»   » ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ

ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ

Posted By:
Subscribe to Filmibeat Kannada

ಕನ್ನಡದ 'ಮಾಣಿಕ್ಯ' ಕಿಚ್ಚ ಸುದೀಪ್, ತೆಲುಗಿನಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದಲ್ಲಿ ನಟಿಸಿರುವ ಸುದ್ದಿ ನಿಮಗೆ ಗೊತ್ತೇಯಿದೆ. ಹಾಗೇ, ಕಾಲಿವುಡ್ ನಲ್ಲಿ ಇಳಯದಳಪತಿ ವಿಜಯ್ ಜೊತೆ 'ಪುಲಿ' ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಷಯವನ್ನ ನಾವೇ ನಿಮಗೆ ಹೇಳಿದ್ವಿ.

'ಪುಲಿ' ಚಿತ್ರದಲ್ಲಿ ಸುದೀಪ್ ಬರೀ ವಿಶೇಷ ಪಾತ್ರಕ್ಕೆ ಮಾತ್ರ ಸೀಮಿತ ಅಂತಂದುಕೊಳ್ಳಬೇಡಿ. 'ಪುಲಿ' ಚಿತ್ರದಲ್ಲಿ ವಿಜಯ್ ಗೆ ಎಷ್ಟು ಪ್ರಾಮುಖ್ಯತೆ ಇದ್ಯೋ...ಅಷ್ಟೇ ಪ್ರಾಮುಖ್ಯತೆ ಸುದೀಪ್ ಗೂ ಇದೆ. ಬೇಕಾದ್ರೆ, ಈಗಷ್ಟೇ ರಿಲೀಸ್ ಆಗಿರುವ 'ಪುಲಿ' ಟೀಸರ್ ನೋಡಿ....

Revealed ; Kiccha Sudeep's look in 'Puli'

'ಪುಲಿ' ಚಿತ್ರದ ಫಸ್ಟ್ ಲುಕ್ ಟೀಸರ್ ನಲ್ಲಿ ಸುದೀಪ್ ಕಾಣಿಸಿಕೊಂಡಿರುವ ಪರಿ ಇದು. ಮೊದಲ ನೋಟಕ್ಕೆ ವೀರ ಪರಾಕ್ರಮನಂತೆ ಕಾಣುವ ಸುದೀಪ್, ಖಡಕ್ ಆಗಿ ಮಿಂಚಿದ್ದಾರೆ. [ಕಾಲಿವುಡ್ ನಲ್ಲಿ 'ಹುಲಿ'ಯಾದ ಕಿಚ್ಚ ಸುದೀಪ್!]

ಧೀರ ಯೋಧನಂತೆ ಕಾಣುವ ಸುದೀಪ್, 'ಪುಲಿ' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರಾ..? ಗೊತ್ತಿಲ್ಲ. ಟೀಸರ್ ನೋಡಿದ್ರೆ, ಈ ಅನುಮಾನ ಮೂಡುವುದು ಸಹಜ. ಆದ್ರೆ, ಸುದೀಪ್ ಪಾತ್ರದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. [ಬಾಹುಬಲಿಯಲ್ಲಿ ಅಸ್ಲಂ ಖಾನ್ ಆಗಿ 'ಕಿಚ್ಚ' ಸುದೀಪ್]

'ಬಾಹುಬಲಿ' ಚಿತ್ರದಲ್ಲಿ ಅಸ್ಲಂ ಖಾನ್ ಆಗಿ ಸುದೀಪ್ ಹೇಗೆ ಕತ್ತಿ ವರಸೆ ಮಾಡಿದ್ದಾರೋ, ಅದೇ ರೀತಿ ಇಲ್ಲೂ ವೈರಿಗಳ ರುಂಡ ಚೆಂಡಾಡಿದ್ದಾರೆ. ಇದು ಫಸ್ಟ್ ಲುಕ್ ಅಷ್ಟೇ. ಇಷ್ಟಕ್ಕೆ ನೀವು ನಿಬ್ಬೆರಗಾದರೆ, ಪೂರಾ ಪಿಕ್ಚರ್ ಇನ್ನೂ ಬಾಕಿ ಇದೆ.

English summary
Ilayathalapathi Vijay starrer Tamil Movie 'Puli' first look teaser is out. Kiccha Sudeep, who is playing a key role in the movie looks daring and dashing in the teaser. Watch the teaser here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada