ಶ್ರೀರೆಡ್ಡಿ-ಅಭಿರಾಮ್ ವಿವಾದ: 5 ಕೋಟಿ ಡೀಲ್ ಬಿಚ್ಚಿಟ್ಟ ವರ್ಮಾ
ತೆಲುಗು ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್' ವಿರುದ್ಧ ಸಂಚಲನ ಸೃಷ್ಟಿಟಿಸುತ್ತಿರುವ ನಟಿ ಶ್ರೀರೆಡ್ಡಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಪವನ್ ಕಲ್ಯಾಣ್ ಬಗ್ಗೆ ಶ್ರೀರೆಡ್ಡಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದರು. ಅದಾದ ಬಳಿಕ ಶ್ರೀರೆಡ್ಡಿ ವಿರುದ್ಧ ಪವನ್ ಕಲ್ಯಾಣ್ ಫ್ಯಾನ್ಸ್ ಆಕ್ರೋಶಗೊಂಡಿದ್ದರು.
ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ನಿರ್ದೇಶಕ ಆರ್.ಜಿ.ವಿ ಮತ್ತೊಂದು ಸ್ಫೋಟಕ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ಶ್ರೀರೆಡ್ಡಿ ಮತ್ತು ಅಭಿರಾಮ್ ವಿವಾದಕ್ಕೆ ಸಂಬಂಧಪಟ್ಟಂತೆ ಸ್ವತಃ ರಾಮ್ ಗೋಪಾಲ್ ವರ್ಮಾ ಸಂಧಾನಕ್ಕೆ ಮುಂದಾಗಿದ್ದರಂತೆ. ಸುಮಾರು 5 ಕೋಟಿ ಶ್ರೀರೆಡ್ಡಿಗೆ ಬೇಡಿಕೆಯಿಟ್ಟಿದ್ದರಂತೆ.
ಈ ಹಿಂದೆ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ಜೊತೆ ಖಾಸಗಿಯಾಗಿರುವ ಫೋಟೋ ಬಹಿರಂಗಪಡಿಸಿದ್ದ ನಟಿ ಶ್ರೀರೆಡ್ಡಿ, ಅಭಿರಾಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಈ ಬೆಳವಣಿಗೆಗಳನ್ನ ಗಮನಿಸಿದ್ದ ರಾಮ್ ಗೋಪಾಲ್ ವರ್ಮಾ ಅಭಿರಾಮ್ ಅವರ ತಂದೆ ಬಳಿ ಸಂಧಾನದ ಮಾತುಕತೆ ನಡೆಸಿದ್ದಾರೆ. ''ನಿರ್ಮಾಪಕ ಸುರೇಶ್ ಬಾಬು ಅವರ ಕುಟುಂಬ ನನಗೆ ಆಪ್ತರು. ಈ ಕಡೆ ಶ್ರೀರೆಡ್ಡಿ ಮಾಡುತ್ತಿರುವ ಆರೋಪದಿಂದ ಇಡೀ ಕುಟುಂಬಕ್ಕೆ ಅಪವಾದ. ಹೀಗಾಗಿ, ಸುರೇಶ್ ಬಾಬು ಬಳಿ ನಾನು ಮಾತಾಡಿದೆ. ಅದಕ್ಕೆ ಅವರು ಹೇಳಿದ್ರು, ''ಅಭಿರಾಮ್ ತಪ್ಪು ಮಾಡಿದ್ರೆ, ಕಾನೂನಾತ್ಮಕವಾಗಿ ಶಿಕ್ಷೆಯಾಗಲಿ'' ಎಂದು ನೇರವಾಗಿ ತಿಳಿಸಿದ್ರು ಎಂದು ಆರ್.ಜಿ.ವಿ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
ಇನ್ನು ಇದೇ ವಿಷ್ಯವನ್ನ ಶ್ರೀರೆಡ್ಡಿ ಬಳಿ ಮಾತನಾಡಿದಾಗ ''ನೋಡು ಅವರ ಕುಟುಂಬದ ಮೇಲೆ ಇದು ಕಪ್ಪು ಚುಕ್ಕೆಯಾಗಿದೆ. ಇದನ್ನ ಇಲ್ಲಿಗೆ ನಿಲ್ಲಿಸು, ನಿನಗೆ ಬೇಕಾದರೇ ನಾಲ್ಕರಿಂದ ಐದು ಕೋಟಿ ಹಣ ಕೊಡಿಸುತ್ತೇನೆ. ಇಷ್ಟು ದೊಡ್ಡ ಮೊತ್ತ ನಿನಗೆ ಸಹಾಯವಾಗಬಹುದು. ಅಷ್ಟೇ ಅಲ್ಲದೇ, ನಿನಗೆ ಇಂಡಸ್ಟ್ರಿಯಲ್ಲಿ ಕೂಡ ಅವರು ಸಹಾಯ ಮಾಡ್ತಾರೆ'' ಎಂದು ಕೇಳಿದೆ.

ಅದಕ್ಕೆ ಶ್ರೀರೆಡ್ಡಿ ರಿಜೆಕ್ಟ್ ಮಾಡಿ ಹೋದಳು ಎಂದು ರಾಮ್ ಗೋಪಾಲ್ ವರ್ಮಾ ಅಸಲಿ ವಿಷ್ಯವನ್ನ ಬಿಚ್ಚಿಟ್ಟಿದ್ದಾರೆ. ಒಟ್ನಲ್ಲಿ, ಶ್ರೀರೆಡ್ಡಿಯ ಕಾಸ್ಟಿಂಗ್ ಕೌಚ್ ಹೋರಾಟ ಟಾಲಿವುಡ್ ನಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಅಂದ್ರೆ ತಪ್ಪಾಗಲಾರದು.


Click it and Unblock the Notifications











