ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದನು ಪುಟಾಣಿ ರಣ್ವಿತ್ ಶೆಟ್ಟಿ

ತಮ್ಮ ಮಕ್ಕಳು ಅಂಬೆಗಾಲಿಡುವುದನ್ನು ನೋಡುವುದೇ ಒಂದು ಸಂಭ್ರಮ. ನಂತರ ಅಂಬೆಗಾಲಿನಿಂದ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವುದು ಪ್ರತಿಯೊಬ್ಬ ತಂದೆ-ತಾಯಿಗೂ ಅವಿಸ್ಮರಣೀಯ ದೃಶ್ಯ ಎನ್ನಬಹುದು.

ನಟ-ನಿರ್ದೇಶಕ ರಿಷಬ್ ಶೆಟ್ಟಿಯ ಮಗ ರಣ್ವಿತ್ ಶೆಟ್ಟಿ ಅಂಬೆಗಾಲಿನಿಂದ ಎದ್ದು ನಿಂತು ನಡೆಯಲು ಮುಂದಾಗಿದ್ದಾನೆ. ಈ ಸಂತಸವನ್ನು ರಿಷಬ್ ಮತ್ತು ಪತ್ನಿ ಪ್ರಗತಿ ಶೆಟ್ಟಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ರಣ್ವಿತ್ ಶೆಟ್ಟಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುತ್ತಿರುವ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ರಿಷಬ್ ಶೆಟ್ಟಿ ''ಮುಗ್ಧತೆಯೊಂದು ಅಂಬೆಗಾಲಿನಿಂದ ಪುಟ್ಟಪುಟ್ಟ ಹೆಜ್ಜೆಗಳಾಗಿ ಬಡ್ತಿ ಪಡೆಯುತ್ತೆ. ಮಮತೆಯೊಂದು ಅಪ್ಪಿಕೊಂಡು ಮುದದಿಂದ ಮುದ್ದಿಸುತ್ತೆ. ಅಕ್ಕರೆಯೊಂದು ಅದನ್ನು ಹೆಮ್ಮೆಯಿಂದ ಹೆಗಲಿಗೇರಿಸುತ್ತೆ. ಇದೆಲ್ಲದರ ಸುತ್ತಲೂ ಪ್ರೀತಿಯೊಂದು ಗೂಡು ಕಟ್ಟಿ ನಸುನಗುತ್ತೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Rishab shetty and Pragathi shetty Shared their Son Photos

2017 ಫೆಬ್ರವರಿ 9 ರಂದು ಮನೆಯವರು ನಿಶ್ಚಿಯಿಸಿದ ಪ್ರಗತಿ ಶೆಟ್ಟಿ ಅವರನ್ನು ರಿಷಬ್ ಶೆಟ್ಟಿ ವಿವಾಹವಾದರು. 2019ರ ಏಪ್ರಿಲ್‌ನಲ್ಲಿ ಈ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದರು. ನವೆಂಬರ್ ತಿಂಗಳಲ್ಲಿ ರಣ್ವಿತ್ ಶೆಟ್ಟಿ ಎಂದು ನಾಮಕರಣ ಮಾಡಿದ್ದರು.

ಸಿನಿಮಾ ವಿಚಾರಕ್ಕೆ ಬಂದ್ರೆ ರಿಷಬ್ ಶೆಟ್ಟಿ ನಟನೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ನಾತುರಾಮ್, ಮಹನಿಯರೇ ಮಹಿಳೆಯರೇ, ಕೌಬಾಯ್ ಕೃಷ್ಣ, ಹರಿಕಥೆ ಅಲ್ಲ ಗಿಣಿಕಥೆ, ಬೆಲ್‌ಬಾಟಂ 2 ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Kannada actor-director Rishab shetty and wife Pragathi shetty shared their son photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X