್ರಗ್ಸ್ ಜಾಲದ ಬೃಹತ್ತತೆಯ ಬಗ್ಗೆ ವಿವರಿಸುತ್ತಾ ಹೋದರು.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಡ್ರಗ್ಸ್ ಜಾಲ ಅಂತರರಾಷ್ಟ್ರೀಯ ಮಟ್ಟದ್ದು. ಏಷ್ಟೋ ಮುಂದುವರೆದ ದೇಶಗಳ ಶಿಸ್ತಿನ ಸರ್ಕಾರಗಳು ಸಹ ಡ್ರಗ್ಸ್ ಮಾಫಿಯಾವನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ ಎಂದ ನಾಗರಾಜು, ತಾವು ಕಣ್ಣಾರೆ ಕಂಡ ನ್ಯೂಜೆರ್ಸಿಯ ಒಂದು ನಗರದ ಉದಾಹರಣೆ ನೀಡಿದರು.

  ನ್ಯೂಜೆರ್ಸಿ ಬಳಿಯ ಒಂದು ನಗರ ಡ್ರಗ್ಸ್ ಗೆ ಮಾತ್ರವೇ ಹೆಸರುವಾಸಿಯಂತೆ. ಅಲ್ಲಿನ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗಳು ಸಹ ರಾತ್ರಿ ಆಗುತ್ತಲೇ ನಗರ ಬಿಟ್ಟು ಹೊರಟುಹೋಗುತ್ತಾರಂತೆ!

  'ಡ್ರಗ್ಸ್ ಐಶಾರಾಮಿತನದ 'ಸಿಂಬಲ್' ಎಂಬಂತಾಗಿಬಿಟ್ಟಿದೆ'

  'ಡ್ರಗ್ಸ್ ಐಶಾರಾಮಿತನದ 'ಸಿಂಬಲ್' ಎಂಬಂತಾಗಿಬಿಟ್ಟಿದೆ'

  ಹೀಗೆ ಮಾತನಾಡುತ್ತಾ ಬೆಂಗಳೂರಿನಲ್ಲಿ ಸಿಕ್ಕ ಮಾದಕ ವಸ್ತು ಹಾಗೂ ಅದಕ್ಕೆ ಇರುವ ಚಿತ್ರರಂಗದ ನಂಟಿನ ಕಡೆಗೆ ಮಾತು ಹೊರಳಿತು. 'ಸಿನಿಮಾ ಎಂಬುದೇ ಬಣ್ಣದ, ಐಶಾರಾಮಿ ಲೋಕ. ಡ್ರಗ್ಸ್ ಎನ್ನುವುದು ಐಶಾರಾಮಿತನದ 'ಸಿಂಬಲ್' ಎಂಬಂತಾಗಿಬಿಟ್ಟಿದೆ. ಹಾಗಾಗಿ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಮೊದಲಿನಿಂದಲೂ ಇದೆ, ಬೆಂಗಳೂರು ಬೆಳೆದಂತೆ ಇವುಗಳ ಲಭ್ಯತೆ ಇನ್ನಷ್ಟು ಸುಲಭವಾಗುತ್ತಾ ಹೋಗುತ್ತಿದೆ ಎಂದರು.

  ಹೈಪ್ರೊಫೈಲ್ ಪ್ರಕರಣಗಳು ಸಾಕಷ್ಟಿವೆ: ನಾಗರಾಜು

  ಹೈಪ್ರೊಫೈಲ್ ಪ್ರಕರಣಗಳು ಸಾಕಷ್ಟಿವೆ: ನಾಗರಾಜು

  ನಿಮ್ಮ ಸೇವಾ ಅವಧಿಯಲ್ಲಿ ಚಿತ್ರರಂಗದ ಡ್ರಗ್ಸ್ ಸಂಬಂಧಿತ ಯಾವುದಾದರೂ ಪ್ರಕರಣ ನೆನಪಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ, ಹೈಪ್ರೋಫೈಲ್ ಕೇಸುಗಳು ಸಾಕಷ್ಟು ಬಂದಿವೆ. ಆದರೆ ಚಿತ್ರರಂಗದ ಪ್ರಕರಣಗಳು ಎಂದು ಪ್ರತ್ಯೇಕಗೊಳಿಸಿ ಹೇಳುವುದು ತುಸು ತ್ರಾಸು' ಎಂದರು ನಾಗರಾಜು.

  ಬಾಲಿವುಡ್ ಸಂಸ್ಕೃತಿ ನಮ್ಮ ಚಿತ್ರರಂಗಕ್ಕೂ ಸೋಕಿದೆ: ನಾಗರಾಜು

  ಬಾಲಿವುಡ್ ಸಂಸ್ಕೃತಿ ನಮ್ಮ ಚಿತ್ರರಂಗಕ್ಕೂ ಸೋಕಿದೆ: ನಾಗರಾಜು

  ಚಿತ್ರರಂಗ ಬೆಳೆದಂತೆ ಬಾಲಿವುಡ್‌ನ ಸಂಸ್ಕೃತಿ ದಕ್ಷಿಣದ ಚಿತ್ರರಂಗಗಳಿಗೂ ಹಬ್ಬಿದೆ. ನಟ-ನಟಿಯರು ಹಲವು ಕಾರಣಗಳಿಗಾಗಿ ಮಾದಕ ವಸ್ತುಗಳನ್ನು ಬಳಸುತ್ತಾರೆಂದು 'ಕೇಳಿದ್ದೇನೆ'. ತಮ್ಮನ್ನು ತಾವು ಎಚ್ಚರದಿಂದಿಟ್ಟುಕೊಳ್ಳಲು ಸಹ ಡ್ರಗ್ಸ್ ಬಳಸುವವರಿದ್ದಾರೆ ಎಂದರು ನಾಗರಾಜು.

  ಎನ್‌ಡಿಪಿಎಸ್ ಕಾಯ್ದೆ ಬಹಳ ಕಠಿಣವಾಗಿದೆ

  ಎನ್‌ಡಿಪಿಎಸ್ ಕಾಯ್ದೆ ಬಹಳ ಕಠಿಣವಾಗಿದೆ

  ಮಾದಕ ವಸ್ತುಗಳ ವಿರುದ್ಧ ಕಾಯ್ದೆಗಳು ಬಹಳ ಕಠಿಣವಾಗಿಯೇ ಇವೆ. ನಾನು ಸೇವೆಯಲ್ಲಿದ್ದಾಗ ಹಲವು ಪ್ರಕರಣಗಳನ್ನು ದಾಖಲಿಸಿದ್ದೆ. ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ಮಾದಕ ವಸ್ತು ಮಾರುವವನಷ್ಟೆ ಅಪರಾಧ ಮಾದಕ ವಸ್ತು ಕೊಳ್ಳುವವನದ್ದೂ ಆಗಿರುತ್ತದೆ. ಎನ್‌ಡಿಪಿಎಸ್ ಕಾಯ್ದೆ ಕಠಿಣವಾದದ್ದು ಎಂದರು ನಾಗರಾಜು.

  'ಐಶಾರಾಮಿ ಹೋಟೆಲ್‌ನಲ್ಲಿ ದೊಡ್ಡ ಕುಳಗಳ ಕೈಸೇರುತ್ತದೆ ಡ್ರಗ್ಸ್'

  'ಐಶಾರಾಮಿ ಹೋಟೆಲ್‌ನಲ್ಲಿ ದೊಡ್ಡ ಕುಳಗಳ ಕೈಸೇರುತ್ತದೆ ಡ್ರಗ್ಸ್'

  ದೊಡ್ಡ ದೊಡ್ಡ ಐಶಾರಾಮಿ ಹೋಟೆಲ್‌ಗಳಲ್ಲಿಯೇ ಎಗ್ಗಿಲ್ಲದೆ ಡ್ರಗ್ಸ್ ದಂಧೆ ನಡೆಯುತ್ತದೆ. ಐಶಾರಾಮಿ ಹೋಟೆಲ್‌ಗಳಲ್ಲಿ ಡ್ರಗ್ಸ್ ದೊಡ್ಡ ಕುಳಗಳ ಕೈಗೆ ಸೇರುತ್ತದೆ. ಐಶಾರಾಮಿ ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಡ್ರಗ್ಸ್ ಸಿಕ್ಕಿದ್ದಕ್ಕೆ ನಾನೇ ಒಮ್ಮೆ ಸಾಕ್ಷಿಯಾಗಿದ್ದೆ ಎಂದು ನೆನಪಿಸಿಕೊಂಡರು ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್.

  English summary
  Retired police officer N Nagaraju and Sangram Singh talks about drugs in movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X