For Quick Alerts
  ALLOW NOTIFICATIONS  
  For Daily Alerts

  ಆರ್ ಜಿವಿ ಚಿತ್ರದ ಶೃಂಗಾರ 'ಶ್ರೀದೇವಿ' ಅನಾವರಣ

  By ಅನಂತರಾಮು, ಹೈದರಾಬಾದ್
  |

  ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರ ಹೊಸ ಚಿತ್ರ ಈಗ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರದ ಪೋಸ್ಟರ್ ನಲ್ಲಿ ನಾಯಕಿಯ ನಾನಾ ಭಾಗಗಳನ್ನು ತೋರಿಸಿದ್ದ ವರ್ಮಾ ಇದೀಗ ಅಡಿಯಿಂದ ಮುಡಿಯವರೆಗೂ ನಾಯಕಿಯನ್ನು ಅನಾವರಣಗೊಳಿಸಿದ್ದಾರೆ.

  ಮೊದಲು 'ಸಾವಿತ್ರಿ' ಎಂದು ಶೀರ್ಷಿಕೆ ಇಟ್ಟ ವರ್ಮಾ ಬಳಿಕ ತಮ್ಮ ಚಿತ್ರಕ್ಕೆ 'ಶ್ರೀದೇವಿ' ಎಂದು ಬದಲಾಯಿಸಿದರು. ಈ ಚಿತ್ರದ ನಾಯಕಿ ಯಾರು ಎಂದು ಎಲ್ಲರೂ ತಲೆಕೆಡಿಸಿಕೊಂಡರು. ಇದೀಗ ಚಿತ್ರದ ಸ್ಟಿಲ್ಸ್ ಬಿಡುಗಡೆ ಮಾಡಿದ್ದು 'ಶ್ರೀದೇವಿ'ಯ ಮುಖ ಬಹಿರಂಗ ಮಾಡಿದ್ದಾರೆ.

  ಈಕೆಯ ಹೆಸರು ಅನುಕೃತಿ ಶರ್ಮಾ. ಚಿತ್ರದ ಸ್ಟಿಲ್ಸ್ ನೋಡುತ್ತಿದ್ದರೆ ವರ್ಮಾ ಇನ್ನೇನು ವಿವಾದ ಮಾಡಲಿದ್ದಾರೋ, ಇನ್ನೇನು ತೋರಿಸುತ್ತಿದ್ದಾರೋ, ಇಷ್ಟಕ್ಕೂ ಕಥೆ ಏನಿರಬಹುದು ಎಂಬ ಸಂದೇಹಗಳು ಎಲ್ಲರನ್ನೂ ನಖಶಿಖಾಂತ ಕಾಡುತ್ತಿವೆ.

  ಅನುಕೃತಿ ಅವರದು ಟೀಚರ್ ಪಾತ್ರವಲ್ಲ

  ಅನುಕೃತಿ ಅವರದು ಟೀಚರ್ ಪಾತ್ರವಲ್ಲ

  ಈ ಚಿತ್ರದಲ್ಲಿ ಅನುಕೃತಿ ಪೋಷಿಸುತ್ತಿರುವುದು ಟೀಚರ್ ಪಾತ್ರವಲ್ಲ, ಹಾಗೆಯೇ ಸಿನಿಮಾ ತಾರೆ ಪಾತ್ರವೂ ಅಲ್ಲ. ಮಧ್ಯಮ ವರ್ಗದ ಗೃಹಿಣಿ ಪಾತ್ರದಲ್ಲಿ ಅವರು ಕಾಣಿಸಲಿದ್ದಾರೆ ಎಂದಿದ್ದಾರೆ ವರ್ಮಾ.

  ಹುಡುಗನೊಬ್ಬನ ಸುತ್ತ ನಡೆಯುವ ಕಥೆ

  ಹುಡುಗನೊಬ್ಬನ ಸುತ್ತ ನಡೆಯುವ ಕಥೆ

  ಹುಡುಗನೊಬ್ಬ ತನ್ನ ಸುತ್ತಲಿನ ಆಧುನಿಕ ಜೀವನಶೈಲಿಯ ಕಾರಣ ಹೇಗೆ ಪ್ರಭಾವಿತನಾಗುತ್ತಾನೆ? ಅದರಿಂದ ಆ ಹುಡುಗನಿಗೆ, ಆತನ ಸುತ್ತ ಇರುವವರಿಗೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದು ಚಿತ್ರದ ಕಥಾಹಂದರ ಎಂಬುದು ವರ್ಮಾ ವಿವರಣೆ.

  ವಿವಾದ ಸೃಷ್ಟಿಸುವವರ ವಿರುದ್ಧ ವರ್ಮಾ ಗರಂ

  ವಿವಾದ ಸೃಷ್ಟಿಸುವವರ ವಿರುದ್ಧ ವರ್ಮಾ ಗರಂ

  ಇದು ಗೊತ್ತಿಲ್ಲದೆ ಕೆಲವರು ಇಲ್ಲಸಲ್ಲದ ವಿವಾದ ಸೃಷ್ಟಿಸುತ್ತಿದ್ದಾರೆ. ಬೇಜವಾಬ್ದಾಯುತವಾಗಿ ಮಾತನಾಡುತ್ತಾ ಸಿನಿಮಾಸಲ್ಲಿ ಇಲ್ಲದ ಅಂಶಗಳನ್ನೂ ಅವರ ಮನಸ್ಸಿಗೆ ತೋಚಿದಂತೆ ಹೇಳುತ್ತಿದ್ದಾರೆ ಎಂದು ವರ್ಮಾ ಅವರು ಗರಂ ಆಗಿ ಮಾತನಾಡಿದ್ದಾರೆ.

  ಹುಡುಗರ ಪೋಷಕರ ಅನುಮತಿ ಪಡೆದಿದ್ದೇನೆ

  ಹುಡುಗರ ಪೋಷಕರ ಅನುಮತಿ ಪಡೆದಿದ್ದೇನೆ

  ಚಿತ್ರದ ಪೋಸ್ಟರ್ ನಲ್ಲಿರುವ ಹುಡುಗ ಒಬ್ಬ ಕಲಾವಿದ. ಈ ಮುಂಚೆಯೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾನೆ. ಅವರ ಪೋಷಕರ ಅನುಮತಿ ಪಡೆದಿದ್ದೇನೆ. ನನ್ನ ಸಮಕ್ಷಮದಲ್ಲೇ ಆತ ನಟಿಸುತ್ತಿದ್ದಾನೆ ಎನ್ನುತ್ತಾರೆ ವರ್ಮಾ.

  ನೆಗಟೀವ್ ಪಬ್ಲಿಸಿಟಿ ಕೊಡುವವರ ವಿರುದ್ಧ ಕೇಸ್

  ನೆಗಟೀವ್ ಪಬ್ಲಿಸಿಟಿ ಕೊಡುವವರ ವಿರುದ್ಧ ಕೇಸ್

  ಕಥೆ ಗೊತ್ತಿಲ್ಲದೆ ತಮ್ಮ ಮನಸ್ಸಿಗೆ ತೋಚಿದಂತೆ ಹೇಳುವುದು ಸರಿಯಲ್ಲ. ನನ್ನ ಸಿನಿಮಾ ಬಗ್ಗೆ ನೆಗಟೀವ್ ಪಬ್ಲಿಸಿಟಿ ಕೊಡುತ್ತಿರುವವರ ವಿರುದ್ಧ ಕೇಸು ದಾಖಲಿಸುತ್ತೇನೆ ಎಂದೂ ವರ್ಮಾ ಹೇಳಿದ್ದು,

  ಆಂಧ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು

  ಆಂಧ್ರದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು

  ಶಾಲಾ ಬಾಲಕನೊಬ್ಬ ತನ್ನ ಟೀಚರನ್ನು ತದೇಕ ಚಿತ್ತದಿಂದ ಕಾಮದ ದೃಷ್ಟಿಯಲ್ಲಿ ನೋಡುತ್ತಿರುವಂತೆ. ವಿದ್ಯಾರ್ಥಿಯನ್ನು ಟೀಚರ್ ಸಹ ಉತ್ತೇಜಿಸುತ್ತಿರುವಂತೆ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿತ್ತು. ಇದು ಬಿಡುಗಡೆಯಾಗಿದ್ದೇ ತಡ. ಆಂಧ್ರದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು.

  ಚಿತ್ರದ ವಿರುದ್ಧ ಸುಮೋಟೋ ಪ್ರಕರಣ

  ಚಿತ್ರದ ವಿರುದ್ಧ ಸುಮೋಟೋ ಪ್ರಕರಣ

  ಪೋಷಕರು, ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದವು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಏಕಾಏಕಿ ಸುಮೋಟೋ ಪ್ರಕರಣ ದಾಖಲಿಸಿದೆ. ಮೊದಲು 'ಸಾವಿತ್ರಿ' ಎಂದಿದ್ದ ಶೀರ್ಷಿಕೆಯನ್ನು ಇದೀಗ 'ಶ್ರೀದೇವಿ' ಎಂದು ಬದಲಾಯಿಸಿದ್ದಾರೆ ವರ್ಮಾ ಸಾಹೇಬರು.

  ಹದಿಹರೆಯದ ಅನುಭವಗಳ ಸಾರ

  ಹದಿಹರೆಯದ ಅನುಭವಗಳ ಸಾರ

  ಈ ಚಿತ್ರದ ಬಗ್ಗೆ ವರ್ಮಾ ಹೇಳಿರುವುದೇನೆಂದರೆ, ಹದಿಹರೆಯದ ವಯಸ್ಸಿನಲ್ಲಿ ತಮಗೆ ಎದುರಾದ ಅನುಭವಗಳ ಆಧಾರದ ಮೇಲೆ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ ಎಂದಿದ್ದಾರೆ. ಈ ಚಿತ್ರದ ಟೈಟಲ್ ಬಿಡುಗಡೆಯಾದಂದಿನಿಂದ ವಿವಾದಗಳು ಸುತ್ತಿಕೊಂಡಿವೆ. ಇದೀಗ ಮತ್ತೊಂದಿಷ್ಟು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ವಿವಾದಕ್ಕೆ ತುಪ್ಪ ಸುರಿದಿದ್ದಾರೆ.

  ಎಲ್ಲರ ಜೀವನಾ ಶ್ರೀದೇವಿ ಕಥೆ

  ಎಲ್ಲರ ಜೀವನಾ ಶ್ರೀದೇವಿ ಕಥೆ

  ಈ ಚಿತ್ರದ ಬಗ್ಗೆ ಮಾತನಾಡುತ್ತಾ, "ನನಗೆ ಸರಸ್ವತಿ ಟೀಚರ್ ಇದ್ದಂತೆ ನಿಮ್ಮ ನಿಮ್ಮ ಜೀವನದಲ್ಲಿ...ನಿಮ್ಮ ಟೀಚರ್ ಗಳೋ, ಪಕ್ಕದ ಅಥವಾ ಎದುರು ಮನೆ ಆಂಟಿಯೋ, ನಿಮ್ಮಕ್ಕನ ಫ್ರೆಂಡ್ಸ್, ನಿಮ್ಮ ಟ್ಯೂಷನ್ ಟೀಚರ್ಸ್...ಹೀಗೆ ನಾನಾ 'ಸಾವಿತ್ರಿ'ಗಳು ಇದ್ದೇ ಇರುತ್ತಾರೆ. ಅದೇ ರೀತಿ ನಿಮ್ಮೆಲ್ಲರ ಜೀವನದಲ್ಲಿ ಬಂದಂತಹ ಸಾವಿತ್ರಿಯರೆಲ್ಲರ ಸ್ಫೂರ್ತಿಯಿಂದ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ" ಎಂದಿದ್ದರು.

  English summary
  In an apparent bid to capture eyeballs for Ram Gopal Varma latest Telugu flick ‘Sridevi’, the film maker released posters revealing the first look of the film, which raised hackles of women in general, women organisations and social and civil rights’ activists alike.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X