ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರಿಪ್ಪರ್’
'ಬಣ್ಣದ ಕೊಡೆ' ಅನ್ನುವ ಕಲಾತ್ಮಕ ಚಿತ್ರದ ನಂತರ ನಿರ್ದೇಶಕ ಕೃಷ್ಣ ಬೆಳ್ತಂಗಡಿ 'ರಿಪ್ಪರ್' ಎನ್ನುವ ಎರಡನೇ ಚಿತ್ರವನ್ನು ಆರಂಭಿಸಿದ್ದಾರೆ. ರಿಪ್ಪರ್ ಸತ್ಯ ಘಟನಾ ಆಧಾರಿತ ಚಿತ್ರವಾಗಿದ್ದು ಈಗಿನ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆ ಮಾಡಿಕೊಳ್ಳಲಾಗಿದ್ಯಂತೆ.
ಜಿ.ಕೆ ರಿಯಲ್ ಇಮೇಜಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ರಿಪ್ಪರ್ ಚಿತ್ರತಂಡ ಸದ್ದಿಲ್ಲದೆ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಫಸ್ಟ್ ಶೆಡ್ಯೂಲ್ ನಲ್ಲಿ ಹತ್ತು ದಿನಗಳ ಕಾಲ ಆಗುಂಬೆಯ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು ಹೋದ ಖಳನಾಯಕನನ್ನು ಪೊಲೀಸರು ಹುಡುಕಾಡುವುದು, ಖಳನಾಯಕನ ಪತ್ನಿಯ ರೋಷ, ನಾಯಕನಾಯಕಿಯ ಭಾವನಾತ್ಮಕ ಸನ್ನಿವೇಶಗಳ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಖಳನಾಯಕನ ದೃಶ್ಯ ಹೊರತುಪಡಸಿ, ಉಳಿದಂತೆ ಹಲವು ದೃಶ್ಯಗಳ ಚಿತ್ರೀಕರಣ ಮುಗಿದಿದೆ.

ಖಳನಾಯಕರ ಪತ್ನಿ ಪಾತ್ರದಲ್ಲಿ ಅಮುಲ್ ಗೌಡ, ಇನ್ಸ್ ಪೆಕ್ಟರ್ ಪಾತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್, ನಾಯಕ ಶ್ರೀರಾಮ್, ನಾಯಕಿ ಶ್ರೀಮಯ್ಯ ಅಭಿನಯ ಮಾಡಿದ್ದಾರೆ. ಕೃಷ್ಣ ಬೆಳ್ತಂಗಡಿ ನಿರ್ದೇಶನ ಚಿತ್ರಕ್ಕಿದ್ದು, ಅನಿಲ್ ಕುಮಾರ್ ಛಾಯಾಗ್ರಹಣ, ಹಿತನ್ ಹಾಸನ್ ಸಂಗೀತ ಚಿತ್ರಕ್ಕಿದೆ.


Click it and Unblock the Notifications











