'ನಗ್ನಂ' ಧಮಾಕಾ: ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ ರಾಮ್‌ಗೋಪಾಲ್ ವರ್ಮಾ
ಕೊರೊನಾ ಸಂಕಷ್ಟದಿಂದಾಗಿ ಚಿತ್ರಮಂದಿರಗಳೆಲ್ಲವೂ ಬಂದ್ ಆಗಿವೆ. ನಿರ್ಮಾಪಕರು ಸಿನಿಮಾ ಮೇಲೆ ಹೂಡಿದ ಹಣ ವಾಪಸ್ ಬರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಆದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಲಾಕ್‌ಡೌನ್ ಸಮಯದಲ್ಲೂ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ.
Recommended Video
ಹೌದು, ಲಾಕ್‌ಡೌನ್ ಸಮಯದಲ್ಲಿಯೂ ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಂದ ಕೋಟಿಗಟ್ಟಲೆ ಹಣ ಗಳಿಸುತ್ತಿದ್ದಾರೆ.
ಮಿಯಾ ಮಾಲ್ಕೊವಾ ಎಂಬ ಪಾರ್ನ್ ಸ್ಟಾರ್ ಅಭಿನಯದ ಕ್ಲೈಮ್ಯಾಕ್ಸ್ ಎಂಬ ಸಿನಿಮಾ ನಿರ್ದೇಶಿಸಿ ಆನ್‌ಲೈನ್ ಅಲ್ಲಿ ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಸಾಕಷ್ಟು ಹಣ ಗಳಿಸಿದ್ದರು. ಈಗ 'ನಗ್ನಂ' ಎಂಬ ಸಿನಿಮಾ ಬಿಡುಗಡೆ ಮಾಡಿದ್ದು ಲಕ್ಷಾಂತರ ಹಣ ಗಳಿಸಿದ್ದಾರೆ.

200 ರುಪಾಯಿ ನಿಗದಿ ಪಡಿಸಿದ್ದ ವರ್ಮಾ
'ನಗ್ನಂ' ಸಿನಿಮಾವನ್ನು ತಮ್ಮದೇ ಆಪ್ ಹಾಗೂ ವೆಬ್‌ಸೈಟ್‌ನಲ್ಲಿ ರಾಮ್ ಗೋಪಾಲ್ ವರ್ಮಾ ಜೂನ್ 27 ಕ್ಕೆ ಬಿಡುಗಡೆ ಮಾಡಿದ್ದರು. ಆ ಸಿನಿಮಾವನ್ನು ನೋಡಲು ವೀಕ್ಷಕರು 200 ರೂಪಾಯಿ ಪಾವತಿಸುವಂತೆ ವ್ಯವಸ್ಥೆ ಮಾಡಿದ್ದರು ರಾಮ್ ಗೋಪಾಲ್ ವರ್ಮಾ.

ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ ವರ್ಮಾ
'ನಗ್ನಂ' ಸಿನಿಮಾ ಆನ್‌ಲೈನ್ ನಲ್ಲಿ ಬಿಡುಗಡೆಯಾದ ಅರ್ಧ ಗಂಟೆಯಲ್ಲಿ 23,560 ಮಂದಿ 'ನಗ್ನಂ' ಸಿನಿಮಾ ನೋಡಲು ಹಣ ಪಾವತಿಸಿದರಂತೆ. ಅಲ್ಲಿಗೆ ಕೇವಲ ಅರ್ಧ ಗಂಟೆಯಲ್ಲಿ 47,12,000 ಹಣ ಗಳಿಸಿದ್ದಾರೆ ರಾಮ್ ಗೋಪಾಲ್ ವರ್ಮಾ. ಈ ಬಗ್ಗೆ ಅವರೇ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

20 ಗಂಟೆಯಲ್ಲಿ 70.89 ಲಕ್ಷ
ಕತೆ ಇಷ್ಟಕ್ಕೇ ನಿಂತಿಲ್ಲ. ಸಿನಿಮಾ ಬಿಡುಗಡೆ ಆದ 20 ಗಂಟೆಯಲ್ಲಿ 35,445 ಮಂದಿ ಸಿನಿಮಾವನ್ನು ಹಣ ಕೊಟ್ಟು ನೋಡಿದ್ದಾರಂತೆ. ಅಂದರೆ 20 ಗಂಟೆಯಲ್ಲಿ ರಾಮ್ ಗೋಪಾಲ್ ವರ್ಮಾ ಜೇಬಿಗೆ ಹೋಗಿದ್ದು ಬರೋಬ್ಬರಿ 70.89 ಲಕ್ಷ.

ಒಂದೇ ಮನೆಯಲ್ಲಿ ಚಿತ್ರೀಕರಣ
'ನಗ್ನಂ' ಸಿನಿಮಾದ ಬಹುಪಾಲು ಚಿತ್ರೀಕರಣ ಕೇವಲ ಒಂದು ಮನೆಯಲ್ಲಿ ನಡೆದಿದೆ. ನಾಯಕಿ ಶ್ರೀ ರಪಕಾ ಗ್ಲಾಮರ್ ಗೆ ಬಹುವಾಗಿ ಒತ್ತು ಕೊಡಲಾಗಿದೆ. ಸಿನಿಮಾ ನೋಡಿದವರು ಸಿನಿಮಾ ಚೆನ್ನಾಗಿಲ್ಲವೆಂಬ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

'ಕ್ಲೈಮ್ಯಾಕ್ಸ್' ಸಿನಿಮಾದಿಂದ 1 ಕೋಟಿಗೂ ಹೆಚ್ಚಾ ಲಾಭ
ಕಳೆದ ತಿಂಗಳ ಅಂತ್ಯದಲ್ಲಿ ಬಿಡುಗಡೆ ಆಗಿದ್ದ ರಾಮ್ ಗೋಪಾಲ್ ವರ್ಮಾ ನಿರ್ದೇಶನ, ನಿರ್ಮಾಣದ 'ಕ್ಲೈಮ್ಯಾಕ್ಸ್' ಸಿನಿಮಾ ವನ್ನು ಕೇವಲ 24 ಗಂಟೆಗಳಲ್ಲಿ 1.68 ಕೋಟಿ ರೂಪಾಯಿ ಹಣ ಗಳಿಸಿದ್ದರು. ಈ ಸಿನಿಮಾ ನೋಡಲು ವರ್ಮಾ ನಿಗದಿಪಡಿಸಿದ್ದ ಹಣ 100 ರುಪಾಯಿ.


Click it and Unblock the Notifications











