twitter
    For Quick Alerts
    ALLOW NOTIFICATIONS  
    For Daily Alerts

    ಚೊಚ್ಚಿಲ ಸಿನಿಮಾದ ಸಂಭ್ರಮದಲ್ಲಿ ಪಂಚಭಾಷಾ ತಾರೆ ರೇವತಿ

    By Super
    |

    Revathy
    ಪ್ರತಿ ವರ್ಷ ವಿಶ್ವದಲ್ಲಿಯೇ ಅತಿ ಹೆಚ್ಚು ಸಿನಿಮಾಗಳನ್ನು ತಯಾರಿಸುವ ಭಾರತದ ಸಿನಿಮಾ ರಂಗ ಯಾವುದರ ಸುತ್ತ ಸುತ್ತುತ್ತಿದೆ. ನಮ್ಮ ಸಿನಿಮಾ ನಿರ್ದೇಶಕ- ನಿರ್ಮಾಪಕರಿಗೆ ಸ್ಫೂರ್ತಿಯಾದರೂ ಏನು?
    - 'ಯುವ ಪ್ರೇಮಿಗಳ ಕಥಾನಕ ಫಾರ್ಮುಲಾ" ಎನ್ನುತ್ತಾರೆ ದಕ್ಷಿಣ ಭಾರತದ ಪ್ರಸಿದ್ಧ ನಟಿ ರೇವತಿ. ಪ್ರತಿಶತ 80 ಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಹಸಿ ಬಿಸಿ ಪ್ರೇಮವೇ ಹೂರಣ ಅನ್ನುವುದು ರೇವತಿ ಅಭಿಪ್ರಾಯ, ಆರೋಪ. ಅಂದಹಾಗೆ, ಅವರೀಗ ನಿರ್ದೇಶಕರೂ ಹೌದು. ಅವರ ಮೊದಲ ಚಿತ್ರ ಇಂಗ್ಲೀಷ್‌ನದು- 'ಮಿತ್ರ್‌-ಮೈ ಫ್ರೆಂಡ್‌".

    ನಟನೆ ನನ್ನ ಹವ್ಯಾಸ. ಸವಾಲಿನ ಪಾತ್ರಗಳು ಸಿಕ್ಕರೆ ಈಗಲೂ ನಟಿಸಲು ಸಿದ್ಧ ಎಂದು ರೇವತಿ ನಗುತ್ತಾರೆ. ಆ ನಗುವಿನಲ್ಲಿ ಸವಾಲಿನ ಪಾತ್ರಗಳು ಸಿಗುತ್ತಿಲ್ಲ ಅನ್ನುವ ಬೇಸರ ಸಣ್ಣಗೆ ತುಳುಕುತ್ತದೆ. ರೇವತಿ ಪಂಚ ಭಾಷಾ ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಿಂದಿಗಳಲ್ಲಿ ಅಭಿನೇತ್ರಿ ಅನ್ನಿಸಿಕೊಂಡವರು. ಅವರ ನಟನೆಯ ಅಕೌಂಟಿನಲ್ಲಿ 125 ಸಿನಿಮಾಗಳ ಲೆಕ್ಕವಿದೆ.

    ರೇವತಿ ಅವರೀಗ ಮಲಯಾಳಂ ಸಿನಿಮಾ 'ನಂದನಂ" ನಲ್ಲಿ ಬಿಜಿ. ಅವರು ಮಾತಿಗೆ ಸಿಕ್ಕಿದ್ದುದು ಕೂಡ ನಂದನಂ ಶೂಟಿಂಗ್‌ ಸಂದರ್ಭದಲ್ಲೇ- ಕೊಚ್ಚಿಯಲ್ಲಿ .

    ನಟಿಯರಿಗೇನು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ಗಾಯಕಿಯರು ಕೂಡ. ಆದರೆ, ತಾಂತ್ರಿಕ ವಿಭಾಗಕ್ಕೆ ಬಂದರೆ ಮಹಿಳೆಯರು ಅಲ್ಪ ಸಂಖ್ಯಾತರು. ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ವಿಭಾಗಕ್ಕೆ ಬರುವುದು ಒಳ್ಳೆಯದನ್ನಿಸುತ್ತೆ ಅನ್ನುತ್ತಾರೆ ರೇವತಿ. ಅವರಂತೂ ನಿರ್ದೇಶನಕ್ಕಿಳಿದಿದ್ದಾರೆ ; ಖುಷಿಯಾಗಿಯೂ ಇದ್ದಾರೆ.

    ಮಿತ್ರ್‌- ಬಗೆಗೆ ಹೇಳುವುದಾದರೆ ಅದು ಪ್ರಮೀಳಾ ಪಡೆಯ ಸೃಷ್ಟಿ . ಪ್ರಿಯಾ ಹಾಗೂ ಸುಧಾ ಚಿತ್ರಕಥೆ ಬರೆದಿದ್ದಾರೆ. ಸುಧಾ ಮಿತ್ರ್‌ನ ಸಹಾಯಕ ನಿರ್ದೇಶಕರೂ ಹೌದು. ಸಂಗೀತ ನಿರ್ದೇಶನವೂ ಮಹಿಳೆಯದೇ; ಹಿರಿಯ ಸಂಗೀತ ನಿರ್ದೇಶಕ ಇಳಯರಾಜಾ ಅವರ ಪುತ್ರಿ ಭಾವತರಿಣಿ ರಾಗ ಹರಿಸಿದ್ದಾರೆ. ಅಲ್ಲಿಗೆ ಇಳಯರಾಜಾ ಅವರ ಪುತ್ರ- ಪುತ್ರಿ ಸಂಗೀತ ನಿರ್ದೇಶಕರಾದಂತಾಯಿತು. ಸಂಗೀತ ವಂಶದತ್ತ ಅನ್ನುವುದಕ್ಕೊಂದು ಉದಾಹರಣೆ. ಛಾಯಾಗ್ರಹಣ ಫೌಜಿಯಾ ಅವರದು. ಬೀನಾ ಸಂಕಲನವನ್ನು ನಿಭಾಯಿಸಿದ್ದಾರೆ.

    ಅಮೆರಿಕಾದ ಕ್ಯಾಲಿಫೋರ್ನಿಯಾದ ಸಿಲಿಕಾನ್‌ ವ್ಯಾಲಿ ಹಾಗೂ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ತಮ್ಮ ಸಿನಿಮಾದ ಚಿತ್ರೀಕರಣ ನಡೆದಿರುವುದಾಗಿ ರೇವತಿ ಹೇಳುತ್ತಾರೆ. ಒಟ್ಟು 33 ದಿನಗಳ ಚಿತ್ರೀಕರಣ. ಮಿತ್ರ್‌- ಇದು ಕಲಾತ್ಮಕ ಸಿನಿಮಾ ಮಾತ್ರವಲ್ಲ ; ಹ್ಯೂಮರ್‌ ಇದೆ, 8 ಹಾಡುಗಳಿವೆ ಎಂದು ಗುಟ್ಟು ಬಿಟ್ಟು ಕೊಡುತ್ತಾರೆ ರೇವತಿ. ಹಾಡುಗಳಿಂದಲೇ ಸಿನಿಮಾ ಗೆಲ್ಲುವುದಿಲ್ಲ ಅನ್ನುವುದೂ ಅವರಿಗೆ ಗೊತ್ತು . ಇತ್ತೀಚಿನ ಸಿನಿಮಾಗಳು ಕಥೆಯಿಂದ ಗೆದ್ದಿವೆಯೇ ಹೊರತು ಹಾಡುಗಳಿಂದಲ್ಲ ಅನ್ನುವುದನ್ನು ರೇವತಿ ಒತ್ತಿ ಹೇಳುತ್ತಾರೆ.

    18 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ ಭಾರತೀಯ ಕುಟುಂಬದ ತಲ್ಲಣ ತವಕಗಳ ಕಥೆಯೇ- ಮಿತ್ರ್‌! ನುರಿತ ನಟಿ ಶೋಭನಾ ಹಾಗೂ ಹಿರಿಯ ರೂಪದರ್ಶಿ ನಾಸಿರ್‌ ಅಬ್ದುಲ್ಲಾ ಪ್ರಮುಖ ತಾರಾಗಣದಲ್ಲಿದ್ದಾರೆ. ದಂಪತಿಗಳ ಕುಡಿಯಾಗಿ ನಟಿಸಿರುವ ಅಮೆರಿಕನ್‌ ಬಾರ್ನ್‌ ಮಗುವಾಗಿ ನಟಿಸಿರುವ ಪ್ರೀತಿ ವಿಸ್ಸಾ ಗೆ ಮಿತ್ರ್‌ ಮೊದಲ ಸಿನಿಮಾ.

    ಫೆ.14 ರಂದು ಮಿತ್ರ್‌ ತೆರೆ ಕಾಣುತ್ತಿದೆ. ಅಂದು ಪ್ರೇಮಿಗಳ ದಿನ!

    English summary
    Indian cinema revolves around teenage romance: Revathy
    Thursday, August 8, 2013, 11:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X