'ರುದ್ರಪ್ರಯಾಗ'ಕ್ಕಾಗಿ ಮಳೆಯನ್ನು ಲೆಕ್ಕಿಸದೆ ದಾಂಡೇಲಿ ಕಾಡಿಗೆ ಹೊರಟ ರಿಷಬ್ ಶೆಟ್ಟಿ

Recommended Video

ರುದ್ರಪ್ರಯಾಗಕ್ಕಾಗಿ ದಾಂಡೇಲಿ ಕಾಡಿಗೆ ಹೋರಾಟ ರಿಷಬ್ ಶೆಟ್ಟಿ ಅಂಡ್ ಟೀಮ್

ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿ ಈಗ 'ರುದ್ರಪ್ರಯಾಗ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ರಿಷಬ್ ಈಗ ಮೊನ್ನೆ ಮೊನ್ನಯಷ್ಟೆ ಅನೌನ್ಸ್ ಮಾಡಿರುವ 'ರುದ್ರಪ್ರಯಾಗ' ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ.

ಈಗಾಗಲೆ ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಾಟದಲ್ಲಿ ನಿರತವಾಗಿದೆ ಚಿತ್ರತಂಡ. ಈಗಾಗಲೆ 'ರುದ್ರಪ್ರಯಾಗ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಪೋಸ್ಟರ್ ನಲ್ಲಿ ಬೆಡ್ಡ, ಗುಡ್ಡ, ಚಿರತೆ, ನದಿ, ಕಾಡು ಜೊತೆಗೆ ಆಧುನಿಕ ಪಟ್ಟಣ ಎಲ್ಲವು ಇವೆ. ಭಾರಿ ಕುತೂಹಲ ಮೂಡಿಸಿರುವ ಈ ಪೋಸ್ಟರ್ ನೋಡುತ್ತಿದ್ರೆ, ಬಹುತೇಕ ಭಾಗ ಕಾಡಿನ ಕಥೆಯೆ ಇರುವ ಸಾಧ್ಯತೆ ಇದೆ.

Rishab Shetty and his team searching for location in western ghat for Rudraprayaga film

ಹಾಗಾಗಿ ರಿಷಬ್ ಮತ್ತು ತಂಡ ಲೊಕೇಶನ್ ಹಂಟ್ ಗಾಗಿ ಕಾಡಿನ ಕಡೆ ಪಯಣ ಬಳೆಸಿದೆ. ಪಶ್ಚಿಮ ಘಟ್ಟದ ಸುಂದರ ತಾಣಗಳಲ್ಲಿ ಸುತ್ತಾಡುತ್ತಿದೆ 'ರುದ್ರಪ್ರಯಾಗ' ಚಿತ್ರತಂಡ. ಕಾಡಿನಲ್ಲಿ ಮಳೆಯ ಜೊತೆಗೆ ಬಿಸಿ ಬಿಸಿ ಕಾಫಿ ಸವಿಯುತ್ತ ತಂಡದ ಜೊತೆ ಟ್ರಿಪ್ ಎಂಜಾಯ್ ಮಾಡುತ್ತ ಚಿತ್ರಕ್ಕೆ ಯಾವ ಲೊಕೇಶನ್ ಪಕ್ಕಾ ಸೂಟ್ ಆಗುತ್ತೆ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ ರಿಷಬ್.

Rishab Shetty and his team searching for location in western ghat for Rudraprayaga film

'ರುದ್ರಪ್ರಯಾಗ' ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಜಯಣ್ಣ-ಬೋಗೇಂದ್ರ ಬಂಡವಾಳ ಹೂಡುತ್ತಿದ್ದಾರೆ. ಇಷ್ಟು ಬಿಟ್ಟರೆ ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿಲ್ಲ ರಿಷಬ್. 'ರುದ್ರಪ್ರಯಾಗ' ಚಿತ್ರದ ಜೊತೆಗೆ ರಿಷಬ್ ಶೆಟ್ಟಿ 'ಕಥಾ ಸಂಗಮ', 'ನಾಥೋರಾಮ್', 'ಅಂಟಗೋನಿ ಶೆಟ್ಟಿ' ಚಿತ್ರದಲ್ಲು ತೊಡಗಿಕೊಂಡಿದ್ದಾರೆ. ಸದ್ಯ 'ರುದ್ರಪ್ರಯಾಗ' ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಿಷಬ್ ಸಧ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲಿದ್ದಾರೆ.

More from Filmibeat

English summary
Kannada director Rishab Shetty and his team searching for location in western ghat for Rudraprayaga film. Rudraprayaga is directed by Rishab Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X