ಅಯ್ಯೋ.. ಮತ್ತೆ ರಶ್ಮಿಕಾ ಬಗ್ಗೆ ಪ್ರಶ್ನೆ: "ತಲೆಕೆಡಿಸಿಕೊಳ್ಳಬೇಡಿ ಸಾಕಷ್ಟು ಕಲಾವಿದರನ್ನು ಲಾಂಚ್ ಮಾಡಿದ್ದೇವೆ" ಎಂದ ರಿಷಬ್

ರಶ್ಮಿಕಾಗೆ "ಕೃತಜ್ಞತೆ ಇಲ್ಲ, ಹತ್ತಿದ ಏಣಿ ಒದ್ದು ಬಿಟ್ರು, ಅವಕಾಶ ಕೊಟ್ಟ ಕನ್ನಡ ಚಿತ್ರರಂಗವನ್ನು ಮರೆತು ಬಿಟ್ರು" ಎನ್ನುವ ಆರೋಪಗಳು ಕೇಳಿ ಬರ್ತಿತ್ತು. ಇದೇ ಕಾರಣಕ್ಕೆ ಕೊಡಗಿನ ಕುವರಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಕೆಲ ದಿನಗಳ ಹಿಂದೆ ರಶ್ಮಿಕಾ ಕೈ ಸನ್ನೆ ಮಾಡಿ ಮಾತನಾಡಿದ್ದ ರೀತಿ ನೋಡಿ ರಿಷಬ್ ಕೂಡ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು.

ಹತ್ತು ಹಲವು ಕಾರಣಗಳಿಗೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಲೇ ಇದ್ದರು. ಆಕೆ ಏನೇ ಹೇಳಿಕೆ ಕೊಟ್ಟರು ಅದು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿತ್ತು. ಕಿಚ್ಚ ಸುದೀಪ್ ಕೂಡ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದಿದ್ದರು. ಇನ್ನು ರಶ್ಮಿಕಾ ಕೂಡ ಟ್ರೋಲ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. "ಪದೇ ಪದೇ ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ. ನೆಗೆಟಿವಿಟಿಗೆ ನಾನು ಪಂಜಿಂಗ್​ ಬ್ಯಾಗ್​ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ನಾನು ಹೇಳದೇ ಇರುವ ವಿಚಾರಕ್ಕೂ ಟ್ರೋಲ್ ಮಾಡುವುದು ಬೇಸರ ತಂದಿದೆ" ಎಂದು ಬರೆದುಕೊಂಡಿದ್ದರು. ಅಷ್ಟಾದರೂ ರಶ್ಮಿಕಾ ವಿರುದ್ಧ ಕೆಲವರು ಟ್ರೋಲ್ ನಿಲ್ಲಿಸಿಲ್ಲ.

ರಶ್ಮಿಕಾ ಮಂದಣ್ಣ ಕುರಿತು ಇದೀಗ ಮತ್ತೊಮ್ಮೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಪರೋಕ್ಷವಾಗಿ ಟಾಂಗ್ ಕೂಡ ಕೊಟ್ಟಿದ್ದಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ ಮಾತಿನ ದಾಟಿ ಕೂಡ ಬದಲಾಗಿದೆ.

ಇಂತವ್ರ ದೊಡ್ಡ ಲಿಸ್ಟ್ ಇದೆ

ಇಂತವ್ರ ದೊಡ್ಡ ಲಿಸ್ಟ್ ಇದೆ

ಇತ್ತೀಚೆಗೆ Mashable Indiaಗೆ ನೀಡಿರುವ ಸಂದರ್ಶನದಲ್ಲಿ ನಟ ರಿಷಬ್ ಶೆಟ್ಟಿ ಮಾಡತನಾಡಿದ್ದರು. ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಕುರಿತಾದ ಪ್ರಶ್ನೆಗೆ ರಿಷಬ್ ಶೆಟ್ಟಿ, "ಅಯ್ಯೋ ಅಂತವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಾವು ಸಾಕಷ್ಟು ಕಲಾವಿದರನ್ನು ಲಾಂಚ್ ಮಾಡಿದ್ದೇವೆ. ನಮಗೂ ಸಾಕಷ್ಟು ಜನ ನಿರ್ಮಾಪಕರು ಮತ್ತು ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಅಂತಹ ದೊಡ್ಡ ಜನರ ಲಿಸ್ಟ್ ನಮ್ಮ ಬಳಿ ಇದೆ. ಮತ್ತೇನು ಹೇಳುವುದಕ್ಕೆ ಇಲ್ಲ" ಎಂದಿದ್ದಾರೆ.

ರಿಷಬ್, ರಕ್ಷಿತ್ ಪರ ರಶ್ಮಿಕಾ ಮಾತ

ರಿಷಬ್, ರಕ್ಷಿತ್ ಪರ ರಶ್ಮಿಕಾ ಮಾತ

ರಶ್ಮಿಕಾ ಮಂದಣ್ಣ ಕೂಡ ತೆಲುಗು ಸಂದರ್ಶನವೊಂದರಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ನನಗೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಇಂಡಸ್ಟ್ರಿಗೆ ದಾರಿ ತೋರಿಸಿದ್ರು, ಅವ್ರು ಈ ಅವಕಾಶ ಕೊಟ್ರು, ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಒಳ್ಳೆಯ ಜನರ ಜೊತೆ ಕೆಲಸ ಮಾಡಿದ್ದೇನೆ" ಎಂದು ರಶ್ಮಿಕಾ ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಬಿಟ್ಟು ಹೋದ ಮೇಲೆ 'ಕಿರಿಕ್ ಪಾರ್ಟಿ' ಸಿನಿಮಾ ಹಾಗೂ ರಕ್ಷಿತ್, ರಿಷಬ್ ಬಗ್ಗೆ ಮಾತನಾಡಿದ್ದ ರೀತಿಯೇ ಬೇರೆ. ಈ ಬಾರಿ ಮಾತನಾಡಿರುವ ರೀತಿಯೇ ಬೇರೆ ತರ ಇದೆ ಎಂದುಯ ಕೆಲವರು ಹೇಳುತ್ತಿದ್ದಾರೆ.

ಅಟ್ಟದಿಂದ ಕೆಳಗೆ ಇಳಿದ ರಶ್ಮಿಕಾ

ಅಟ್ಟದಿಂದ ಕೆಳಗೆ ಇಳಿದ ರಶ್ಮಿಕಾ

ಇದ್ದಕ್ಕಿದ್ದಂತೆ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮೆಚ್ಚುಗೆಯ ಮಾತನಾಡಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ರಶ್ಮಿಕಾಳ ಈ ಬದಲಾವಣೆ ಕಂಡು ಹುಬ್ಬೇರಿಸಿದ್ದಾರೆ. ಕೆಟ್ಟ ಮೇಲೆ ಬುದ್ದಿ ಬಂತಾ? ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ. ಕೊನೆಗೂ ಬುದ್ಧಿ ಬಂತಲ್ಲ, ಇದು ಮೊದಲೇ ಈ ಬುದ್ಧಿ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಿದ್ದಾರೆ. ಟ್ರೋಲ್‌ಗಳಿಗೆ ಹೆದರಿ ರಶ್ಮಿಕಾ ಮೆತ್ತಗಾಗಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ರಶ್ಮಿಕಾ ವಿರುದ್ಧ ಭಾರೀ ಅಸಮಾಧಾನ

ರಶ್ಮಿಕಾ ವಿರುದ್ಧ ಭಾರೀ ಅಸಮಾಧಾನ

ರಶ್ಮಿಕಾ ಕನ್ನಡ ಸಿನಿಮಾಗಳನ್ನು ಬ್ಯಾನ್ ಮಾಡಬೇಕು. ಆಕೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಬಿಡಬಾರದು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಶೆಟ್ಟರ ಬಳಗದ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿ, ಯಾರೇ ಆದರೂ ಹತ್ತಿದ ಏಣಿ ಒದೆಯಬಾರದು ಎಂದಿದ್ದರು. ಸದ್ಯ ರಶ್ಮಿಕಾ ನಟನೆಯ ತಮಿಳು ಸಿನಿಮಾ 'ವಾರಿಸು' ಥಿಯೇಟರ್‌ಗಳಲ್ಲಿ ಸದ್ದು ಮಾಡ್ತಿದೆ. ಮುಂದೆ ಬಾಲಿವುಡ್‌ನ 'ಅನಿಮಲ್', ತೆಲುಗಿನ 'ಪುಷ್ಪ'-2 ಸೇರಿದಂತೆ ಹಲವು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

More from Filmibeat

English summary
Rishab on Rashmika controversy and troll. Rashmika positive comments on rishab Shetty- Rakshith Shetty Goes viral. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X