ಹೆಲ್ಮೆಟ್ ಇಲ್ಲದೇ ಬೈಕ್ ಏರಿ ಶಿವ - ಲೀಲಾ ಸುತ್ತಾಟ!: ಟ್ರಾಫಿಕ್ ಪೊಲೀಸ್ ದಂಡ ಹಾಕಿದ್ದಕ್ಕೆ ಬಿದ್ದು ಬಿದ್ದು ನಕ್ಕ ರಿಷಬ್ ಶೆಟ್ಟಿ!

ವಿಶ್ವದಾದ್ಯಂತ 'ಕಾಂತಾರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ರಿಷಬ್ ಶೆಟ್ಟಿಗೆ ಹ್ಯಾಟ್ಸಾಪ್ ಹೇಳ್ತಿದ್ದಾರೆ. ನಿಧಾನವಾಗಿ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಕೆಲಸ ಶುರುವಾಗಿದೆ. ಇನ್ನು 'ಕಾಂತಾರ' ಚಿತ್ರದ ಪೋಸ್ಟರ್‌ಗಳು, ಟೀಸರ್, ಟ್ರೈಲರ್ ಯಾವ ರೀತಿ ಸದ್ದು ಮಾಡ್ತಿದೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಇಂತದ್ದೇ ಪೋಸ್ಟರ್‌ವೊಂದರ ಫನ್ನಿ ಮೀಮ್ ರೆಡಿ ಮಾಡಿ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಈಗ ಸಖತ್ ವೈರಲ್ ಆಗಿದೆ.

ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ಶಿವ ಆಗಿ 'ಕಾಂತಾರ' ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಇನ್ನು ಶಿವನ ಪ್ರೇಯಸಿ ಲೀಲಾ ಪಾತ್ರದಲ್ಲಿ ನಟಿ ಸಪ್ತಮಿ ಗೌಡ ಕೂಡ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ. ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಸಪ್ತಮಿ ನಟನೆ ಪ್ರೇಕ್ಷಕರ ಮನಗೆದ್ದಿದೆ. ಇವರಿಬ್ಬರ ಜೋಡಿ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು 'ಸಿಂಗಾರ ಸಿರಿಯೇ' ಇವರಿಬ್ಬರ ಕೆಮೆಸ್ಟ್ರಿ ಸಖತ್‌ ಆಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ 50 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಕರಾವಳಿಯ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ರಿಷಬ್ ಶೆಟ್ಟಿ ಅಂಡ್ ಟೀಮ್ ಸಕ್ಸಸ್ ಕಂಡಿದೆ.

Rishab Shetty And Sapthami gowda Starrer Kantara Poster triggers funny meme

ಕನ್ನಡ ಚಿತ್ರರಂಗದಲ್ಲಿ ಕಾನಿ ಸ್ಟುಡಿಯೋ ಸಂಸ್ಥೆ ವಿಭಿನ್ನ ಪೋಸ್ಟರ್‌ಗಳನ್ನು ಡಿಸೈನ್ ಮಾಡುವ ಮೂಲಕ ಸದ್ದು ಮಾಡ್ತಿದೆ. 'ಕಾಂತಾರ' ಸಿನಿಮಾ ಪೋಸ್ಟರ್‌ಗಳನ್ನು ನೋಡಿದವರು ಹುಬ್ಬೇರಿಸಿದ್ದಾರೆ. ರಿಷಬ್ ಶೆಟ್ಟಿ ಕಲ್ಪನೆಗೆ ತಕ್ಕಂತೆ ಭಿನ್ನ ವಿಭಿನ್ನ ಪೋಸ್ಟರ್‌ಗಳನ್ನು ಸಂಸ್ಥೆ ಡಿಸೈನ್ ಮಾಡಿ ಕೊಟ್ಟಿದೆ. ಚಿತ್ರದಲ್ಲಿ ಶಿವ ಹಾಗೂ ಲೀಲಾ ಆರ್‌ಎಕ್ಸ್ ಬೈಕ್ ಏರಿ ಸುತ್ತಾಡುವ ಸನ್ನಿವೇಶಗಳಿದೆ. ಅದಕ್ಕೆ ಸಂಬಂಧಿಸಿದ ಪೋಸ್ಟರ್‌ಗಳು ಸಖತ್ ವೈರಲ್ ಆಗಿದೆ. ಅಂಥದ್ದೇ ಒಂದು ಪೋಸ್ಟರ್‌ನ ಮೀಮ್ ಕ್ರಿಯೇಟ್ ಮಾಡಿ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ.

ಶಿವ ಹಾಗೂ ಲೀಲಾ ಓಡಾಡುವ ಬೈಕ್‌ನ ಅಡ್ಡಗಟ್ಟಿದ ಸಂಚಾರಿ ಪೊಲೀಸರು ನಿಮಯ ಉಲ್ಲಂಘಿಸಿದ್ದಕ್ಕೆ ದಂಡ ಹಾಕುತ್ತಿರುವಂತೆ ಪೋಸ್ಟರ್‌ ಡಿಸೈನ್ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಲಾಯಿಸಿದರೆ ಪೊಲೀಸರು ದಂಡ ಹಾಕುವುದು ಗೊತ್ತೇಯಿದೆ. ಇನ್ನು ಈ ಪೋಸ್ಟರ್ ಮಾಡಿದ ವ್ಯಕ್ತಿಯ ಕ್ರಿಯೇಟಿವಿಟಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವತಃ ನಿರ್ದೇಶಕ, ನಟ ರಿಷಬ್ ಶೆಟ್ಟಿ ಈ ಮೀಮ್ ಪೋಸ್ಟರ್ ನೋಡಿ ಪ್ರತಿಕ್ರಿಯಿಸಿದ್ದು, ಬಿದ್ದು ಬಿದ್ದು ನಗುವಂತಹ ಎಮೋಜಿ ಹಾಕಿದ್ದಾರೆ. ನಟಿ ಸಪ್ತಮಿ ಗೌಡ ಕೂಡ ಈ ಪೋಸ್ಟ್‌ಗೆ ನಗುವ ಎಮೋಜಿ ಹಾಕಿ ಧನ್ಯವಾದ ತಿಳಿಸಿದ್ದಾರೆ.

Rishab Shetty And Sapthami gowda Starrer Kantara Poster triggers funny meme

'ಕಾಂತಾರ' ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಬಹುತೇಕ ಕಡೆಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸೆಕೆಂಡ್ ವೀಕೆಂಡ್‌ನಲ್ಲಿ ಸಿನಿಮಾ ಮತ್ತಷ್ಟು ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುವ ಸುಳಿವು ಸಿಗ್ತಿದೆ. ಶೀಘ್ರದಲ್ಲೇ ಹಿಂದಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವ ಕೆಲಸ ಶುರುವಾಗಿದೆ. ಬಾಲಿವುಡ್‌ನ AA ಫಿಲ್ಮ್ಸ್ ಡಿಸ್ಟ್ರಿಬ್ಯೂಷನ್ ಸಂಸ್ಥೆ ಹಿಂದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಂಡಿದೆ. ಹಾಗಾಗಿ ಬಹಳ ದೊಡ್ಡಮಟ್ಟದಲ್ಲಿ ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಬಿಡುಗಡೆಯಾಗೋದು ಪಕ್ಕಾ ಆಗಿದೆ..

More from Filmibeat

English summary
Rishab Shetty and sapthami gowda Starrer Kantara Poster triggers funny meme. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X