ನಿವೇದಿತಾ ಗೌಡಗೆ ಹಣ ಎಲ್ಲಿಂದ ಬರುತ್ತೆ ? ಒಂದು ದಿನದ ಖರ್ಚು ಎಷ್ಟು ? ಬಾರ್ಬಿ ಡಾಲ್ ಖಂಡತುಂಡ ಉತ್ತರ
ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ... ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ. ಯಾರೇ ಕೂಗಾಡಲಿ, ಬಾತ್ ರೂಮ್ ಅಲ್ಲಾಡಲಿ ಎನ್ನುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಅವರಿಗೆ ಕೇವಲ ರೀಲ್ಸ್ ಮಾಡುವ ಹವ್ಯಾಸ ಮಾತ್ರ ಇಲ್ಲ. ಬದಲಿಗೆ ದೇಶ ಸುತ್ತುವ ಅಭ್ಯಾಸ ಕೂಡ ಇದೆ.
ಒಮ್ಮೆ ಗೋವಾದಲ್ಲಿದ್ದರೆ ಮತ್ತೊಮ್ಮೆ ವಿಯೆಟ್ನಾಂನಲ್ಲಿರುತ್ತಾರೆ. ಮತ್ತೊಮ್ಮೆ ನ್ಯೂಯಾರ್ಕ್‌ನ ಬೀದಿಯಲ್ಲಿ ಕಾಣಿಸಿಕೊಂಡರೆ ಇನ್ನೊಮ್ಮೆ ಪ್ಲೋರಿಡಾದಲ್ಲಿ ನಿವೇದಿತಾ ಪ್ರತ್ಯಕ್ಷರಾಗುತ್ತಾರೆ. ಇನ್ನು ಎಲ್ಲರಿಗೆ ಗೊತ್ತಿರುವಂತೆ ನಿವೇದಿತಾ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಚಿತ್ರಗಳನ್ನು ಮಾಡಿಲ್ಲ. ಚಂದನ್ ಶೆಟ್ಟಿ ಕೂಡ ಈಗ ಜೊತೆಯಲ್ಲಿ ಇಲ್ಲ.

ಈ ಹಿನ್ನೆಲೆ ಹಲವರಿಗೆ ನಿವೇದಿತಾ ಗೌಡ ಅವರ ಆದಾಯದ ಕುರಿತು ಅನುಮಾನಗಳಿವೆ. ಮಾತೆತ್ತಿದರೆ ವಿದೇಶ ಪ್ರವಾಸಕ್ಕೆ ಹೋಗುವ ನಿವೇದಿತಾ ಗೌಡಗೆ ದುಡ್ಡು ಎಲ್ಲಿಂದ ಬರುತ್ತೆ ಎನ್ನುವ ಪ್ರಶ್ನೆ ಇದೆ. ಈ ಪ್ರಶ್ನೆಗೆ ನಿವೇದಿತಾ ಗೌಡ ಸದ್ಯ ಉತ್ತರ ನೀಡಿದ್ದಾರೆ.
ಈ ಕುರಿತು ''ಪಬ್ಲಿಕ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ ಗೌಡ ನಾನು ದುಡಿಯುತ್ತೇನೆ ನನ್ನ ಹಣ ಖರ್ಚು ಮಾಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಸುತ್ತಾಡುವುದು ಅಂದರೆ ತುಂಬಾ ಇಷ್ಟ ಹೀಗಾಗಿ ನಾನು ಪ್ರವಾಸಕ್ಕೆ ಹೋಗುತ್ತೇನೆ ಎಂದು ಹೇಳಿರುವ ನಿವೇದಿತಾ ನಾನು ಯಾರ ಮೇಲೆ ಕೂಡ ಅವಲಂಬಿತವಾಗಿಲ್ಲ, ಸೋಶಿಯಲ್ ಮೀಡಿಯಾ ಮೂಲಕ ನನಗೆ ಚೆನ್ನಾಗಿ ಆದಾಯ ಬರುತ್ತೆ ಎಂದು ಹೇಳಿದ್ದಾರೆ. ನನ್ನ ಜೀವನ ನಡೆಸಲು ಸಾಕಾಗುವಷ್ಟು ಹಣ ಅದರಿಂದ ಬರುತ್ತೆ ನಾನು ಅದನ್ನು ಖರ್ಚು ಮಾಡುತ್ತೇನೆ ಎಂದು ಹೇಳಿದ್ದಾರೆ.
ನನಗೆ ಎಲ್ಲರಂತೆ ಹಣ ಕೂಡಿ ಇಡುವ ಅಭ್ಯಾಸ ಇಲ್ಲ ಒಂದೊಂದು ಕ್ಷಣವನ್ನು ಖುಷಿಯಿಂದ ಕಳೆಯಲು ಬಯಸುವಳು ನಾನು ಎಂದು ಹೇಳಿರುವ ನಿವೇದಿತಾ ಪ್ರವಾಸಕ್ಕೆ ಹೋಗುವಾಗ ನನ್ನ ಅಪ್ಪ ಅಮ್ಮ ಹಣ ಬೇಕಾ ಅಂತಾ ಕೇಳ್ತಾರೆ. ಆದರೆ ನಾನು ಅವರಿಂದ ಹಣ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾ ಮೂಲಕವೇ ನನ್ನ ಜೀವನ ನಡೆಯುತ್ತಿರುವುದು, ಅದು ನನ್ನ ಬ್ರೆಡ್ & ಬಟರ್ ಎಂದು ಹೇಳಿರುವ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾ ಜೊತೆ ಜೊತೆ ಬ್ರ್ಯಾಂಡ್‌ಗಳನ್ನು ಕೂಡ ನಾನು ಪ್ರಮೋಟ್ ಮಾಡುತ್ತೇನೆ, ಅಲ್ಲಿಂದ ಕೂಡ ಹಣ ಬರುತ್ತೆ ಎಂದು ಹೇಳಿದ್ದಾರೆ.

ಇನ್ನೂ ಹಣದ ಮೂಲದ ಜೊತೆ ಹಲವರಿಗೆ ನಿವೇದಿತಾ ಗೌಡ ಅವರ ಒಂದು ದಿನದ ಖರ್ಚು ಎಷ್ಟು ಎನ್ನುವ ಕುತೂಹಲವು ಇದೆ. ಈ ಕುತೂಹಲಕ್ಕೂ ''ಪಬ್ಲಿಕ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿರುವ ನಿವೇದಿತಾ ಗೌಡ ಖರ್ಚು ವೆಚ್ಚ ಹೇಳಲು ನನಗೆ ಇಷ್ಟ ಇಲ್ಲ ಅದೆಲ್ಲವೂ ಸಂದರ್ಭ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಇರುತ್ತೆ ಎಂದು ಹೇಳಿದ್ದಾರೆ. ಎಲ್ಲಾದರೂ ಪ್ರವಾಸಕ್ಕೆ ಹೋದಾಗ ಹೆಚ್ಚಾಗುತ್ತೆ. ಮನೆಯಲ್ಲಿದ್ದಾಗ ಕಡಿಮೆ ಆಗುತ್ತೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಶನದಲ್ಲಿ ನನಗೆ ಒಳ್ಳೆಯ ಬಟ್ಟೆ ಅಂದರೆ ಇಷ್ಟ. ಶೂ ಹಾಕಿಕೊಳ್ಳುವುದು ಇಷ್ಟ. ಸದಾ ಚೆನ್ನಾಗಿ ಕಾಣಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿರುವ ನಿವೇದಿತಾ ಗೌಡ ಹೇರ್ ವಾಶ್‌ಗೆ ವಾರಕ್ಕೆರಡು ದಿನ ನಾನು ಸಲೂನ್‌ಗೆ ಹೋಗುತ್ತೇನೆ ಎನ್ನುವ ವಿಚಾರ ಕೂಡ ನಿಜಾ ಎಂದು ಹೇಳಿದ್ದಾರೆ. ಇನ್ನುಳಿದಂತೆ ಸದ್ಯ ಚಿತ್ರರಂಗದ ಕಡೆ ಗಮನ ವಹಿಸಿರುವ ನಿವೇದಿತಾ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದು ಮುಂದಿನ ವರ್ಷ ಫೆಬ್ರವರಿಯಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಲಿದೆ.


Click it and Unblock the Notifications










