ಟೈಟಲ್ ವಿವಾದ: 'ರಕ್ಷಿತ್ ಶೆಟ್ಟಿ ಬಳಸಿರುವ ಸಿನಿಮಾ ಶೀರ್ಷಿಕೆ ನಮ್ಮದು'

ಟೈಟಲ್ ವಿವಾದಗಳು ಕನ್ನಡ ಇಂಡಸ್ಟ್ರಿಯಲ್ಲಿ ಹೊಸದೇನಲ್ಲ. ಆಗಾಗ ಟೈಟಲ್ ಸುತ್ತ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿರುತ್ತವೆ. ಇದೀಗ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಚಿತ್ರಕ್ಕೆ ಟೈಟಲ್ ವಿವಾದ ಅಂಟಿಕೊಂಡಿದೆ.

ರಕ್ಷಿತ್ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾ 'ರಿಚ್ಚಿ' ಟೈಟಲ್ ನಮ್ಮದು ಎಂದು ನಿರ್ದೇಶಕ ಹೇಮಂತ್ ಎನ್ನುವವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. 'ರಿಚ್ಚಿ' ಹೆಸರಿನಲ್ಲಿ ನಮ್ಮ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಇಂತಹ ಸಮಯದಲ್ಲಿ ರಕ್ಷಿತ್ ಶೆಟ್ಟಿ ಚಿತ್ರಕ್ಕೆ ರಿಚ್ಚಿ ಎಂದು ಹೆಸರಿಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಏನಿದು ರಿಚ್ಚಿ ವಿವಾದ? ಮುಂದೆ ಓದಿ...

ಎರಡು ವರ್ಷದ ಹಿಂದೆಯೇ ಶುರುವಾಗಿದೆ 'ರಿಚ್ಚಿ'

ಎರಡು ವರ್ಷದ ಹಿಂದೆಯೇ ಶುರುವಾಗಿದೆ 'ರಿಚ್ಚಿ'

ನಿರ್ದೇಶಕ ಹೇಮಂತ್ ಎಂಬುವವರು ಎರಡು ವರ್ಷದ ಹಿಂದೆಯೇ ರಿಚ್ಚಿ ಎಂಬ ಹೆಸರಿನಲ್ಲಿ ಸಿನಿಮಾ ಆರಂಭಿಸಿದ್ದಾರೆ. ಶೇಕಡಾ 70 ರಷ್ಟು ಚಿತ್ರೀಕರಣ ಸಹ ಮುಗಿದಿದೆ. ರಿಚ್ಚಿ ಶೀರ್ಷಿಕೆಯನ್ನು ರಿನಿವಲ್ ಸಹ ಮಾಡಲಾಗಿದೆ ಎಂದು ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದಾರೆ.

ದೂರು ನೀಡಿದರೂ ಪ್ರಯೋಜನ ಆಗ್ತಿಲ್ಲ

ದೂರು ನೀಡಿದರೂ ಪ್ರಯೋಜನ ಆಗ್ತಿಲ್ಲ

ರಕ್ಷಿತ್ ಶೆಟ್ಟಿ ಚಿತ್ರಕ್ಕೆ ರಿಚ್ಚಿ ಎಂಬ ಟೈಟಲ್ ಘೋಷಣೆ ಮಾಡಿದಾಗಲೇ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದೇವೆ. ಆದರೂ ಏನು ಪ್ರಯೋಜನ ಆಗಿಲ್ಲ. ರಿಚ್ಚಿ ಅಂದ್ರೆ ರಕ್ಷಿತ್ ಶೆಟ್ಟಿ ಸಿನಿಮಾ ಎಂದೆ ಜನ ತಿಳಿದುಕೊಳ್ಳುತ್ತಿದ್ದಾರೆ. ಹಾಗಾಗಿ, ವಾಣಿಜ್ಯ ಮಂಡಳಿ ರಿಚ್ಚಿ ಎಂಬ ಟೈಟಲ್ ಅವರಿಂದ ವಾಪಸ್ ಪಡೆಯಬೇಕು ಎಂದು ಅಸಹಾಯಕತೆ ತೋರಿದ್ದಾರೆ.

ಗೋವಾದಲ್ಲಿ ರಕ್ಷಿತ್ ರಿಚ್ಚಿ

ಗೋವಾದಲ್ಲಿ ರಕ್ಷಿತ್ ರಿಚ್ಚಿ

ರಕ್ಷಿತ್ ಶೆಟ್ಟಿ ನಟಿಸುತ್ತಿರುವ 'ರಿಚ್ಚಿ' ಸಿನಿಮಾದ ತಯಾರಿ ನಡೆಯುತ್ತಿದೆ. ಮಂಗಳೂರು, ಉಡುಪಿಯಲ್ಲಿ ಚಿತ್ರದ ಬಹುತೇಕ ಭಾಗ ಚಿತ್ರೀಕರಣವಾಗಲಿದೆಯಂತೆ. ಆದರೆ ಚಿತ್ರದ ಕೆಲವು ದೃಶ್ಯಗಳನ್ನು ಗೋವಾದಲ್ಲಿಯೂ ಸೆರೆಹಿಡಿಯಬೇಕಂತೆ. ಹೀಗಾಗಿ, ಗೋವಾಗೆ ತೆರಳಿ ಸ್ಥಳವನ್ನು ನೋಡಿ, ಕಥೆ ಬರೆಯುತ್ತಿದ್ದಾರೆ ರಕ್ಷಿತ್.

Recommended Video

Chiru ಮಗುವಿಗೆ Dhruva ಖರೀದಿ ಮಾಡಿದ ಅದ್ದೂರಿ Gift ಇದು | Filmibeat Kannada
ರಕ್ಷಿತ್ ರಿಚ್ಚಿಗೆ ನಿರ್ದೇಶಕ ಯಾರು?

ರಕ್ಷಿತ್ ರಿಚ್ಚಿಗೆ ನಿರ್ದೇಶಕ ಯಾರು?

ರಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದ ಸಿನಿಮಾ 'ಉಳಿದವರು ಕಂಡಂತೆ' ಸಿನಿಮಾದಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದ ರಾಹುಲ್, ಈಗ ರಿಚ್ಚಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ''ಚಾರ್ಲಿ-777'' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅದಾದ ಮೇಲೆ ಪುಣ್ಯಕೋಟಿ, ಸಪ್ತಸಾಗರದಾಚೆ ಹಾಗೂ ರಿಚ್ಚಿ ಚಿತ್ರಗಳ ಪೈಕಿ ಯಾವ ಸಿನಿಮಾ ಟೇಕ್ ಆನ್ ಮಾಡಲಿದ್ದಾರೆ ಎನ್ನುವುದು ಕುತೂಹಲ.

More from Filmibeat

English summary
ichie Title Issue: Director Hemanth Lodged Compliant against Rakshit Shetty in Karnataka Film Chamber.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X