For Quick Alerts
  ALLOW NOTIFICATIONS  
  For Daily Alerts

  'ಅಂಟಗೋನಿ ಶೆಟ್ಟಿ'ಯಾಗಿ ಬದಲಾದ ನಿರ್ದೇಶಕ 'ರಿಷಬ್ ಶೆಟ್ಟಿ'

  |

  ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಈಗ 'ಅಂಟಗೋನಿ ಶೆಟ್ಟಿ'ಯಾಗಿ ಬದಲಾಗಿದ್ದಾರೆ. ಇಷ್ಟು ದಿನಗಳ ಕಾಲ ಡಿಟೆಕ್ಟಿವ್ ದಿವಾಕರನಾಗಿ ಕನ್ನಡ ಚಿತ್ರಪ್ರಿಯರ ಮನದಲ್ಲಿ ನೆಲೆಸಿದ್ದ ರಿಷಬ್ ಶೆಟ್ಟಿ ಈಗ ದಿಢೀರನೆ 'ಅಂಟಗೋನಿ ಶೆಟ್ಟಿ' ಆಗಿದ್ದಾರೆ. ಅಚ್ಚರಿ ಪಡಬೇಡಿ ಇದು ರಿಷಬ್ ಅಭಿನಯದ ಹೊಸ ಸಿನಿಮಾ.

  ನಿರ್ದೇಶನ ಮತ್ತು ನಟನೆ ಎರಡರಲ್ಲು ಬ್ಯುಸಿ ಇರುವ ರಿಷಬ್ ಶೆಟ್ಟಿ ಈಗ 'ಅಂಟಗೋನಿ ಶೆಟ್ಟಿ' ಎನ್ನುವ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರದಲ್ಲಿ ರಿಷಬ್ ನಾಯಕನಾಗಿ ಮಿಂಚಲಿದ್ದಾರೆ. ಈಗಾಗಲೆ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಟೈಟಲ್ ಕೇಳಿದ್ರೆನೆ ಏನಪ್ಪ ಇದು ವಿಚಿತ್ರವಾಗಿದೆ ಅಂತ ತಲೆಕೆಡಿಕೊಳ್ಳುವಂತೆ ಮಾಡಿದೆ. ಟೈಟಲ್ ಮಾತ್ರವಲ್ಲ ಸಿನಿಮಾ ಕೂಡ ಅಷ್ಟೆ ವಿಭಿನ್ನವಾಗಿರಲಿದೆಯಂತೆ. 'ಅಂಟಗೋನಿ ಶೆಟ್ಟಿ' ಕನ್ನಡ ಚಿತ್ರರಂಗಕ್ಕೆ ಹೊಸ ರೀತಿಯ ಸಿನಿಮಾ ಆಗಲಿದೆ ಎನ್ನವುದು ಚಿತ್ರತಂಡದ ಮಾತು.

  ಕಲೆ-ಸಂಸ್ಕೃತಿಯಿಂದ ಕಂಗೊಳಿಸುತ್ತಿದೆ ರಿಷಬ್ ದತ್ತು ಪಡೆದ ಸರ್ಕಾರಿ ಶಾಲೆ

  ಅಂದ್ಹಾಗೆ 'ಅಂಟಗೋನಿ ಶೆಟ್ಟಿ' ಸಮರ್ಥ್ ಕಡ್ಕೋಳ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ರಿಷಬ್ ಶೆಟ್ಟಿ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾ 2004 ರಿಂದ 2019ರ ವರೆಗೆ ನಡೆಯುವ ಕತೆಯಾಗಿದೆಯಂತೆ. 'ಬೆಲ್ ಬಾಟಂ' ಸಿನಿಮಾದಲ್ಲಿ ಡಿಟೆಕ್ಟಿವ್ ದಿವಾಕರನ ಪಾತ್ರ ನೋಡಿ ಫಿದಾ ಆದ ನಿರ್ದೇಶಕ ಸಮರ್ಥ್ 'ಅಂಟಗೋನಿ ಶೆಟ್ಟಿ' ಚಿತ್ರಕ್ಕೆ ರಿಷಬ್ ಶೆಟ್ಟಿ ಪಕ್ಕಾ ಸೂಟ್ ಆಗ್ತಾರೆ ಎಂದು ಅವರನ್ನೆ ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಷಕ ಸಮರ್ಥ್.

  ಈಗಾಗಲೆ ಟೈಟಲ್ ಮೂಲಕ ಕುತೂಹಲ ಮೂಡಿಸಿರುವ 'ಅಂಟಗೋನಿ ಶೆಟ್ಟಿ' ಮುಂದಿನ ವರ್ಷ ಸೆಟ್ಟೇರಲಿದೆ. 20120 ಜನವರಿಯಲ್ಲಿ ಸಿನಿಮಾ ಪ್ರಾರಂಭವಾಗಲಿದೆಯಂತೆ. ಸದ್ಯ ರಿಷಬ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆ ಪ್ರಾಜೆಕ್ಟ್ ಎಲ್ಲಾ ಮುಗಿದ ಬಳಿಕ 'ಅಂಟಗೋನಿ ಶೆಟ್ಟಿ' ಆಗಲಿದ್ದಾರೆ ರಿಷಬ್.

  English summary
  Kannada director and actor Rishab Shetty has announced a new film title 'Antagoni Shetty'. The makers have released first look poster. 'Antagoni shetty' is directed by Samarth Kadkol.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X