'ಸೈರಾಟ್' ಹುಡುಗಿ ರಿಂಕು ರಾಜ್ ಗುರು 10ನೇ ಕ್ಲಾಸ್ ರಿಸಲ್ಟ್ ಬಂದಿದೆ
'ಸೈರಾಟ್' ಸಿನಿಮಾದ ಮೂಲಕ ಇಡೀ ದೇಶದಲ್ಲಿ ದೊಡ್ಡ ಹೆಸರು ಮಾಡಿದ್ದ ರಿಂಕು ರಾಜ್ ಗುರು ಅವರ SSC (10ನೇ ತರಗತಿ) ರಿಸಲ್ಟ್ ಇಂದು (ಜೂನ್ 13) ಹೊರಬಿದ್ದಿದೆ.
ಇಂದು ಮಹಾರಾಷ್ಟ್ರ ರಾಜ್ಯದ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, 'SSC' ಪರೀಕ್ಷೆಯಲ್ಲಿ ರಿಂಕು ರಾಜ್ ಗುರು ಶೇಕಡ 66 ಅಂಕಗಳನ್ನು ಪಡೆದಿದ್ದಾರೆ. ಇತ್ತ ಸಿನಿಮಾಗಳಲ್ಲಿ ಬಿಜಿ ಇದ್ದರೂ ಸಹ, ಮನೆಯಲ್ಲಿಯೇ ಓದಿ ರಿಂಕು ಫಸ್ಟ್ ಕ್ಲಾಸ್ ಬಂದಿದ್ದಾರೆ.

'ಎಸ್.ಎಸ್.ಸಿ' ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದ ರಿಂಕು 9ನೇ ತರಗತಿಯಲ್ಲಿ 81.6 % ಮಾರ್ಕ್ ತೆಗೆದುಕೊಂಡಿದ್ದರಂತೆ. ಅಂದಹಾಗೆ, 'ಸೈರಾಟ್' ಸಿನಿಮಾದ ಯಶಸ್ಸಿನ ನಂತರ ಅದೇ ಸಿನಿಮಾ ಕನ್ನಡದಲ್ಲಿ ರೀಮೇಕ್ ಆಯ್ತು. 'ಮನಸು ಮಲ್ಲಿಗೆ' ಚಿತ್ರದ ಮೂಲಕ ರಿಂಕು ರಾಜ್ ಗುರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

English summary
'Sairat' star 'Rinku Rajguru' clears Maharashtra SSC Results with 66 percentage.


Click it and Unblock the Notifications