twitter
    For Quick Alerts
    ALLOW NOTIFICATIONS  
    For Daily Alerts

    'ನಿನ್ನ ಕೈ ಹಿಡಿದು ಹೊಸದೊಂದು ಮೈಲಿಗಲ್ಲನ್ನು ತಲುಪಿದ್ದೇನೆ': ಪತ್ನಿಗೆ ಶುಭಕೋರಿದ ರಿಷಭ್ ಶೆಟ್ಟಿ

    |

    ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ದಂಪತಿ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ದಾಂಪತ್ಯದಲ್ಲಿ ನಾಲ್ಕು ವರ್ಷ (ವಿವಾಹ ದಿನಾಂಕ: 10 ಫೆಬ್ರವರಿ 2017) ಪೂರೈಸಿರುವ ರಿಷಬ್ ಶೆಟ್ಟಿ ಇನ್ಸ್ಟಾಗ್ರಾಂ ಮೂಲಕ ತನ್ನ ಪತ್ನಿಗೆ ಶುಭಕೋರಿದ್ದಾರೆ.

    ಪತ್ನಿ ಪ್ರಗತಿ ಹಾಗೂ ಮಗನ ಜೊತೆ ಸೇರಿ ಕೇಕ್ ಕತ್ತರಿಸಿರುವ ರಿಷಬ್ ಶೆಟ್ಟಿ ನಂತರ ಆ ಫೋಟೋಗಳನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಪತ್ನಿಯ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

    ತೆಲುಗಿಗೆ ಕಾಲಿಟ್ಟ ರಿಷಭ್ ಶೆಟ್ಟಿ: 'ಮಿಷನ್ ಇಂಪಾಸಿಬಲ್' ಚಿತ್ರದಲ್ಲಿ ನಟನೆತೆಲುಗಿಗೆ ಕಾಲಿಟ್ಟ ರಿಷಭ್ ಶೆಟ್ಟಿ: 'ಮಿಷನ್ ಇಂಪಾಸಿಬಲ್' ಚಿತ್ರದಲ್ಲಿ ನಟನೆ

    ''ನಿನ್ನ ಕೈ ಹಿಡಿದು ಹೊಸದೊಂದು ಮೈಲಿಗಲ್ಲನ್ನು ತಲುಪಿದ್ದೇನೆ. ಹಿಂತಿರುಗಿ ನೋಡಿದರೆ, ಕಾಣುವುದೆಲ್ಲಾ, ಕಷ್ಟ ಮರೆಸುವ ನಿನ್ನ ಸ್ನಿಗ್ಧತೆ, ನನ್ನನ್ನೂ ಮಗುವಾಗಿಸಿಬಿಡುವ ಮುಗ್ಧತೆ, ಮಡದಿಯಾಗಿ, ತಾಯಿಯಾಗಿ ಬದುಕಿನೆಡೆಗಿರುವ ನಿನ್ನ ಬದ್ಧತೆ. ಇದಕ್ಕಿಂತ ಮತ್ತೇನು ಬೇಕು? I am lucky to have you in my life. '' ಎಂದು ನಿರ್ದೇಶಕ ರಿಷಬ್ ಶೆಟ್ಟಿ ಖುಷಿ ಹಂಚಿಕೊಂಡಿದ್ದಾರೆ.

    Rishab Shetty and Pragathi Celebrated Their Wedding Anniversary

    ''ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದಿದ್ದಾನೆ ಸರ್ವಜ್ಞ. ಸದ್ಯಕ್ಕೆ ನಾವು ಕಿಚ್ಚು ಗಿಚ್ಚು ಹಚ್ಚದೇ ಈ ಸಂಭ್ರಮದಲ್ಲೊಂದು ಒಲವಿನ ದೀಪ ಹಚ್ಚೋಣಾ ಬಾ. ಹ್ಯಾಪಿ ಆನಿವರ್ಸರಿ'' ಎಂದು ತಮ್ಮ ಪತ್ನಿಗೆ ವಿಶ್ ಮಾಡಿದ್ದಾರೆ.

    Rishab Shetty and Pragathi Celebrated Their Wedding Anniversary

    ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ

    ರಿಷಬ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಬಂದ್ರೆ ಹೀರೋ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಹರಿಕಥೆ ಅಲ್ಲ ಗಿರಿಕಥೆ, ಮಹಾನಿಯರೇ ಮಹಿಳೆಯರೇ, ಕೌ ಬಾಯ್ ಕೃಷ್ಣ, ಗರುಡ ಗಮನ ವೃಷಭ ವಾಹನ ಸೇರಿದಂತೆ ಹಲವು ಪ್ರಾಜೆಕ್ಟ್‌ ಕೈಯಲ್ಲಿಟ್ಟುಕೊಂಡಿದ್ದಾರೆ. ತೆಲುಗಿನ 'ಮಿಷನ್ ಇಂಪಾಸಿಬಲ್' ಚಿತ್ರದಲ್ಲೂ ನಟಿಸುತ್ತಿದ್ದಾರೆ.

    Recommended Video

    ಸಿಲ್ಲಿ ಲಲ್ಲಿಯ NML ಪಾತ್ರದ ನಟಿ ನಮಿತಾ ರಾವ್ ಏನ್ ಮಾಡ್ತಿದ್ದಾರೆ ಗೊತ್ತಾ??

    English summary
    Kannada actor-Director Rishab Shetty and Pragathi celebrated their Wedding Anniversary.
    Wednesday, February 10, 2021, 16:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X