TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಚಿರಂಜೀವಿಗೆ ಆಕ್ಷನ್ ಕಟ್ ಹೇಳ್ತಾರಾ ಉಪೇಂದ್ರ?
ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಲಿರುವ 150ನೇ ಚಿತ್ರದ ಬಗ್ಗೆ ಟಾಲಿವುಡ್ ನಲ್ಲಿ ಹೈ ಎಕ್ಸ್ ಪೆಕ್ಟೇಷನ್ಸ್ ಇದೆ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಬೇಕು ಅನ್ನುವ ಕಾರಣಕ್ಕೆ ಚಿರಂಜೀವಿ ಕೂಡ ಉತ್ತಮ ಸ್ಕ್ರಿಪ್ಟ್ ಹುಡುಕಾಟದಲ್ಲಿದ್ದಾರೆ.
ಪೂರಿ ಜಗನ್ನಾಥ್, ವಿ.ವಿ.ವಿನಾಯಕ್, ಎಸ್.ಎಸ್.ರಾಜಮೌಳಿ ಸೇರಿದಂತೆ ಟಾಲಿವುಡ್ ನ ಖ್ಯಾತ ನಿರ್ದೇಶಕರ ಹೆಸರು ಚಿರಂಜೀವಿ 150ನೇ ಸಿನಿಮಾದೊಂದಿಗೆ ತಳುಕು ಹಾಕಿಕೊಂಡಿತ್ತು. ಇದೀಗ ಇದೇ ನಿರ್ದೇಶಕರ ಪಟ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹೆಸರು ಕೂಡ ಸೇರ್ಪಡೆಯಾಗಿದೆ. [ಚಿರಂಜೀವಿ 150ನೇ ಚಿತ್ರಕ್ಕೆ ತಮಿಳಿನ ಶಂಕರ್ ಆಕ್ಷನ್ ಕಟ್]
ತಮ್ಮ ಚಿತ್ರಕ್ಕೆ ನಿರ್ದೇಶನ ಮಾಡುವಂತೆ ಮೆಗಾ ಸ್ಟಾರ್ ಚಿರಂಜೀವಿ, ರಿಯಲ್ ಸ್ಟಾರ್ ಉಪೇಂದ್ರಗೆ ಆಫರ್ ನೀಡಿದ್ದರಂತೆ. ಹಾಗಂತ ಖುದ್ದು ಉಪೇಂದ್ರ ಬಹಿರಂಗ ಪಡಿಸಿದ್ದಾರೆ.
'ಉಪೇಂದ್ರ 2' ಚಿತ್ರದ ಕುರಿತು ತೆಲುಗಿನ ಖಾಸಗಿ ವಾಹಿನಿಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಈ ವಿಚಾರವನ್ನ ಬಾಯ್ಬಿಟ್ಟಿದ್ದಾರೆ. ''ಹಲವು ವರ್ಷಗಳ ಹಿಂದೆಯೇ ಚಿರಂಜೀವಿ ಅವರ ಸಿನಿಮಾವನ್ನ ನಿರ್ದೇಶಿಸುವ ಚಾನ್ಸ್ ಸಿಕ್ಕಿತ್ತು. ನಾನು ಹಲವು ಕಥೆಗಳನ್ನ ಚಿರಂಜೀವಿ ಅವರಿಗೆ ಹೇಳಿದ್ದೆ. ಆದ್ರೆ ಅನಿವಾರ್ಯ ಕಾರಣಗಳಿಂದ ಸಿನಿಮಾ ಸೆಟ್ಟೇರಲಿಲ್ಲ. 150ನೇ ಚಿತ್ರ ನಿರ್ದೇಶಿಸುವ ಚಾನ್ಸ್ ಸಿಕ್ಕರೆ, ಅದು ನನ್ನ ಅದೃಷ್ಟ'' ಅಂತ ಉಪೇಂದ್ರ ಹೇಳಿದ್ದಾರೆ.
ಟಾಲಿವುಡ್ ನಲ್ಲಿ 'ಉಪೇಂದ್ರ-2' ಹಿಟ್ ಆಗಿದೆ. ಸಿನಿಮಾ ನೋಡಿ ಚಿರಂಜೀವಿ ಇಂಪ್ರೆಸ್ ಅಗಿದ್ದರೆ, ಅವರ 150ನೇ ಸಿನಿಮಾ ಉಪೇಂದ್ರ ಪಾಲಾದರೂ ಅಚ್ಚರಿ ಇಲ್ಲ. [ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]
ಬರೀ ನಟನಾಗಿ ಮಾತ್ರ ಅಲ್ಲ, ರಿಯಲಿಸ್ಟಿಕ್ ಡೈರೆಕ್ಟರ್ ಆಗಿ ಉಪೇಂದ್ರ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಮಂದಿಯನ್ನೂ ಮೋಡಿ ಮಾಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಾ?