For Quick Alerts
  ALLOW NOTIFICATIONS  
  For Daily Alerts

  ಉದಯವಾಯಿತು ಚೆಲುವ ಕನ್ನಡನಾಡು!

  By Staff
  |

  ಬಿಗಿಯಾದ ಚಿತ್ರಕಥೆಯನ್ನು ಹೊಸೆಯುವುದರಲ್ಲಿ ಹಾಗೂ ಚುರುಕು ಸಂಭಾಷಣೆಯನ್ನು ಹೊಸೆಯುವುದರಲ್ಲಿ ಎತ್ತಿದ ಕೈ ಎಂದು ಹೆಸರಾದ ರಿಚರ್ಡ್‌ ಲೂಯಿಸ್‌ ಈಗ ಗೀತ ರಚನೆಗೂ ಕೈ ಹಾಕಿದ್ದಾರೆ. ‘ಅಮ್ಮ’ ಸಿನಿಮಾಕ್ಕಾಗಿ ಎರಡು ಹಾಡು ಬರೆಯುವ ಅವಕಾಶವನ್ನು ಲೂಯಿಸ್‌ಗೆ ನಿರ್ದೇಶಕ ಡಿರಾ ಬಾಬು ಕಲ್ಪಿಸಿದ್ದಾರೆ.

  ಅಮ್ಮ ಸಿನಿಮಾಗಾಗಿ ಲೂಯಿಸ್‌ ಬರೆದಿರುವ ಹಾಡೊಂದು ಅರ್ಥಪೂರ್ಣವಾಗಿದೆ. ಸಂಭಾಷಣೆ ಬರೆಯುವಲ್ಲಿ ವ್ಯಂಗ್ಯತೆಯನ್ನು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುವ ಅಪರೂಪದ ಸಂಭಾಷಣಾಕಾರರಲ್ಲಿ ಒಬ್ಬರಾದ ಲೂಯಿಸ್‌, ಗೀತರಚನೆಯಲ್ಲೂ ತಮ್ಮ ಕುಟುಕು ಪ್ರಜ್ಞೆ ಉಳಿಸಿಕೊಂಡಿದ್ದಾರೆ. ಕನ್ನಡ ‘ನೆಲ- ನಾಡಿಗ’ರ ಪ್ರಸಕ್ತ ಸ್ಥಿತಿಯನ್ನು ಕಟು ವ್ಯಂಗ್ಯತೆಯಿಂದ ಲೂಯಿಸ್‌ ಗೀತೆಯಾಗಿಸಿದ್ದಾರೆ.
  ಲೂಯಿಸ್‌ ಗೀತೆ ನಿಮ್ಮ ಗಮನಕ್ಕೆ -

  ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು
  ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು
  ಕೋಲಾರ ಚೆನ್ನೈಗೆ.. ರಾಯಚೂರು ಆಂಧ್ರಕ್ಕೆ
  ಅಲ್ಲಿಗೆ....
  ಉದಯವಾಯಿತು ನಮ್ಮ ಚೆಲುವ ಕನ್ನಡನಾಡು

  ಉದಯ ಟಿವಿ ಮದ್ರಾಸ್‌ನವರದ್ದು
  ಈಟಿವಿ ಆಂಧ್ರದವರದ್ದು
  ಸುಪ್ರಭಾತ ಮುಂಬೈ.. ಕಾವೇರಿ ಕೇರಳ
  ಅಲ್ಲಿಗೆ....
  ಉದಯವಾಯಿತು ನಮ್ಮ ಚೆಲುವ ಕನ್ನಡನಾಡು

  ಐಎಎಸ್‌ ಆಫೀಸರ್‌ಗಳೆಲ್ಲಾ ಬಂಗಾಳದವರು
  ಐಪಿಎಸ್‌ ಆಫೀಸರ್‌ಗಳೆಲ್ಲ ದಿಲ್ಲಿಯವರು
  ಡ್ರೆೃವರ್‌ಗಳು, ಅಟೆಂಡರ್‌ಗಳು, ಸ್ವೀಪರ್‌ಗಳೆಲ್ಲ ಕನ್ನಡದವರು
  ಅಲ್ಲಿಗೆ....
  ಉದಯವಾಯಿತು ನಮ್ಮ ಚೆಲುವ ಕನ್ನಡನಾಡು

  ಸದಾಶಿವನಗರ ಸಿಂಧಿಗಳದ್ದು,
  ಬಳೇಪೇಟೆ, ಚಿಕ್ಕಪೇಟೆ ಮಾರ್ವಾಡಿಗಳದ್ದು,
  ಮಾವಳ್ಳಿ, ಗುಟ್ಟಹಳ್ಳಿ, ಸುಂಕನಹಳ್ಳಿಗಳೆಲ್ಲಾ ಕನ್ನಡಿಗರದ್ದು
  ಅಲ್ಲಿಗೆ....
  ಉದಯವಾಯಿತು ನಮ್ಮ ಚೆಲುವ ಕನ್ನಡನಾಡು

  ಹಿರೋಯಿನ್‌ಗಳು ಮುಂಬೈನವರು
  ಡೈರೆಕ್ಟರ್‌ಗಳು ಆಂಧ್ರದವರು
  ಲೈಟ್‌ಬಾಯ್ಸ್‌, ಪ್ರೊಡೆಕ್ಷನ್‌ ಬಾಯ್ಸ್‌, ಸೆಟ್‌ ಬಾಯ್ಸ್‌ಗಳೆಲ್ಲಾ
  ಕನ್ನಡದವರು
  ಅಲ್ಲಿಗೆ....
  ಉದಯವಾಯಿತು ನಮ್ಮ ಚೆಲುವ ಕನ್ನಡನಾಡು

  ಈ ಗೀತೆಯನ್ನು ಸ್ವತಃ ಲೂಯಿಸ್‌ ಅವರೇ ಹಾಡಿದ್ದಾರಂತೆ. ಇಂಥ ಗೀತೆಗಳನ್ನು ಲೂಯಿಸ್‌ ಹೆಚ್ಚು ಬರೆಯಲಿ. ಹೊಸ ಲೇಖನಿಯಾಂದನ್ನು ಪರಿಚಯಿಸಿದ್ದಕ್ಕಾಗಿ ರಿಮೇಕ್‌ ಪ್ರಿಯ ಡಿರಾ ಬಾಬುಗೆ ಧನ್ಯವಾದ ಹೇಳೋಣ. ಅಂದಹಾಗೆ, ಬದುಕಿದ್ದರೆ ಈ ಗೀತೆಯ ಬಗ್ಗೆ ಹುಯಿಲಗೋಳ ನಾರಾಯಣರಾಯರ ಪ್ರತಿಕ್ರಿಯೆ ಏನಿದ್ದೀತು???

  What do you think about this article ?

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X