»   » ಶಕೀಲಾ ಬಯೋಪಿಕ್ ನಲ್ಲಿ ನಟಿಸಲು ಒಪ್ಪಿಕೊಂಡ 'ಸ್ಟಾರ್' ನಟಿ.!

ಶಕೀಲಾ ಬಯೋಪಿಕ್ ನಲ್ಲಿ ನಟಿಸಲು ಒಪ್ಪಿಕೊಂಡ 'ಸ್ಟಾರ್' ನಟಿ.!

Posted By:
Subscribe to Filmibeat Kannada
ಬೆಳ್ಳಿ ತೆರೆ ಮೇಲೆ ಹಾಟ್ ಶಕೀಲಾ ಮತ್ತೆ ಬರ್ತಿದ್ದಾಳೆ | Oneindia Kannada

ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಜೀವನ ಕಥೆ ತೆರೆಮೇಲೆ ಬರುತ್ತೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಒಂದು ವೇಳೆ ಸಿನಿಮಾ ಸೆಟ್ಟೇರಿದ್ರು ಶಕೀಲಾ ಪಾತ್ರದಲ್ಲಿ ಯಾವ ನಟಿ ಅಭಿನಯಿಸಬಹುದು ಎಂಬ ಕುತೂಹಲ ಸಿನಿ ಅಭಿಮಾನಿಗಳನ್ನ ಕಾಡುತ್ತಿತ್ತು. ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

16ನೇ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶ ಮಾಡಿದ್ದ ಶಕೀಲಾ, ನೀಲಿ ಸಿನಿಮಾಗಳಿಂದಲೇ ಹೆಚ್ಚು ಖ್ಯಾತಿಗಳಿಸಿಕೊಂಡಿದ್ದರು. ಹೀಗಾಗಿ, ಈ ಪಾತ್ರಕ್ಕೆ ಯಾರೂ ಒಪ್ಪುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಇದೀಗ, ಶಕೀಲಾ ಪಾತ್ರವನ್ನ ಬೆಳ್ಳಿತೆರೆ ಮೇಲೆ ಮಾಡಲು ಸ್ಟಾರ್ ನಟಿಯೊಬ್ಬಳು ಒಪ್ಪಿಕೊಂಡಿದ್ದಾರೆ. ಬಹುಭಾಷೆಯಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಕನ್ನಡದ ಸ್ಟಾರ್ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗಿದ್ರೆ, ಯಾರದು.? ಮುಂದೆ ಓದಿ....

ಶಕೀಲಾ ಆಗ್ತಾರೆ ರಿಚಾ ಚಡ್ಡಾ.!

ಬಾಲಿವುಡ್ ನಟ ಖ್ಯಾತಿ ರಿಚಾ ಚಡ್ಡಾ, ಶಕೀಲಾ ಬಯೋಪಿಕ್ ನಲ್ಲಿ ನಟಿಸಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಶಕೀಲಾ ಜೀವನ ಚರಿತ್ರೆಯಲ್ಲಿ ಸ್ಟಾರ್ ನಟಿಯೊಬ್ಬರು ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ರಿಚಾ ಒಪ್ಪಿದ್ದಾರಂತೆ.

ಏಪ್ರಿಲ್ ತಿಂಗಳಲ್ಲಿ ಆರಂಭ

ದಕ್ಷಿಣ ಭಾರತದ ಖ್ಯಾತ ನಟಿಯ ಬಯೋಪಿಕ್ ಇದೇ ಏಪ್ರಿಲ್ ತಿಂಗಳಲ್ಲಿ ಸೆಟ್ಟೇರಲಿದೆ. ಈಗಾಗಲೇ ಸ್ಕ್ರಿಪ್ಟ್ ಮುಗಿಸಿರುವ ಚಿತ್ರತಂಡ ಶೂಟಿಂಗ್ ಆರಂಭಿಸಲಿದೆಯಂತೆ. 2019ರ ಆರಂಭದಲ್ಲೇ ತೆರೆಗೆ ಬರಲಿದೆ.

ಕನ್ನಡದ ಸ್ಟಾರ್ ಡೈರೆಕ್ಟರ್

ಶಕೀಲಾ ಜೀವನ ಕಥೆಯನ್ನ ಕನ್ನಡದ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಲಿದ್ದಾರೆ. ಹಿಂದಿ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲೂ ಈ ಸಿನಿಮಾ ತಯಾರಾಗುತ್ತಿದೆ.

ಇದೊಂದು ವಿಶೇಷ ಸ್ಕ್ರಿಪ್ಟ್

ಶಕೀಲಾಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ಚೀನಾ ಸೇರಿದಂತೆ ಏಷ್ಯಾದಲ್ಲಿ ಹೆಚ್ಚು ಅಭಿಮಾನಿಗಳು ಇದ್ದಾರೆ. ಇದೊಂದು ವಿಶೇಷ ಸ್ಕ್ರಿಪ್ಟ್ ಆಗಿದ್ದು, ಎಲ್ಲರನ್ನ ಗಮನ ಸೆಳೆಯಲಿದೆ'' ಎಂದು ರಿಚಾ ಚಡ್ಡಾ ಅವರ ವಕ್ತಾರರು ತಿಳಿಸಿದ್ದಾರೆ.

ರಿಚಾ ಚಡ್ಡಾ ಬಗ್ಗೆ..

2008 ರಲ್ಲಿ 'ಓಯ್ ಲಕ್ಕಿ, ಲಕ್ಕಿ ಓಯ್' ಚಿತ್ರದ ಮೂಲಕ ಬಾಲಿವುಡ್ ಇಂಡಸ್ಟ್ರಿ ಪ್ರವೇಶ ಮಾಡಿದ ರಿಚಾ ಚಡ್ಡಾ, 'ತಮಾಂಚೆ', 'ಶಾರ್ಟ್ಸ್', 'ಮಾಸನ್', 'ಮೇನ್ ಔರ್ ಚಾರ್ಲ್ಸ್', 'ಸರ್ಬಿಜಿತ್', ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

English summary
Richa Chadha is all set to star in the biopic of Shakeela, one of the biggest actresses from Kerala in the '90s, who acted in several Tamil, Telugu, Malayalam and Kannada-language films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada