ತೆಲುಗು ಸಿನಿಮಾದಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ!

ಕನ್ನಡದ ನಟರು ಬೇರೆ ಭಾಷೆಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ ಅನಾದಿ ಕಾಲದಿಂದಲೂ ಈ ಸಂಪ್ರದಾಯ ನಡೆಯುತ್ತಾ ಬಂದಿದೆ. ಪ್ರತಿಭೆಗೆ ಸೂಕ್ತ ಅವಕಾಶ ಸಿಕ್ಕಾಗೆಲ್ಲ ಪರಭಾಷೆಗಳಲ್ಲಿಯೂ ಪ್ರತಿಭೆ ಪ್ರದರ್ಶಿಸುತ್ತಲೇ ಬಂದಿದ್ದಾರೆ ಕನ್ನಡದ ನಟ-ನಟಿಯರು.

Recommended Video

1st ಡೇ ರಾಬರ್ಟ್ ಟಿಕೆಟ್ ಸಿಗುತ್ತಾ ಅಂತ ಕಾಯ್ತಿದ್ದಾರಂತೆ ಶೆಟ್ರು | Kannada

ಇದೀಗ ಕನ್ನಡದ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ತೆಲುಗಿಗೆ ಪದಾರ್ಪಣೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.

ಬಾಲಿವುಡ್‌ನ ಸ್ಟಾರ್ ನಟಿ ತಾಪ್ಸಿ ಪನ್ನು ನಟಿಸಿರುವ ತೆಲುಗು ಸಿನಿಮಾ 'ಮಿಷನ್ ಇಂಪಾಸಿಬಲ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಅನ್ನು ನಟ ಮಹೇಶ್ ಬಾಬು ನಿನ್ನೆಯಷ್ಟೆ ಬಿಡುಗಡೆ ಮಾಡಿದ್ದು, ಟ್ರೇಲರ್‌ನ ಕೊನೆಯಲ್ಲಿ ರಿಷಬ್ ಶೆಟ್ಟಿಯ ದರ್ಶನವಾಗುತ್ತದೆ.

Rishab Shetty Acted In Telugu Movie Mission Imposible

ಸಿನಿಮಾದಲ್ಲಿ ಡಾನ್‌ ಮಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ರಿಷಬ್ ನಿರ್ವಹಿಸಿರುವ ಪಾತ್ರದ ಹೆಸರು ಖಲೀಲ್.

ಸಿನಿಮಾವು ಬೆಂಗಳೂರಿನಲ್ಲೂ ಚಿತ್ರೀಕರಣಗೊಂಡಿದ್ದು ಸಿನಿಮಾದಲ್ಲಿ 'ಕೆಜಿಎಫ್' ಸಿನಿಮಾದ ಉಲ್ಲೇಖವೂ ಇದೆ.

ರಘುಪತಿ, ರಾಘವ, ರಾಜಾರಾಂ ಹೆಸರಿನ ಮೂವರು ಮಕ್ಕಳು ದಾವೂದ್ ಇಬ್ರಾಹಿಂ ಅನ್ನು ಹುಡುಕಿಕೊಂಡು ಹುಡುಕಲು ಹೊರಡುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ಸಹ ಇದ್ದು ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

'ಏಜೆಂಟ್ ಸಾಯಿ ಶ್ರೀನಿವಾಸ ಆತ್ರೆಯ' ಸಿನಿಮಾ ನಿರ್ದೇಶನ ಮಾಡಿದ್ದ ಸ್ವರೂಪ್ ಆರ್‌ಎಸ್‌ಜೆ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ತಮ್ಮ ಈ ಹಿಂದಿನ ಸಿನಿಮಾದಂತೆ ಹಾಸ್ಯ ಹಾಗೂ ಥ್ರಿಲ್ಲರ್ ಅಂಶಗಳನ್ನು ಬೆರೆಸಿ ಸಿನಿಮಾ ಮಾಡಿರುವು ಟ್ರೇಲರ್‌ನಿಂದ ಗೊತ್ತಾಗುತ್ತಿದೆ.

ಇನ್ನು ನಟ ರಿಷಬ್ ಶೆಟ್ಟಿ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬೆಲ್ ಬಾಟಮ್ 2' ಸೇರಿದಂತೆ ಹಲವು ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಜೊತೆಗೆ 'ಕಾಂತಾರ', 'ರುದ್ರ ಪ್ರಯಾಗ' ಹಾಗೂ ಶಿವರಾಜ್ ಕುಮಾರ್ ಅವರಿಗಾಗಿ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ರಿಷಬ್.

More from Filmibeat

English summary
Rishab Shetty acted in Telugu movie Mission Imposible. Movie's trailer released yesterday by Mahesh Babu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X