»   » ತಮಿಳಿಗೆ ಜಿಗಿದ 'ರಿಂಗ್ ಮಾಸ್ಟರ್' ಅರುಣ್ ಸಾಗರ್

ತಮಿಳಿಗೆ ಜಿಗಿದ 'ರಿಂಗ್ ಮಾಸ್ಟರ್' ಅರುಣ್ ಸಾಗರ್

By: ಉದಯರವಿ
Subscribe to Filmibeat Kannada

ರಂಗಭೂಮಿ ಹಿನ್ನೆಯಿಂದ ಬಂದಂತಹ ಪ್ರತಿಭಾನ್ವಿತ ನಟ ಅರುಣ್ ಸಾಗರ್. ಅದ್ಯಾಕೋ ಏನೋ ಅವರನ್ನು ಕನ್ನಡ ಚಿತ್ರರಂಗ ಸಮರ್ಥವಾಗಿ, ಸಂಪೂರ್ಣವಾಗಿ ಬಳಸಿಕೊಳ್ಳಲಿಲ್ಲ. ಇದೀಗ ಅವರ ಅಭಿನಯದ ಕನ್ನಡ ಚಿತ್ರ 'ರಿಂಗ್ ಮಾಸ್ಟರ್' ಸೆಟ್ಟೇರಿದೆ. ಅದು ಆರಂಭವಾಗುವುದಕ್ಕೂ ಮುನ್ನ ಅವರು ತಮಿಳು ಚಿತ್ರರಂಗಕ್ಕೆ ಜಿಗಿದ್ದಾರೆ.

ಈಟಿವಿ ಕನ್ನಡದಲ್ಲಿ ಆರಂಭವಾದ 'ಬಿಗ್ ಬಾಸ್' ಸೀಸನ್ 1ರಲ್ಲಿ ಅರುಣ್ ಸಾಗರ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಕೂದಲೆಳೆ ಅಂತರದಲ್ಲಿ ಅವರಿಗೆ ಬಿಗ್ ಬಾಸ್ ಕಿರೀಟ ತಪ್ಪಿಹೋಗಿತ್ತು. ಅರುಣ್ ಸಾಗರ್ ಅವರಿಗೆ 'ಬಿಗ್ ಬಾಸ್' ಪಟ್ಟ ತಪ್ಪಿದ್ದಕ್ಕೆ ಅವರ ಅಪಾರ ಅಭಿಮಾನಿ ಬಳಗ ಅತೀವ ನಿರಾಸೆ ಪಟ್ಟಿತ್ತು. ['ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ ಪಂಚ್]

Arun Sagar

ಬಳಿಕ ಅವರು ಈಟಿವಿ ಕನ್ನಡದ ರಿಯಾಲಿಟಿ ಶೋ 'ಕಾಮಿಡಿ ಸರ್ಕಲ್'ನಲ್ಲಿ ತೊಡಗಿಕೊಂಡರು. ಇದೇ ಸಂದರ್ಭದಲ್ಲಿ ಅರುಣ್ ಸಾಗರ್ ಅವರು ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯಕ್ಕೆ 'ರಿಂಗ್ ಮಾಸ್ಟರ್' ಚಿತ್ರಕ್ಕೆ ಅವರು ಅಲ್ಪವಿರಾಮ ಕೊಟ್ಟಿದ್ದಾರೆ. ತಮಿಳಿನ 'ಚಂಡಮಾರುತಂ' ಎಂಬ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಅವರ ನಿರ್ದೇಶನದ 'ಜೋಕರ್' ಚಿತ್ರ ಬಹುಶಃ ಆಗಸ್ಟ್ ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಇನ್ನು 'ರಿಂಗ್ ಮಾಸ್ಟರ್' ಚಿತ್ರ ಯಾವಾಗ ಎಂಬ ಸದ್ಯಕ್ಕೆ ಮಾಹಿತಿ ಇಲ್ಲ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ವಿಶ್ರುತ್ ನಾಯಕ್. 'ಬಿಗ್ ಬಾಸ್'ನ ಸ್ಪರ್ಧಿಯಾಗಿದ್ದ ಅನುಶ್ರೀ ಈ ಚಿತ್ರದ ನಾಯಕಿ.

English summary
Sandalwood multifaceted actor actor Arun Sagar even before his maiden launch ‘Ring Master’ moves to Tamil film. His earlier film 'Joker' to launch in August this year.
Please Wait while comments are loading...