»   » ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?

ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?

Posted By:
Subscribe to Filmibeat Kannada

ಮೊಟ್ಟಮೊದಲ ಬಾರಿಗೆ 'ಆರ್ಮಿ' ಲುಕ್ ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಸಿನಿಮಾ 'ಹೆಬ್ಬುಲಿ'. ವೀರ ಯೋಧನಾಗಿ ಸುದೀಪ್ ಹೇಗೆ ಕಾಣ್ಬಹುದು ಎಂಬ ಕುತೂಹಲಕ್ಕೆ ಚಿತ್ರತಂಡ ಈಗಾಗಲೇ ಬ್ರೇಕ್ ಹಾಕಿ, ಸುದೀಪ್ ಫಸ್ಟ್ ಲುಕ್ ಫೋಟೋಗಳನ್ನ ರಿವೀಲ್ ಮಾಡಿದೆ.

ಈಗ 'ಹೆಬ್ಬುಲಿ' ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ಡೀಟೇಲ್ಸ್ ನ ನಿಮಗಾಗಿ ನಾವು ಹೊತ್ತು ತಂದಿದ್ದೀವಿ.


'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಆರ್ಮಿ ಆಫೀಸರ್ ಎಂಬುದನ್ನ ಬಿಟ್ಟರೆ, ಬೇರೇನು ಗೊತ್ತು ನಿಮಗೆ? 'ಹೆಬ್ಬುಲಿ' ಚಿತ್ರಕ್ಕೋಸ್ಕರ ಸುದೀಪ್ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ ಅಂದ್ರೆ, ಸಿನಿಮಾದ ಕಥೆಯಲ್ಲಿ ವಿಶೇಷತೆ ಇರಲೇಬೇಕಲ್ವಾ? 'ಹೆಬ್ಬುಲಿ' ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಸತ್ಯ ಸಂಗತಿಗಳನ್ನ ಇಂದು ನಾವು ಬಹಿರಂಗ ಮಾಡುತ್ತಿದ್ದೇವೆ. ಓದಿರಿ....


'ಹೆಬ್ಬುಲಿ' ಚಿತ್ರದ ಕಥೆ ಏನು.?

ಭಾರತ ಹಾಗೂ ಪಾಕಿಸ್ತಾನ ನಡುವಿನ ಉಗ್ರರ ದಮನದ ಕಥೆಯೇ 'ಹೆಬ್ಬುಲಿ'.! [ಚಿತ್ರಗಳು: ಆರ್ಮಿ ಲುಕ್ ನಲ್ಲಿ 'ಹೆಬ್ಬುಲಿ' ಸುದೀಪ್ ಗತ್ತು]


ವೀರ ಯೋಧ ಸುದೀಪ್

ಪ್ರಪಂಚಕ್ಕೆ ಕಂಟಕವಾಗಿರುವ ಉಗ್ರರನ್ನ, ಅವರಿಗೆ ರಕ್ಷಣೆ ನೀಡುತ್ತಿರುವ ದೇಶಕ್ಕೆ ನುಗ್ಗಿ ಹೊಡೆಯುವ ಧೀರ ಪರಾಕ್ರಮಶಾಲಿ ಕಮಾಂಡರ್ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. [ಟೀಸರ್: ಕಿಚ್ಚನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ಕ ಸ್ಪೆಷಲ್ ಗಿಫ್ಟ್ ಇದು]


ಕಾಶ್ಮೀರದಲ್ಲಿ 'ಹೆಬ್ಬುಲಿ' ಘರ್ಜನೆ

ಪಾಕಿಸ್ತಾನ ಹಾಗೂ ಭಾರತದ ನಡುವಿನ ಪ್ರಸ್ತುತ ವಿದ್ಯಮಾನಗಳೇ 'ಹೆಬ್ಬುಲಿ' ಚಿತ್ರದ ಕಥಾಹಂದರ ಆಗಿರುವುದರಿಂದ, ಚಿತ್ರದ ಬಹುತೇಕ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ['ಹೆಬ್ಬುಲಿ' ಕಿಚ್ಚನ ಮತ್ತೊಂದು ಶಿಕಾರಿ ಕಬೀರ್ ದುಹಾನ್]


ಕಾಶ್ಮೀರದಲ್ಲಿ ಎರಡು ವಾರ ಶೂಟಿಂಗ್.!

ಸುದೀಪ್, ಅಮಲಾ ಪೌಲ್, ಚಿಕ್ಕಣ್ಣ ಸೇರಿದಂತೆ ಐವತ್ತು ಮಂದಿ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ಹೊರಟಾಗ, ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು. 'ನಾವು ಸೇಫ್' ಆಗಿದ್ದೀವಿ ಎಂಬ ಗ್ಯಾರೆಂಟಿ ಇಲ್ಲದೇ, ಶೂಟಿಂಗ್ ಮಾಡಲು ಪರ್ಮಿಷನ್ ಸಿಗದೆ, ಸರ್ಕಸ್ ಮಾಡಿ ಪೊಲೀಸ್ ಬಂದೋಬಸ್ತ್ ನಲ್ಲಿ, ರಕ್ಷಣಾ ಪಡೆಗಳ ಬಂದೂಕಿನ ಕಾವಲಿನಲ್ಲಿ 'ಹೆಬ್ಬುಲಿ' ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ.


ಪೂರ್ತಿ ಕಥೆ ಕೇಳದ ಸುದೀಪ್.!

'ಹೆಬ್ಬುಲಿ' ಚಿತ್ರದ ಒನ್ ಲೈನ್ ಸ್ಟೋರಿ ಕೇಳಿದ ತಕ್ಷಣವೇ ಹಿಂದು ಮುಂದು ನೋಡದೆ ಓಕೆ ಅಂದುಬಿಟ್ಟರಂತೆ ಸುದೀಪ್. ಅಲ್ಲದೇ, ವಿಭಿನ್ನ ಹೇರ್ ಸ್ಟೈಲ್ ಮಾಡಿಕೊಳ್ಳಲು ಮುಂದಾದರು. ಅಷ್ಟರಮಟ್ಟಿಗೆ, 'ಹೆಬ್ಬುಲಿ' ಸಾರಾಂಶ ಸುದೀಪ್ ಮನಮುಟ್ಟಿದೆ. [ಶೂಟಿಂಗ್ ಹಂತದಲ್ಲೇ ರೆಕಾರ್ಡ್ ಬ್ರೇಕ್ ಮಾಡಿದ ಕಿಚ್ಚನ 'ಹೆಬ್ಬುಲಿ']


ಸ್ವಿಟ್ಜರ್ಲ್ಯಾಂಡ್ ಗೆ ಹೊರಟು ನಿಂತಿದೆ ಚಿತ್ರತಂಡ

ಒಂದು ಹಾಡಿನ ಚಿತ್ರೀಕರಣಕ್ಕಾಗಿ ಇದೇ ತಿಂಗಳ 9 ರಂದು ಸ್ವಿಟ್ಜರ್ಲ್ಯಾಂಡ್ ಗೆ 'ಹೆಬ್ಬುಲಿ' ಚಿತ್ರತಂಡ ಹೊರಟು ನಿಂತಿದೆ.


ನಿರ್ಮಾಪಕರು ಯಾರು?

ಎಸ್.ಆರ್.ವಿ ಪ್ರೊಡಕ್ಷನ್ಸ್ ನ ರಘುನಾಥ್ ಮತ್ತು ಉಮಾಪತಿ ಪಿಕ್ಚರ್ಸ್ ನ ಉಮಾಪತಿ ಬಂಡವಾಳ ಹಾಕಿರುವ ಸಿನಿಮಾ 'ಹೆಬ್ಬುಲಿ'.


ನಿರ್ದೇಶಕ ಕೃಷ್ಣ

ಸುದೀಪ್ ರವರ 'ರಂಗ ಎಸ್.ಎಸ್.ಎಲ್.ಸಿ', 'ಕೆಂಪೇಗೌಡ' ಚಿತ್ರಗಳಿಗೆ ಕ್ಯಾಮರಾಮೆನ್ ಆಗಿದ್ದ ಕೃಷ್ಣ ಈಗ 'ಹೆಬ್ಬುಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


English summary
Kannada Actor Kiccha Sudeep starrer Kannada Movie 'Hebbuli' story is revealed. Read the article to know 'Hebbuli' movie story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada